ಮೋದಿ ಮತ್ತು ಡೊನಾಲ್ಡ್​ ಟ್ರಂಪ್ ಭೇಟಿಗೆ ಮುಹೂರ್ತ ಫಿಕ್ಸ್: ಫೆಬ್ರವರಿ 13ರಂದು ಭೇಟಿಯಾಗಲಿದ್ದಾರೆ ದಿಗ್ಗಜ ನಾಯಕರು

author-image
Gopal Kulkarni
Updated On
ಮೋದಿ ಮತ್ತು ಡೊನಾಲ್ಡ್​ ಟ್ರಂಪ್ ಭೇಟಿಗೆ ಮುಹೂರ್ತ ಫಿಕ್ಸ್: ಫೆಬ್ರವರಿ 13ರಂದು ಭೇಟಿಯಾಗಲಿದ್ದಾರೆ ದಿಗ್ಗಜ ನಾಯಕರು
Advertisment
  • ಪ್ರಧಾನಿ ಮೋದಿ, ಟ್ರಂಪ್ ಭೇಟಿಗೆ ಕೊನೆಗೂ ಮುಹೂರ್ತ ಫಿಕ್ಸ್
  • ಎರಡು ದಿನದ ಪ್ಯಾರಿಸ್ ಪ್ರವಾಸದ ಬಳಿಕ ಯುಎಸ್​ ಟ್ರಿಪ್
  • ಫೆಬ್ರವರಿ 13 ರಂದು ಭೇಟಿಯಾಗಲಿರುವ ಟ್ರಂಪ್ ಮತ್ತು ಮೋದಿ

ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನಾನು ಫೋನ್ ಮೂಲಕ ಸಂಭಾಷಣೆ ಮಾಡಿದ್ದೇನೆ ಇನ್ನೇನು ಕೆಲವೇ ದಿನಗಳಲ್ಲಿ ಅವರು ಯುಎಸ್​ಗೆ ಬರಲಿದ್ದಾರೆ ಅಂತ ಇತ್ತೀಚೆಗಷ್ಟೇ ಡೊನಾಲ್ಡ್ ಟ್ರಂಪ್ ಮೀಡಿಯಾಗಳ ಮುಂದೆ ಹೇಳಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಡೊನಾಲ್ಡ್ ಟ್ರಂಪ್ ಭೇಟಿಗೆ ಮುಹೂರ್ತ ಫಿಕ್ಸ್ ಆಗಲಿದೆ. ಫೆಬ್ರವರಿ 13ರಂದು ಉಭಯ ನಾಯಕರು ವಾಷಿಂಗ್ಟನ್ ಡಿಸಿಯಲ್ಲಿ ಭೇಟಿಯಾಗಲಿದ್ದಾರೆ.

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಇದು ಉಭಯ ನಾಯಕರ ಮೊದಲ ಭೇಟಿಯಾಗಲಿದೆ. ಅದು ಮಾತ್ರವಲ್ಲ. ವಾಷಿಂಗ್ಟನ್​ಗೆ ಭೇಟಿ ನೀಡಲಿರುವ ಕೆಲವು ಆಯ್ದ ನಾಯಕರಲ್ಲಿ ಮೋದಿ ಕೂಡ ಒಬ್ಬರಾಗಿದ್ದಾರೆ. ಟ್ರಂಪ್ ಪ್ರಮಾಣ ವಚನ ಸ್ವೀಕಾರದ ನಂತರ ಒಂದು ವಾರದ ಅಂತರದಲ್ಲಿ ಈ ನಾಯಕರ ಭೇಟಿಯಾಗಲಿದೆ.

ಇದನ್ನೂ ಓದಿ:ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಐಶು ಪುತ್ರಿ; ಆರಾಧ್ಯ ಈ ನಿರ್ಣಯಕ್ಕೆ ಕಾರಣವೇನು?

ಯೋಜನೆಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಪ್ಯಾರಿಸ್​ನ ಎರಡು ದಿನಗಳ ಪ್ರವಾಸದ ಬಳಿಕ ವಾಷಿಂಗ್ಟನ್​ ಡಿಸಿಗೆ ಪ್ರವಾಸ ಬೆಳೆಸಲಿದ್ದಾರೆ. ಶುಕ್ರವಾರದಂದು ವಿದೇಶಾಂಗ ಸಚಿವಾಲಯದಲ ವಕ್ತಾರ ರಣ್​ಧೀರ್ ಜೈಸ್ವಾಲ್ ಹೇಳುವ ಪ್ರಕಾರ ಯುಎಸ್​ ಪ್ರಧಾನಿ ಮೋದಿಯವರ ಭೇಟಿ ಆದಷ್ಟು ಬೇಗ ಆಗಬೇಕು ಎಂದು ಬಯಸಿತ್ತು. ಸದ್ಯ ಫೆಬ್ರವರಿ 13 ರಂದು ಮೋದಿಯವರು ಅಮೆರಿಕಾ ಪ್ರವಾಸ ಬೆಳೆಸಲಿದ್ದಾರೆ ಎಂದು ಹೇಳಿದ್ದಾರೆ.

ಟ್ರಂಪ್ ಪ್ರಮಾಣ ವಚನ ಸ್ವೀಕಾರದ ಬಳಿಕ ಜನವರಿ 27 ರಂದು ಅವರು ಮೋದಿಯವರೊಂದಿಗೆ ಫೋನ್​​ನಲ್ಲಿ ಸಂಭಾಷಣೆ ನಡೆಸಿದ್ದರು. ಉಭಯ ದೇಶಗಳ ಬಾಂಧವ್ಯ ಹಾಗೂ ಪಾಲುದಾರಿಕೆ ಮುಂದುವರಿಸುವುದರ ಬಗ್ಗೆ ಚರ್ಚೆ ಮಾಡಿದ್ದರು. ಅಲ್ಲದೇ ಅಮೆರಿಕಾಗೆ ಆದಷ್ಟು ಬೇಗ ಬರುವಂತೆ ಆಹ್ವಾನವನ್ನು ನೀಡಿದ್ದರು. ಸದ್ಯ ಇದೆಲ್ಲದರ ಫಲಶ್ರುತಿ ಎನ್ನುವಂತೆ ಮೋದಿ ಈಗ ಅಮೆರಿಕಾಗೆ ಪ್ರವಾಸ ಬೆಳೆಸಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment