newsfirstkannada.com

ಇಂದು ರಾಮಸೇತು ನಿರ್ಮಿಸಿದ್ದ ಸ್ಥಳಕ್ಕೆ ಪ್ರಧಾನಿ ಭೇಟಿ.. ಈ ಬಗ್ಗೆ ಮೋದಿ ಹೇಳಿದ್ದೇನು?

Share :

Published January 21, 2024 at 5:34pm

Update January 21, 2024 at 5:35pm

    ನಾಳೆ ಅಯೋಧ್ಯೆಯಲ್ಲಿ ರಾಮಲಲ್ಲಾನ ಅದ್ಧೂರಿ ಪ್ರತಿಷ್ಠಾಪನೆ

    ರಾಮಸೇತು ನಿರ್ಮಿಸಿದ ಸ್ಥಳಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ

    ಪ್ರಾಣ ಪ್ರತಿಷ್ಠೆಯನ್ನು ಕಣ್ತುಂಬಿಕೊಳ್ಳಲಿರೋ ನರೇಂದ್ರ ಮೋದಿ

ಕನ್ಯಾಕುಮಾರಿ: ನಾಳೆ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಅವರು ರಾಮಮಂದಿರದ ಉದ್ಘಾಟನೆ ಮಾಡಲಿದ್ದಾರೆ. ಪ್ರಧಾನಿಯವರು ಬೆಳಗ್ಗಿನಿಂದ ಸಂಜೆ ತನಕ ಅಲ್ಲೇ ಇರಲಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಹೀಗಾಗಿ ಪ್ರಧಾನಿ ಮೋದಿ ಅವರು ನಿರಂತರವಾಗಿ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

ಇನ್ನು ನಾಳೆ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಇರುವುದರಿಂದ ಪ್ರಧಾನಿ ಮೋದಿ ಅವರು ಕೋದಂಡರಾಮಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ವಿಶೇಷವಾಗಿ ಪೂಜೆಯನ್ನು ನೆರವೇರಿಸದ ಬಳಿಕ ತಮ್ಮ ಟ್ವಿಟರ್​ ಖಾತೆಯಲ್ಲಿ ಮೋದಿ ಅವರು ಹೀಗೆ ಬರೆದುಕೊಂಡಿದ್ದಾರೆ. ಕೋದಂಡರಾಮಸ್ವಾಮಿ ದೇವಸ್ಥಾನ ಪೂಜೆ ಸಲ್ಲಿಸಿದೆ, ಧನ್ಯನಾದೆ ಎಂದಿದ್ದಾರೆ ಮೋದಿ.

ಈ ಮೊದಲು ಪ್ರಧಾನಿ ಅಗ್ನಿತೀರ್ಥ ಕಡಲ ತೀರದಲ್ಲಿ ಸ್ನಾನ ಮಾಡಿ, ರಾಮೇಶ್ವರಂನ ರಾಮನಾಥ ಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿದರು. ದೇವಾಲಯದ ಸಂಕೀರ್ಣದಲ್ಲಿರುವ 22 ಪುಣ್ಯ ಬಾವಿಗಳಲ್ಲಿ ಪ್ರಧಾನಿ ಮೋದಿ ತೀರ್ಥಸ್ನಾನ ಮಾಡಿದರು. ಭಕ್ತರು ಈ ತೀರ್ಥಕ್ಷೇತ್ರಗಳಲ್ಲಿ ಸ್ನಾನ ಮಾಡುವುದು ಮಂಗಳಕರ ಮತ್ತು ಪುಣ್ಯವೆಂದು ನಂಬುತ್ತಾರೆ. ಅದರಂತೆ ಪ್ರಧಾನಿ ಕೂಡ ಮಾಡಿರುವುದು ವಿಶೇಷವಾಗಿ ಕಾಣಿಸಿಕೊಂಡಿತು. ರಾವಣನಿಂದ ಸೀತೆಯನ್ನು ರಕ್ಷಣೆ ಮಾಡಲು ವಾನರ ಸೈನ್ಯದೊಂದಿಗೆ ರಾಮನು ಸೇತುವೆ ಕಟ್ಟಿದ್ದ ಎನ್ನಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು ರಾಮಸೇತು ನಿರ್ಮಿಸಿದ್ದ ಸ್ಥಳಕ್ಕೆ ಪ್ರಧಾನಿ ಭೇಟಿ.. ಈ ಬಗ್ಗೆ ಮೋದಿ ಹೇಳಿದ್ದೇನು?

https://newsfirstlive.com/wp-content/uploads/2024/01/shri-ram‘.jpg

Load More