ಅನಂತ್ ಅಂಬಾನಿ ವಂತಾರಾದಲ್ಲಿ ಪ್ರಧಾನಿ ಮೋದಿ ಹುಲಿ, ಸಿಂಹದ ಮರಿಗಳ ಜೊತೆ ಆಟ; ವಿಡಿಯೋ ಇಲ್ಲಿದೆ!

author-image
Gopal Kulkarni
Updated On
ಅನಂತ್ ಅಂಬಾನಿ ವಂತಾರಾದಲ್ಲಿ ಪ್ರಧಾನಿ ಮೋದಿ ಹುಲಿ, ಸಿಂಹದ ಮರಿಗಳ ಜೊತೆ ಆಟ; ವಿಡಿಯೋ ಇಲ್ಲಿದೆ!
Advertisment
  • ಗುಜರಾತ್​ನ ವಂತಾರಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ
  • ವಂತಾರಾದಲ್ಲಿ ಹುಲಿ, ಸಿಂಹಗಳ ಮರಿಯೊಂದಿಗೆ ಪ್ರಧಾನಿ ಮೋದಿ ಆಟ
  • ವಂತಾರಾದಲ್ಲಿ ಗಾಯಗೊಂಡ ವನ್ಯಜೀವಿಗಳ ರಕ್ಷಣೆ ಮಾಡಲಾಗುತ್ತದೆ

ಪ್ರಧಾನಿ ನರೇಂದ್ರ ಮೋದಿ ಇಂದು ಗುಜರಾತ್​ನ ವಂತಾರಾದಲ್ಲಿ ವನ್ಯಜೀವಿಗಳ ಜೊತೆ ಆಟವಾಡಿದ್ದಾರೆ. ಹುಲಿ ಮತ್ತು ಸಿಂಹದ ಮರಿಗಳ ಜೊತೆ ಪ್ರಧಾನಿ ಮೋದಿ ಆಟವಾಡಿದ್ದು ವಿಶೇಷ ಎನಿಸಿತ್ತು. ಗುಜರಾತ್​ನ ಜಾಮ್​ನಗರದ ಜಿಲ್ಲೆಯಲ್ಲಿರುವ ವಂತಾರದಲ್ಲಿ ಗಾಯಗೊಂಡ ವನ್ಯಜೀವಿಗಳನ್ನ ರಕ್ಷಣೆ ಮಾಡಿ ಅವುಗಳಿಗೆ ಚಿಕಿತ್ಸೆ ನೀಡಲಾಗುತ್ತದೆ.

publive-image

ಅಂತಹ ವನ್ಯಜೀವಿಗಳ ಸಂರಕ್ಷಣಾ ಕೇಂದ್ರವೇ ವಂತಾರಾ ಪ್ರಧಾನಿ ಮೋದಿಯವರೇ ಈ ಹಿಂದೆ ಇದನ್ನು ಉದ್ಘಾಟನೆ ಮಾಡಿದ್ದರು. ಇಂದು ಅದೇ ವನತಾರಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

publive-image

ಮುದ್ದು ಮುದ್ದಾಗಿರುವ ಹುಲಿ, ಸಿಂಹದ ಮರಿಗಳ ಜೊತೆ ಆಟವಾಡಿ ಆನಂದಿಸಿದರು. ವಂತಾರಾ ಕೇಂದ್ರದಲ್ಲಿ ಬರೋಬ್ಬರಿ 1.5 ಲಕ್ಷ ವನ್ಯಜೀವಿಗಳನ್ನು ರಕ್ಷಿಸಲಾಗಿದೆ. ಅವುಗಳಿಗೆ ಸರಿಯಾದ ಚಿಕಿತ್ಸೆ ನೀಡಿ ಅವುಗಳನ್ನು ಗುಣಮುಖಗೊಳಿಸುವ ಕಾರ್ಯವನ್ನು ಮಾಡಲಾಗುತ್ತದೆ.

ಇದನ್ನೂ ಓದಿ: ಅಧಿವೇಶನದಲ್ಲಿ ರಾಜ್ಯ ಸರ್ಕಾರವನ್ನು ಕಟ್ಟಿ ಹಾಕಲು ಬಿಜೆಪಿ ಪ್ಲ್ಯಾನ್​.. ಶಾಸಕಾಂಗ ಪಕ್ಷದ ಸಭೆ ನಡೆಸಿದ ಕೇಸರಿ ಪಡೆ

ಅತ್ಯಾಧುನಿಕ ಪಶು ಚಿಕಿತ್ಸಾ ಕೇಂದ್ರದ ಸೌಲಭ್ಯಗಳನ್ನು ವೀಕ್ಷಿಸಿದ ಮೋದಿ ಹುಲಿ, ಸಿಂಹಗಳ ಜೊತೆ ಜಿರಾಫೆ, ಆನೆ, ಗಿಣಿ ಸೇರಿದಂತೆ ವಿವಿಧ ಪ್ರಾಣಿ ಪಕ್ಷಿಗಳ ವೀಕ್ಷಣೆ ಮಾಡಿದರು.ಜೊತೆಗೆ ಹುಲಿ ಹಾಗೂ ಸಿಂಹದ ಮರಿಗಳಿಗೆ ಹಾಲು ಕುಡಿಸಿ ಆರೈಕೆ ಮಾಡಿದರು. ಪ್ರಧಾನಿ ಮೋದಿ ವಂತಾರಾಕ್ಕೆ ಭೇಟಿ ನೀಡಿದ ವಿಡಿಯೋ ಈಗ ಬಿಡುಗಡೆಯಾಗಿದೆ. ಮೋದಿ ಅನಂತ್ ಅಂಬಾನಿ ಕೂಡ ಉಪಸ್ಥಿತರಿದ್ದರು.ಸದ್ಯ ಈ ವಿಡಿಯೋ ಲಕ್ಷಾನುಗಟ್ಟಲೇ ವೀವ್ಸ್ ಪಡೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment