/newsfirstlive-kannada/media/post_attachments/wp-content/uploads/2025/03/MODI-VISIT-RSS-HEADQUARTERS.jpg)
ಗುಡಿ ಪಡ್ವಾ ಪ್ರಯುಕ್ತವಾಗಿ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಗ್ಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಚೇರಿಗೆ ಭೇಟಿ ನೀಡಿಲಿದ್ದಾರೆ. ಇದೇ ಸಂದರ್ಭದಲ್ಲಿ ಆರ್ಎಸ್ಎಸ್ ಸಂಸ್ಥಾಪಕ ಕೇಶವ್ ಬಲಿರಾಮ್ ಹಡ್ಗೆವಾರ್ ಮತ್ತು ಆರ್ಎಸ್ಎಸ್ನ ಎರಡನೇ ಸರಸಂಘಚಾಲಕರಾದ ಗುರೂಜಿ ಎಂ ಎಸ್ ಗೋಳವಲ್ಕರ್ ಅವರ ಸ್ಮೃತಿ ಮಂದಿರಕ್ಕೆ ತೆರಳಿ ಶ್ರದ್ಧಾಂಜಲಿಯನ್ನು ಕೂಡ ಸಲ್ಲಿಸಲಿದ್ದಾರೆ.
ಇದನ್ನೂ ಓದಿ:ವಿಶ್ವದ ಅತಿ ಎತ್ತರದ ರೈಲ್ವೆ ಬ್ರಿಡ್ಜ್.. ಕಾಶ್ಮೀರಕ್ಕೆ ನೇರ ರೈಲು ಮಾರ್ಗ ಉದ್ಘಾಟನೆ ಯಾವಾಗ; ಏನಿದರ ವಿಶೇಷತೆಗಳು?
2014ರಲ್ಲಿ ಮೊದಲ ಬಾರಿ ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ನರೇಂದ್ರ ಮೋದಿಯವರು ಆರ್ಎಸ್ಎಸ್ ಕಚೇರಿಗೆ ಭೇಟಿ ನೀಡುತ್ತಿದ್ದಾರೆ. ಈ ಹಿಂದೆ ಸೆಪ್ಟಂಬರ್ 16, 2022ರಲ್ಲಿ ಮೋದಿ ಗುಜರಾತ್ನ ಪ್ರಧಾನ ಮಂತ್ರಿಯಾಗಿದ್ದಾಗ ಸ್ಮೃತಿ ಮಂದಿರಕ್ಕೆ ಭೇಟಿ ನೀಡಿದ್ದರು. ಆರ್ಎಸ್ಎಸ್ನ ಮುಖ್ಯಸ್ಥ ಕೆ ಎಸ್ ಸುದರ್ಶನ್ ಅವರ ಅಂತಿಮ ಪ್ರಣಾಮ ನೀಡಲು ಪ್ರಧಾನಿ ನರೇಂದ್ರ ಮೋದಿ ನಾಗ್ಪುರದ ಅರ್ಎಸ್ಎಸ್ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದರು. ಅದಾದ ಬಳಿಕ ಇದೇ ಮೊದಲ ಬಾರಿ ಪಿಎಂ ನರೇಂದ್ರ ಮೋದಿ ನಾಗ್ಪುರಕ್ಕೆ ತೆರಳುತ್ತಿದ್ದಾರೆ.
ಇನ್ನೂ ಇದೇ ವರ್ಷ ಆರ್ಎಸ್ಎಸ್ ಸ್ಥಾಪನೆಯಾಗಿ ನೂರು ವರ್ಷಗಳು ತುಂಬುತ್ತವೆ. ಅದರ ಸಂಭ್ರಮಾಚರಣೆಗೂ ಕೂಡ ಮೋದಿ ಹೋಗಲಿದ್ದಾರೆ ಎಂಬ ಮಾಹಿತಿಗಳು ದೊರಕಿವೆ. ಭೇಟಿಯ ವೇಳೆ ಅವರು ಮಾಧವ ನೇತ್ರಾಲಯ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಸದ್ಯ ಮಹಾರಾಷ್ಟ್ರದ ನಾಗ್ಪುರಕ್ಕೆ ಬರುವ ಪ್ರಧಾನಿ ಮೋದಿಯವರು ಅಲ್ಲಿಂದ ನೇರವಾಗಿ ರೇಶಿಮ್ಭಾಗ್ಗೆ ಪ್ರಯಾಣ ಮಾಡಿ ದೀಕ್ಷಾಭೂಮಿಯಲ್ಲಿ solar explosives facility ಬಗ್ಗೆ ಪರಿಶೀಲನೆ ಮಾಡಲಿದ್ದಾರೆ.
ಇದನ್ನೂ ಓದಿ:ರಾಮನವಮಿ ಆಚರಣೆಗೆ ಸಕಲ ರೀತಿಯಲ್ಲಿ ಸಜ್ಜಾದ ಅಯೋಧ್ಯೆ.. ಬೇಸಿಗೆ ನೀಗಿಸಲು ಭಕ್ತರಿಗೆ ಮಾಡಲಾಗಿರುವ ವ್ಯವಸ್ಥೆ ಏನು?
ಗುಡಿ ಪಡ್ವಾ ಅಂದ್ರೆ ಯುಗಾದಿ ಸಂಭ್ರಮದಂದು ಪ್ರಧಾನಿ ನರೇಂದ್ರ ಮೋದಿ ನಾಗ್ಪುರಕ್ಕೆ ಭೇಟಿ ನೀಡುತ್ತಿರುವ ಸಂದರ್ಭದಲ್ಲಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸುವುದಕ್ಕೆ ಬಿಜೆಪಿ ವಿಶೇಷ ರೀತಿಯ ತಯಾರಿ ಮಾಡಿಕೊಂಡಿದೆ. ನಗರದ 30 ಕಿಲೋ ಮೀಟರ್ ಮಾರ್ಗವನ್ನು ಹಲವು ರೀತಿಯಲ್ಲಿ ಸಿಂಗಾರಗೊಳಿಸುವ ಕಾರ್ಯವನ್ನು ಬಿಜೆಪಿ ಮಾಡಲಿದೆ. ಇನ್ನು ಭದ್ರತೆಗಾಗಿ 4 ಸಾವಿರ ಪೊಲೀಸರು ಹಾಗೂ 1500 ಹೋಮ್ ಗಾರ್ಡ್ಸ್ ಜೊತೆಗೆ 150 ಪೊಲೀಸ್ ಹಿರಿಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ