/newsfirstlive-kannada/media/post_attachments/wp-content/uploads/2025/06/MODI.jpg)
ಅಹ್ಮದಾಬಾದ್​ನ ದುರಂತ ಸ್ಥಳಕ್ಕೆ ಪ್ರಧಾನಿ ಮಂತ್ರಿ ಭೇಟಿ ನೀಡಿ 10 ನಿಮಿಷ ಘಟನಾ ಸ್ಥಳವನ್ನ ಪರಿಶೀಲನೆ ನಡೆಸಿದ್ದಾರೆ. ವಿಮಾನದ ಇಂಧನವು ದುರ್ಘಟನಾ ಸ್ಥಳದಲ್ಲಿ ಸೋರಿಕೆಯಾಗಿದೆ. ಇದ್ರಿಂದ ಯಾವುದಾದ್ರು ದುರ್ಘಟನೆ ಸಂಭವಿಸೋ ಅನುಮಾನ ಇದೆ.
ಈ ಹಿನ್ನೆಲೆಯಲ್ಲಿ ಸುರಕ್ಷತಾ ಕಾರಣಗಳಿಂದಾಗಿ ಭದ್ರತಾ ದೃಷ್ಟಿಯಿಂದ ಹೆಚ್ಚಿನ ಹೊತ್ತು ದುರಂತ ಸ್ಥಳದಲ್ಲಿ ನಿಲ್ಲದಂತೆ ಭದ್ರತಾ ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ರು. ಹೀಗಾಗಿ ಪ್ರಧಾನಿ ಮೋದಿ 10 ನಿಮಿಷಗಳ ಕಾಲ ಘಟನಾ ಸ್ಥಳವನ್ನು ಪರಿಶೀಲಿಸಿ ಹಿಂತಿರುಗಿದರು.
ಇದನ್ನೂ ಓದಿ: ವಿಮಾನದ ಬೆಲೆ 2.18 ಸಾವಿರ ಕೋಟಿ ರೂ.. ಪತನಗೊಂಡ Boeing 787 ವಿಶೇಷತೆ ಏನೇನು..?
ಘಟನಾ ಸ್ಥಳ ಪರಿಶೀಲನೆ ನಡೆಸಿದ್ದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಸಿವಿಲ್​ ಆಸ್ಪತ್ರೆಗೂ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಅಹ್ಮದಾಬಾದ್​ನಲ್ಲಿ ನಡೆದ ಏರ್​ ಇಂಡಿಯಾ ದುರಂತದಲ್ಲಿ ಪ್ರಯಾಣಿಕರು, ಸಿಬ್ಬಂದಿ, ಹಾಗೂ ಮೆಡಿಕಲ್ ​ಕಾಲೇಜಿನ ವಿದ್ಯಾರ್ಥಿಗಳು ಸೇರಿ ಒಟ್ಟು 265 ಜನರು ಜೀವ ಕಳೆದುಕೊಂಡಿದ್ದಾರೆ. ಆದರೆ ವಿಮಾನದಲ್ಲಿದ್ದ ಓರ್ವ ವ್ಯಕ್ತಿ , ಹಾಸ್ಟೆಲ್​ನಲ್ಲಿದ್ದ ಉಳಿದ ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವ್ರಿಗೆಲ್ಲಾ ಸಿವಿಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಈ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
ಅಂದಹಾಗೆ ವಿಮಾನದಲ್ಲಿ ಒಟ್ಟು 242 ಪ್ರಯಾಣಿಕರು ಇದ್ದರು. ಅವರಲ್ಲಿ ವಿಶ್ವಾಸ್​ ಕುಮಾರ್ ರಮೇಶ್ ಅನ್ನೋರು ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಇನ್ನುಳಿದ 241 ಪ್ರಯಾಣಿಕರು ಅಲ್ಲೇ ಜೀವ ಬಿಟ್ಟಿದ್ದಾರೆ. ಬೋಯಿಂಗ್ ವಿಮಾನ ಹಾಸ್ಟೆಲ್​ ಮೇಲೆ ಬಿದ್ದಿದ್ದರಿಂದ 24 ಮೆಡಿಕಲ್ ವಿದ್ಯಾರ್ಥಿಗಳು ಕೂಡ ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: 265 ಮಂದಿಯ ಜೀವ ತೆಗೆದ ಏರ್ ಇಂಡಿಯಾ ವಿಮಾನ.. ದುರಂತಕ್ಕೆ ಕಾರಣವಾಯ್ತಾ ಈ 8 ಸಂಗತಿಗಳು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us