ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಪತ್ನಿಗೆ ಮೋದಿ ದುಬಾರಿ ಗಿಫ್ಟ್ ನೀಡಿದ್ದು ಸರಿಯೇ? ಏನಿದು ಹೊಸ ವಿವಾದ?

author-image
Gopal Kulkarni
Updated On
VIDEO: ಶ್ವೇತಭವನದಲ್ಲಿ ಅಮೆರಿಕಾದ ಮೊದಲ ಮಹಿಳೆ ಜಿಲ್ ಬೈಡೆನ್‌, ಅಧ್ಯಕ್ಷ ಜೋ ಬೈಡನ್‌ಗೆ ಡೈಮಂಡ್ ಗಿಫ್ಟ್ ನೀಡಿದ ಪ್ರಧಾನಿ ಮೋದಿ
Advertisment
  • ಜೋ ಬೈಡನ್ ಪತ್ನಿಗೆ ದುಬಾರಿ ಗಿಫ್ಟ್ ನೀಡಿರುವ ಪ್ರಧಾನಿ ಮೋದಿ
  • 2023ರ ಭೇಟಿಯಲ್ಲಿ ಜಿಲ್ ಬೈಡನ್​ಗೆ 17 ಲಕ್ಷ ಮೌಲ್ಯದ ವಜ್ರದ ಗಿಫ್ಟ್​
  • ಅಂದು ನೀಡಿದ ಉಡುಗೊರೆ ಇಂದು ವಿವಾದವಾಗುತ್ತಿರುವುದು ಏಕೆ ?

2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದರು. ಅಂದು ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಪತ್ನಿ ಜಿಲ್ ಬೈಡನ್​ಗೆ ಮೋದಿ ದುಬಾರಿ ಗಿಫ್ಟ್ ನೀಡಿದ ವಿಚಾರ ಈಗ ಬೆಳಕಿಗೆ ಬಂದಿದೆ. ಸೂರತ್​ನ ದುಬಾರಿ ಡೈಮಂಡ್​ನ್ನು ಮೋದಿ ಜಿಲ್​ಗೆ ಗಿಫ್ಟಾಗಿ ನೀಡಿದ್ದರು. ಡೈಮಂಡ್​ನ ಮೌಲ್ಯ ಬರೋಬ್ಬರಿ 20 ಸಾವಿರ ಡಾಲರ್ ಆಂದ್ರೆ ಭಾರತೀಯ ರೂಪಾಯಿಗಳಲ್ಲಿ ಇದರ ಬೆಲೆ ಸುಮಾರು 17 ಲಕ್ಷ ರೂಪಾಯಿ. ಇದು 2023ರಲ್ಲಿ ಜಿಲ್ ಬೈಡನ್​ಗೆ ಬಂದ ದುಬಾರಿ ಗಿಫ್ಟ್ ಎಂದು ಹೇಳಲಾಗಿದೆ. 7.5 ಕ್ಯಾರೆಟ್ ಸಿಂಥಟಿಕ್ ಡೈಮಂಡ್​ನ್ನು ಮೋದಿ ಉಡುಗೊರೆಯಾಗಿ ನೀಡಿದ್ದರು.

ಇದನ್ನೂ ಓದಿ:ಚೀನಾ HMPV ವೈರಸ್ ಬಗ್ಗೆ ಭಾರತೀಯರಿಗೆ ಭಯ ಬೇಡ.. ಕೇಂದ್ರ ಆರೋಗ್ಯ ಇಲಾಖೆ ಹೇಳಿದ್ದೇನು?

ಸೂರತ್‌ನ ಲ್ಯಾಬ್ ಗ್ರೌನ್ ಡೈಮೆಂಡ್ ಅನ್ನು ಗಿಫ್ಟ್ ಆಗಿ ನೀಡಿದ್ದರು ಮೋದಿ. ಅಮೆರಿಕಾದ ಆಡಿಟ್​ ವೇಳೆ ಈ ಒಂದು ದುಬಾರಿ ಗಿಫ್ಟ್​ ನೀಡಿದ್ದು ಬೆಳಕಿಗೆ ಬಂದಿದೆ. ಆದ್ರೆ ಈ ಗಿಫ್ಟ್​ನ್ನು ಜಿಲ್ ಬೈಡನ್ ತೆಗೆದುಕೊಂಡು ಹೋಗುವಂತಿಲ್ಲ. ಬಂದ ಉಡುಗೊರೆಯ್ನು ಶ್ವೇತಭವನದ ಈಸ್ಟ್​ವಿಂಗ್​ನಲ್ಲಿ ಇಡಬೇಕು. ಜೋ ಬೈಡನ್ ಅಧಿಕಾರವಧಿ ಮುಗಿದ ನಂತರ ಅಮೆರಿಕಾದ ನ್ಯಾಷನಲ್ ಆರ್ಚೀವ್​ನಲ್ಲಿ ಇಡಬೇಕು. ಆದರೆ. ಜಿಲ್ ಬೈಡನ್​ಗೆ ಒಂದು ಅವಕಾಶವಿದೆ. ಕೊಟ್ಟಿರುವ ಗಿಫ್ಟ್​ನ್ನು ಇಂದಿನ ಮಾರುಕಟ್ಟೆಯ ಬೆಲೆ ನೀಡಿ ಅದನ್ನು ಖರೀದಿಸಬಹುದು. ಶ್ವೇತಭವನದ ನಿಯಮದ ಪ್ರಕಾರ ಅಮೆರಿಕಾದ ಅಧ್ಯಕ್ಷರು ಹಾಗೂ ಅವರ ಪತ್ನಿಗೆ ಬಂದ ಗಿಫ್ಟ್​ಗಳನ್ನು ಘೋಷಿಸಿಕೊಂಡು ಸರ್ಕಾರಕ್ಕೆ ನೀಡಬೇಕು.

publive-image

ಇದನ್ನೂ ಓದಿ: ದೇಶದ ಅತ್ಯಂತ ಶ್ರೀಮಂತ ಸಿಎಂ ಯಾವ ರಾಜ್ಯದವರು; ಸಿದ್ದರಾಮಯ್ಯ ಎಷ್ಟನೇ ಸ್ಥಾನದಲ್ಲಿದ್ದಾರೆ ಗೊತ್ತಾ?

ಇದು ಜಿಲ್ ಬೈಡನ್​ ಉಡುಗೊರೆಯ ಕಥೆಯಾದ್ರೆ ಮತ್ತೊಂದು ಕಡೆ ಡೊನಾಲ್ಡ್ ಟ್ರಂಪ್​ಗೂ ಕೂಡ ಮೋದಿ ಭಾರಿ ಮೊತ್ತದ ಉಡುಗೊರೆ ನೀಡಿದ್ದರು ಎಂದು ಅಮೆರಿಕಾ ನಡೆಸಿದ ಆಡಿಟ್​ ವೇಳೆ ತಿಳಿದು ಬಂದಿದೆ. ಸುಮಾರು 50 ಸಾವಿರ ಡಾಲರ್ ಮೌಲ್ಯದ ಗಿಫ್ಟ್ ನೀಡಿದ್ದರು ಮೋದಿ ಎಂದು ತಿಳಿದು ಬಂದಿದೆ. ಸದ್ಯ ಇದು ಎಷ್ಟು ಸರಿ ಎಂಬ ಪ್ರಶ್ನೆಗಳು ಕೂಡ ಕೇಳಿ ಬರುತ್ತಿವೆ. ಭಾರತದ ಜನರ ತೆರಿಗೆ ಹಣದಲ್ಲಿ ದುಬಾರಿ ಗಿಫ್ಟ್​ಗಳನ್ನು ಏಕೆ ನೀಡಬೇಕು ಎಂದು ಪ್ರಜ್ಞಾವಂತರು ಕೇಳುತ್ತಿದ್ದಾರೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment