/newsfirstlive-kannada/media/post_attachments/wp-content/uploads/2025/04/Modi-on-pahlgam-terror-Attack-1.jpg)
ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯಾನಕ ಗುಂಡಿನ ದಾಳಿ ನಡೆಸಿದ ಉಗ್ರರಿಗೆ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ಪಹಲ್ಗಾಮ್ ಉಗ್ರರ ದಾಳಿ ಬಳಿಕ ಮೊದಲ ಬಾರಿ ಸಾರ್ವಜನಿಕ ಸಮಾರಂಭದಲ್ಲಿ ಮೋದಿ ಅವರು ಮಾತನಾಡಿದರು. ಭಯೋತ್ಪಾದಕರಿಗೆ ಊಹಿಸಲಾಗದಂತಹ ಶಿಕ್ಷೆ ಕೊಡುವ ಪ್ರತಿಜ್ಞೆ ಮಾಡಿದ್ದಾರೆ.
ಬಿಹಾರದ ಮಧುಬನಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ನೇರವಾಗಿ ಉಗ್ರರಿಗೆ ಎಚ್ಚರಿಕೆ ಸಂದೇಶ ರವಾನಿಸಿದರು. ಉಗ್ರರು ಭಾರತದ ಆತ್ಮದ ಮೇಲೆ ದಾಳಿ ಮಾಡಿದ್ದಾರೆ. ದಾಳಿಯ ಹಿಂದೆ ಇರೋರನ್ನು ನಾವು ಸುಮ್ಮನೆ ಬಿಡಲ್ಲ. ಭಯೋತ್ಪಾದಕರು ಕನಸಿನಲ್ಲೂ ಊಹಿಸಲಾಗದಂತಹ ಶಿಕ್ಷೆ ಕೊಡ್ತೇವೆ. ಒಬ್ಬೊಬ್ಬ ಉಗ್ರನನ್ನ ಹುಡುಕಿ ಹುಡುಕಿ ಹೊಡೆಯುತ್ತೇವೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಉಗ್ರರು ಮುಗ್ಧ ನಾಗರಿಕರನ್ನು ಹತ್ಯೆ ಮಾಡಿದ್ದಾರೆ. ನಾವು ಪ್ರತಿಯೊಬ್ಬ ಉಗ್ರರನ್ನು ಟ್ರ್ಯಾಕ್ ಮಾಡಿ ಹೊಡೆದುರುಳಿಸುತ್ತೇವೆ. ಪಾಕಿಸ್ತಾನಕ್ಕೂ ತಕ್ಕ ಶಾಸ್ತಿ ಮಾಡುತ್ತೇವೆ. ಇಡೀ ದೇಶ ಪೆಹಲ್ಗಾಮ್ ದಾಳಿಯಿಂದ ನೋವುನಲ್ಲಿದೆ. ಭಯೋತ್ಪಾದನೆಗೆ ಬಳಕೆಯಾದ ನೆಲವನ್ನು ಕಿತ್ತೊಗೆಯುತ್ತೇವೆ. ಭಯೋತ್ಪಾದನೆಯನ್ನು ಶಿಕ್ಷಿಸದೇ ಬಿಡುವುದಿಲ್ಲ. ಪ್ರತಿಯೊಬ್ಬ ಉಗ್ರರನ್ನು ಹುಡುಕಿ, ಹುಡುಕಿ ಹೊಡೆಯುತ್ತೇವೆ ಎಂದು ಮೋದಿ ಹೇಳಿದ್ದಾರೆ.
ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿ.. ದೆಹಲಿ ಪಾಕಿಸ್ತಾನ ಹೈ ಕಮಿಷನ್ ಕಚೇರಿಗೆ ಕೇಕ್; ವಿಡಿಯೋ ಇಲ್ಲಿದೆ!
ಮೋದಿ ಪ್ರತೀಕಾರದ ಪ್ರತಿಜ್ಞೆ!
1. ಉಗ್ರ ದಾಳಿಯ ಸಂಚು ನಡೆಸಿದವರನ್ನ ನಾವು ಬಿಡೋದಿಲ್ಲ
2. ಭಯೋತ್ಪಾದಕರ ಕಲ್ಪನೆಗಿಂತಲೂ ದೊಡ್ಡ ಶಿಕ್ಷೆಯನ್ನೇ ನೀಡ್ತೀವಿ
3. ಉಗ್ರರು ಕನಸಿನಲ್ಲಿಯೂ ಊಹಿಸಿರದಂತ ಪ್ರತೀಕಾರ ಇರುತ್ತೆ
4. ಭಯೋತ್ಪಾದಕರ ಅಳಿದುಳಿದ ಜಾಗವನ್ನ ನಾಶ ಪಡಿಸ್ತೀವಿ
5. ಉಗ್ರ ಕೃತ್ಯದ ಹಿಂದಿರೋರನ್ನ ಹುಡುಕಿ ಹುಡುಕಿ ಹೊಡೀತೀವಿ
6. ಕಾಶ್ಮೀರದಲ್ಲಿ ದುಷ್ಕೃತ್ಯ ಮೆರೆದವರ ಹುಟ್ಟಡಗಿಸುತ್ತೇವೆ
7. ಭಯೋತ್ಪಾದಕರ ಮೂಲವನ್ನೇ ಕಿತ್ತೆಸೆಯುತ್ತೇವೆಂದು ಎಚ್ಚರಿಕೆ
8. ಕಾಶ್ಮೀರದಲ್ಲಿನ ದಾಳಿಕೋರರನ್ನ ಮಣ್ಣಲ್ಲಿ ಹೂತು ಹಾಕುತ್ತೇವೆ
9. ಕಾಶ್ಮೀರದಲ್ಲಿ ನಡೆದ ದಾಳಿಗೆ ಭಾರತ ತಕ್ಕ ಉತ್ತರ ಕೊಡಲಿದೆ
10. ಭಾರತ ರಾಷ್ಟ್ರವನ್ನ ಹೆದರಿಸೋದಕ್ಕೆ ಯಾರಿಂದಲೂ ಸಾಧ್ಯವಿಲ್ಲ
Modi Ji's Big Warning to Pakistan!
Just Wait and Watch pic.twitter.com/bcMVeesJsl
— The Jaipur Dialogues (@JaipurDialogues)
Modi Ji's Big Warning to Pakistan!
Just Wait and Watch pic.twitter.com/bcMVeesJsl— The Jaipur Dialogues (@JaipurDialogues) April 24, 2025
">April 24, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ