newsfirstkannada.com

ಮೋದಿ ಇಂದು ಬೆಂಗಳೂರಿಗೆ.. ದೇವನಹಳ್ಳಿಗೆ ಬರಲಿರುವ ಪ್ರಧಾನಿ.. ವಾಹನ ಸವಾರರಿಗೆ ಮಾರ್ಗ ಬದಲಾವಣೆ ಹೀಗಿದೆ

Share :

Published January 19, 2024 at 7:41am

Update January 19, 2024 at 7:42am

  ಬೋಯಿಂಗ್ ಇಂಡಿಯಾ ಸೆಂಟರ್ ಉದ್ಘಾಟಿಸಲಿರುವ ಮೋದಿ

  ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಂಚಾರ ಬದಲಾವಣೆ

  ಕಲಬುರಗಿಗೆ ಆಗಮಿಸಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ ಪ್ರಧಾನಿ

ಪ್ರಧಾನಿ ಮೋದಿ ಇವತ್ತು ಬೆಂಗಳೂರಿಗೆ ಆಗಮಿಸ್ತಿದ್ದಾರೆ. ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್‌ನಲ್ಲಿ ಹೊಸ ಅತ್ಯಾಧುನಿಕ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರ ಕ್ಯಾಂಪಸನ್ನ ಉದ್ಘಾಟಿಸಲಿದ್ದಾರೆ. ಇನ್ನು ಮೋದಿ ಆಗಮನ ಹಿನ್ನೆಲೆ ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬೆಂಗಳೂರಿನ ಕೆಲವು ಭಾಗಗಳಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ.

ಅಯೋಧ್ಯೆಯಲ್ಲಿನ ರಾಮನ ಭಜನೆ, ದೇಶದ ದಶ ದಿಕ್ಕಿಗೂ ಹಬ್ಬಿದೆ. ರಾಘವನ ಮೂರ್ತಿ ಪ್ರತಿಷ್ಠಾಪನೆಗಾಗಿ ಪ್ರಧಾನಿ ನರೇಂದ್ರ ಮೋದಿ 11 ದಿನಗಳ ವ್ರತ ಕೈಗೊಂಡಿದ್ದಾರೆ. ಈ ವ್ರತದ ಜೊತೆಗೆ ರಾಮ ನಡೆದಾಡಿದ ಪುಣ್ಯಕ್ಷೇತ್ರಗಳ ದರ್ಶನ ಮಾಡ್ತಿದ್ದಾರೆ. ಜೊತೆಗೆ ಕೆಲ ಅಭಿವೃದ್ಧಿ ಕಾರ್ಯಗಳಿಗೂ ನಮೋ ಚಾಲನೆ ಕೊಡ್ತಿದ್ದಾರೆ.. ಅದರ ಭಾಗವಾಗಿ ಇವತ್ತು ಪ್ರಧಾನಿ ಮೋದಿ, ರಾಜ್ಯಕ್ಕೆ ಬರ್ತಿದ್ದಾರೆ.

ಬೋಯಿಂಗ್ ಇಂಡಿಯಾ ಸೆಂಟರ್ ಉದ್ಘಾಟನೆ!

ಹೌದು ಪ್ರಧಾನಿ ಮೋದಿ ಕಳೆದ ಕೆಲ ದಿನದಿಂದ ದಕ್ಷಿಣದ ದಂಡಯಾತ್ರೆಯಲ್ಲಿದ್ದಾರೆ. ಇವತ್ತು ಮಧ್ಯಾಹ್ನ ಬೆಂಗಳೂರಿಗೆ ಆಗಮಿಸ್ತಿದ್ದಾರೆ.. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಏರೋಸ್ಪೇಸ್ ಪಾರ್ಕ್‍ನಲ್ಲಿ ಹೊಸ ಅತ್ಯಾಧುನಿಕ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರ ಕ್ಯಾಂಪಸ್‍ನ್ನ ಉದ್ಘಾಟಿಸಲಿದ್ದಾರೆ.

ಇಂದು ರಾಜ್ಯಕ್ಕೆ ಮೋದಿ

ಬೆಳಿಗ್ಗೆ 7.35ಕ್ಕೆ ದೆಹಲಿಯಿಂದ ಕಲಬುರಗಿ ಏರ್​​ಪೋರ್ಟ್​ಗೆ ಬಂದಿಳಿಯುವ ಮೋದಿ, 9.35ಕ್ಕೆ ಕಲಬುರಗಿಯಿಂದ ಸೋಲಾಪುರ್​ಗೆ ಹೆಲಿಕಾಪ್ಟರ್​ನಲ್ಲಿ ತೆರಳ್ತಾರೆ. 12.10ಕ್ಕೆ ಸೋಲಾಪುರ್ ಕಾರ್ಯಕ್ರಮ ಮುಗಿಸಿ ಕಲಬುರಗಿಗೆ ಆಗಮಿಸಿ 01.05ಕ್ಕೆ ಬೆಂಗಳೂರಿನತ್ತ ಪ್ರಯಾಣ ಬೆಳಸಲಿದ್ದಾರೆ. ನಂತ್ರ 02.10ಕ್ಕೆ ರಾಜಧಾನಿಗೆ ಬಂದಿಳಿಯುವ ನಮೋ, 02.45 ರಿಂದ 03.45ರ ವರೆಗೆ ಬೋಯಿಂಗ್ ಇಂಡಿಯಾ ಇಂಜಿನಿಯರಿಂಗ್ & ಟೆಕ್ನಾಲಜಿ ಸೆಂಟರ್ ಉದ್ಘಾಟನೆ ಮಾಡಲಿದ್ದಾರೆ. ಬೋಯಿಂಗ್ ಸುಕನ್ಯಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.. ನಂತ್ರ 4 ಗಂಟೆಗೆ ಚೆನ್ನೈಗೆ ತೆರಳೋರಿದ್ದಾರೆ.

ಇದು ಅಮೆರಿಕ ಹೊರಗೆ ಬೋಯಿಂಗ್‍ನ ಅತಿದೊಡ್ಡ ಹೂಡಿಕೆಯಾಗಿದೆ.. 1,600 ಕೋಟಿ ರೂ.ಗಳ ಹೂಡಿಕೆಯೊಂದಿಗೆ ನಿರ್ಮಿಸಲಾದ 43 ಎಕರೆ ಕ್ಯಾಂಪಸ್ ನಿರ್ಮಾಣ ಆಗಿದೆ. ಅಂದ್ಹಾಗೆ, ದೇಶದಲ್ಲಿ ಬೆಳೆಯುತ್ತಿರುವ ವಾಯುಯಾನ ಕ್ಷೇತ್ರಕ್ಕೆ ಹೆಣ್ಣು ಮಕ್ಕಳ ಪ್ರವೇಶವನ್ನ ಬೆಂಬಲಿಸುವ ಗುರಿಯನ್ನ ಈ ಯೋಜನೆ ಹೊಂದಿದೆ. ಹೆಣ್ಣುಮಕ್ಕಳಿಗೆ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ ಕ್ಷೇತ್ರಗಳಲ್ಲಿ ಕೌಶಲ್ಯಗಳನ್ನು ಕಲಿಯಲು ಮತ್ತು ವಾಯುಯಾನ ವಲಯದಲ್ಲಿ ಉದ್ಯೋಗಗಳಿಗೆ ತರಬೇತಿ ನೀಡಲು ಅವಕಾಶ ಒದಗಿಸಲಿದೆ.

ಇನ್ನು, ಮೋದಿ ಆಗಮನ ಹಿನ್ನೆಲೆ, ವಾಹನ ಸವಾರರಿಗೆ ಮಾರ್ಗ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬೆಂಗಳೂರಿನ ಕೆಲವು ಭಾಗಗಳಲ್ಲಿ ಸಂಚಾರ ಬದಲಾವಣೆ ಆಗಿದೆ. ಹೆಣ್ಣೂರು-ಬಾಗಲೂರು ರಸ್ತೆ ಮತ್ತು ಕೆಐಎಗೆ ಹೋಗುವ ಇತರ ರಸ್ತೆಗಳಲ್ಲಿ ಸಂಚಾರ ವ್ಯತ್ಯಯವಾಗಲಿದೆ. ಗೊಲ್ಲಹಳ್ಳಿ ಗೇಟ್​ನಿಂದ ಹುನಚೂರುವರೆಗೆ, ಏರ್​ಲೈನ್ಸ್​ ಡಾಬಾದಿಂದ ಬೂದಿಗೆರೆಯವರೆಗೆ, ಹೆಣ್ಣೂರು-ಬಗಲೂರು ಮುಖ್ಯ ರಸ್ತೆಯಿಂದ ವಿಮಾನ ನಿಲ್ದಾಣ ರಸ್ತೆಯವರೆಗೆ, ಚಿಕ್ಕಜಾಲ ಕೋಟೆ ಮುಖ್ಯ ರಸ್ತೆಯಿಂದ ವಿಮಾನ ನಿಲ್ದಾಣದವರೆಗೆ, ಬಗಲೂರಿನಿಂದ ವಿಮಾನ ನಿಲ್ದಾಣದವರೆಗೆ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ಪ್ರಧಾನಿ ಭೇಟಿ ಹಿನ್ನೆಲೆ, ಇಂದು ನಿಗದಿ ಆಗಿದ್ದ ಬಿಜೆಪಿ ರಾಜ್ಯ ಕಾರ್ಯಕಾರಿ ಸಭೆ ಮುಂದೂಡಿಕೆ ಆಗಿದೆ. ಪ್ರಧಾನಿ ಆಗಮನ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಭೆ ನಡೆಸಿದ್ರು. ಇನ್ನು, ಅದ್ದೂರಿ ಸ್ವಾಗತಕ್ಕೆ ನಿರ್ಧರಿಸಿದ್ದ ವಿಜಯೇಂದ್ರ, ಬೆಂಗಳೂರಿನಲ್ಲಿ ರೋಡ್​​ ಶೋಗೆ ಪ್ಲಾನ್​​ ಮಾಡಿದ್ರು. ಆದ್ರೆ, ಮೋದಿ ವ್ರತದಲ್ಲಿ ಇರೋ ಕಾರಣ ಈ ಕಾರ್ಯಕ್ರಮವನ್ನ ರದ್ದು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೋದಿ ಇಂದು ಬೆಂಗಳೂರಿಗೆ.. ದೇವನಹಳ್ಳಿಗೆ ಬರಲಿರುವ ಪ್ರಧಾನಿ.. ವಾಹನ ಸವಾರರಿಗೆ ಮಾರ್ಗ ಬದಲಾವಣೆ ಹೀಗಿದೆ

https://newsfirstlive.com/wp-content/uploads/2023/12/MODI-28.jpg

Load More