/newsfirstlive-kannada/media/post_attachments/wp-content/uploads/2025/02/PM-MODI.jpg)
ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 10 ರಿಂದ ನಾಲ್ಕು ದಿನಗಳ ಕಾಲ ಫ್ರಾನ್ಸ್ ಮತ್ತು ಅಮೆರಿಕ ಪ್ರವಾಸದಲ್ಲಿದ್ದರು. ಫ್ರಾನ್ಸ್‌ಗೆ ಭೇಟಿ ನೀಡುವ ಅವಧಿಯಲ್ಲಿ ಮೋದಿಯನ್ನು ಕರೆದುಕೊಂಡು ಹೋಗುತ್ತಿದ್ದ ವಿಮಾನವು ಪಾಕಿಸ್ತಾನದ ಮೂಲಕ ಪ್ರಯಾಣ ಬೆಳೆಸಿತ್ತು.
46 ನಿಮಿಷಗಳು..!
ಅಫ್ಘಾನ್ ಏರ್ಸ್ಪೇಸ್ ಮುಚ್ಚಿದ್ದರಿಂದ ಪಾಕಿಸ್ತಾನದ ವಾಯಪ್ರದೇಶದ ಮೂಲಕ ಹಾರಬೇಕಾಗಿಯಿತು. ಮೋದಿಯವರ ವಿಮಾನವು 46 ನಿಮಿಷಗಳ ಕಾಲ ಪಾಕಿಸ್ತಾನದ ಏರ್ಸ್ಪೇಸ್ನಲ್ಲಿತ್ತು. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧಗಳು ಸರಿ ಇಲ್ಲದ ಕಾರಣ ಈ ವಿಚಾರ ಮಹತ್ವ ತುಂಬಾನೇ ಮಹತ್ವ ಪಡೆದುಕೊಂಡಿತ್ತು.
ಹೇಗಿತ್ತು ಭದ್ರತೆ..?
ಯಾವುದೇ ಉನ್ನತ ಮಟ್ಟದ ನಾಯಕರ ಅಂತಾರಾಷ್ಟ್ರೀಯ ಪ್ರಯಾಣದ ಅವಧಿಯಲ್ಲಿ ಭದ್ರತೆ ವಿಚಾರದಲ್ಲಿ ಕಟ್ಟುನಿಟ್ಟಿನ ಶಿಷ್ಟಾಚಾರ ಪಾಲಿಸಲಾಗುತ್ತದೆ. ಒಂದು ರಾಷ್ಟ್ರದ ಮುಖ್ಯಸ್ಥರು ಇನ್ನೊಂದು ದೇಶದ ಮೇಲೆ ಪ್ರಯಾಣಿಸುವಾಗ ವಿಮಾನ ಭದ್ರತೆಗೆ ಸಂಬಂಧಿಸಿದಂತೆ ಸಮನ್ವಯವಿರುತ್ತದೆ. ಮೋದಿ ವಿಷಯದಲ್ಲೂ ಇದೇ ರೀತಿಯ ಭದ್ರತೆ ಇರುತ್ತದೆ. ಮೋದಿ ಅವರಿದ್ದ ವಿಮಾನ ಪಾಕಿಸ್ತಾನದ ಮೇಲೆ ಹಾದು ಹೋಗುವಾಗ ಭಾರತ ಮತ್ತು ಪಾಕ್ ಭದ್ರತಾ ಸಂಸ್ಥೆಗಳು ಕಟ್ಟೆಚ್ಚರ ವಹಿಸಿದ್ದವು.
ಇದನ್ನೂ ಓದಿ: Dhananjay Dhanyatha Wedding; ಚಾಮುಂಡಿ ದೇವಿ ಗುಡಿಯಂತೆ ಕಲ್ಯಾಣ ಮಂಟಪ, ಹೇಗಿದೆ ಸಿದ್ಧತೆ?
ಭಾರತೀಯ ವಾಯುಪಡೆಯ (IAF) ಯುದ್ಧ ವಿಮಾನಗಳು ಸಿದ್ಧವಾಗಿದ್ದವು. ಪ್ರಧಾನಿಗಳ ಭದ್ರತಾ ಜವಾಬ್ದಾರಿ ಹೊತ್ತಿರುವ ವಿಶೇಷ ರಕ್ಷಣಾ ಪಡೆ (ಎಸ್‌ಪಿಜಿ) ಭದ್ರತೆಯನ್ನು ಖಚಿತಪಡಿಸಿಕೊಂಡಿತ್ತು. ಎರಡೂ ದೇಶಗಳು ಏರ್ ಟ್ರಾಫಿಕ್ ಕಂಟ್ರೋಲ್ ಮತ್ತು ಭದ್ರತಾ ಪಡೆಗಳು ವಿಮಾನದ ಪ್ರತಿಯೊಂದು ಚಲನವಲನವನ್ನು ಪತ್ತೆಹಚ್ಚುತ್ತಿದ್ದವು.
ವಿಮಾನದಲ್ಲಿ ಅತ್ಯುನ್ನತ ಸುರಕ್ಷತೆ..!
ಪ್ರಧಾನಿ ಮೋದಿಯವರ ವಿಮಾನ ‘ಏರ್ ಇಂಡಿಯಾ ಒನ್’ ಸಾಮಾನ್ಯ ಫ್ಲೈಟ್ ಅಲ್ಲ. ಅತ್ಯಾಧುನಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳು (Missile defense systems) ಮತ್ತು ಅಡ್ವಾನ್ಸ್ಡ್ ಸೇಫ್ಟಿ ಫೀಚರ್ಸ್ (Advanced safety features) ಹೊಂದಿದೆ. Boeing 777 ವಿಮಾನವು ಭಾರತದ ಉನ್ನತ ನಾಯಕರ ಭದ್ರತೆಗಾಗಿ ಇದೆ. ಇದನ್ನು ಏರ್ ಇಂಡಿಯಾ ಪೈಲಟ್‌ಗಳಿಗಿಂತ ಭಾರತೀಯ IAFನಿಂದ ತರಬೇತಿ ಪಡೆದ ಪೈಲಟ್‌ಗಳು ಆಪರೇಟ್ ಮಾಡುತ್ತಾರೆ. ಇದು ವೈಮಾನಿಕ ಬೆದರಿಕೆಗಳನ್ನು ನಿಭಾಯಿಸುತ್ತದೆ. ಅಗತ್ಯವಿದ್ದರೆ ರಕ್ಷಣಾತ್ಮಕ ಕ್ಷಿಪಣಿಗಳನ್ನು ಉಡಾಯಿಸುವ ಸಾಮರ್ಥ್ಯ ಹೊಂದಿದೆ.
ಎಲ್ಲೆಲ್ಲಿ ಹಾರಿದೆ..?
ಪ್ರಧಾನಿ ಮೋದಿಯವರಿದ್ದ ವಿಮಾನವು ಪಾಕಿಸ್ತಾನದ ಶೇಖ್‌ಪುರ, ಹಫೀಜಾಬಾದ್, ಚಕ್ವಾಲ್ ಮತ್ತು ಕೊಹತ್ ಮೇಲೆ ಹಾರಿದೆ. ಪಾಕಿಸ್ತಾನದ ವಾಯು ಪ್ರದೇಶದಲ್ಲಿ ಒಟ್ಟು 46 ನಿಮಿಷಗಳನ್ನು ಕಾಲ ಹಾರಾಟ ನಡೆಸಿದೆ. ಬೆದರಿಕೆಗಳ ಹೊರತಾಗಿಯೂ ಅಲ್ಲಿನ ಅಧಿಕಾರಿಗಳು ಭದ್ರತೆಯನ್ನು ಕೈಗೊಂಡಿದ್ದರು. ಎರಡು ದೇಶಗಳ ನಡುವೆ ಉದ್ವಿಗ್ನತೆಯ ಹೊರತಾಗಿಯೂ ಪಾಕಿಸ್ತಾನ ಅಂತರರಾಷ್ಟ್ರೀಯ ವಾಯುಯಾನ ನಿಯಮಗಳನ್ನು ಪಾಲಿಸಿದೆ. ಪಾಕಿಸ್ತಾನ ಕೂಡ ತನ್ನ ವಾಯುಪ್ರದೇಶದ ಮೂಲಕ ಸುರಕ್ಷಿತ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ.
ಇದನ್ನೂ ಓದಿ: ರಿಷಬ್ ಪಂತ್ಗೆ ಇದು ಕೊಂಚ ಬೇಸರದ ಸಂಗತಿ.. ಆದ್ರೆ KL ರಾಹುಲ್ಗೆ ಗುಡ್ನ್ಯೂಸ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ