/newsfirstlive-kannada/media/post_attachments/wp-content/uploads/2025/05/PM-Modi-Adampur-Air-Base-5.jpg)
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅದಂಪುರ ಏರ್ ಬೇಸ್‌ಗೆ ಭೇಟಿ ನೀಡಿ ಯೋಧರ ಜೊತೆ ಮಹತ್ವದ ಚರ್ಚಿಸಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಅವರು ಫೋಟೋಗಳನ್ನ ಹಂಚಿಕೊಂಡಿದ್ದಾರೆ.
ಮೋದಿ ಹೇಳಿದ್ದೇನು?
ಇಂದು ಬೆಳಗ್ಗೆ ಅದಂಪುರ ಏರ್ ಬೇಸ್‌ಗೆ ಭೇಟಿ ನೀಡಿದ್ದೆ. ನಮ್ಮ ಧೈರ್ಯಶಾಲಿ ಏರ್ ವಾರಿಯರ್ಸ್ ಮತ್ತು ಯೋಧರನ್ನು ಭೇಟಿಯಾದೆ. ಅಸಾಧಾರಣ ಧೈರ್ಯ, ಬದ್ಧತೆ, ನಿರ್ಭಯತೆ ಪ್ರದರ್ಶಿಸಿದ ಯೋಧರ ಜೊತೆ ಇರೋದು ವಿಶೇಷ ಅನುಭವವಾಗಿದೆ. ನಮ್ಮ ದೇಶಕ್ಕಾಗಿ ಎಲ್ಲವನ್ನೂ ಮಾಡುವ ಸಶಸ್ತ್ರ ಪಡೆಗಳಿಗೆ ಭಾರತವು ಋಣಿಯಾಗಿದೆ.
ಈ ಅದಂಪುರ ಏರ್‌ಬೇಸ್ ಪಂಜಾಬ್ ರಾಜ್ಯದ ಜಲಂಧರ್‌ನಿಂದ 28 ಕಿ.ಮೀ ದೂರದಲ್ಲಿದೆ. ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯಲ್ಲಿ ಅದಂಪುರ ಏರ್‌ಬೇಸ್ ಪ್ರಮುಖ ಪಾತ್ರವಹಿಸಿದೆ. ಹೀಗಾಗಿ ಏರ್‌ಬೇಸ್‌ಗೆ ಹೋಗಿ ಪ್ರಧಾನಿ ಮೋದಿ ಅವರು ಸೈನಿಕರನ್ನು ಭೇಟಿಯಾಗಿದ್ದಾರೆ.
ಒಂದೇ ಒಂದು ಫೋಟೋದ ಮೂಲಕ ಸಂದೇಶ!
ಅದಂಪುರ ಏರ್‌ಬೇಸ್‌ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಒಂದೇ ಒಂದು ಫೋಟೋದ ಮೂಲಕ ಪಾಕ್‌ಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ಈ ಫೋಟೋದಲ್ಲಿ ಮೋದಿ ಅವರ ಹಿಂದೆ ಒಂದು ಸಾಲು ಬರೆಯಲಾಗಿದೆ. ಶತ್ರುವಿನ ಪೈಲಟ್‌ಗಳು ಸರಿಯಾಗಿ ಯಾಕೆ ನಿದ್ದೆ ಮಾಡಲ್ಲ ಅನ್ನೋ ಹಿಂಬದಿಯ ಬರಹದ ಮುಂದೆ ಮೋದಿ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ.
ಅದಂಪುರ ಏರ್‌ಬೇಸ್‌ನಲ್ಲಿರುವ ಗೋಡೆ ಬರಹದ ಮುಂದೆ ಮೋದಿ ತೆಗೆಸಿಕೊಂಡ ಫೋಟೋ ಇದೀಗ ವೈರಲ್ ಆಗಿದೆ.
ಇದನ್ನೂ ಓದಿ: ರಕ್ತ ಮತ್ತು ನೀರು ಒಟ್ಟಿಗೆ ಹರಿಯಲ್ಲ.. ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ ಖಡಕ್ ಎಚ್ಚರಿಕೆ; ಹೈಲೈಟ್ಸ್ ಇಲ್ಲಿದೆ!
ವೈರಿ ಪೈಲಟ್‌ಗಳು ನಿದ್ದೆ ಮಾಡದಂತೆ ಮಾಡಿರೋದು ಭಾರತದ ಫೈಟರ್ ಜೆಟ್‌ಗಳು. ವೈರಿ ರಾಷ್ಟ್ರದ ಪೈಲಟ್‌ಗಳ ನಿದ್ದೆಗೆಡಿಸಿರುವ ಭಾರತದ ವಾಯುಪಡೆ, ಫೈಟರ್ ಜೆಟ್‌ಗಳು ಎಂಬ ಸಂದೇಶವನ್ನು ಪ್ರಧಾನಿ ಮೋದಿ ಅವರು ಈ ಫೋಟೋದ ಮೂಲಕ ರವಾನೆ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ