/newsfirstlive-kannada/media/post_attachments/wp-content/uploads/2024/04/Modi-2.jpg)
ಮಧ್ಯ ಪ್ರದೇಶ: ಪ್ರಧಾನಿ ನರೇಂದ್ರ ಮೋದಿಯವರ ರೋಡ್​​ ಶೋ ವೇಳೆ ವೇದಿಕೆ ಕುಸಿದು ಹಲವಾರು ಜನರು ಗಾಯಗೊಂಡ ಘಟನೆ ಜಬಲ್ಪುರದಲ್ಲಿ ಭಾನುವಾರದಂದು ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆ ಸಾಗಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಲೋಕ ಸಭಾ ಚುನಾವಣೆ ಹಿನ್ನೆಲೆ ಮಧ್ಯಪ್ರದೇಶದ ಜಬಲ್​ಪುರದಲ್ಲಿ ಭಾನುವಾರ ಪ್ರಧಾನಿ ಮೋದಿ ರೋಡ್​ ಶೋ ಹಮ್ಮಿಕೊಂಡಿದ್ದರು. ಮಧ್ಯ ಪ್ರದೇಶದ ಮುಖ್ಯಮಂತ್ರಿ ಮೋಹನ್​ ಯಾದವ್​, ಜಬಲ್ಫುರ ಲೋಕ ಸಭಾ ಕ್ಷೇತ್ರದ ಅಭ್ಯರ್ಥಿ ಆಶಿಶ್​ ದುಬೆ, ರಾಜ್ಯ ಕ್ಯಾಬಿನೆಟ್​​ ಸಚಿವ ರಾಕೇಶ್​​ ಸಿಂಗ್​ ಈ ರೋಡ್​ಶೋನಲ್ಲಿ ಮೋದಿ ಜೊತೆಗೆ ಉಪಸ್ಥಿತರಿದ್ದರು.
/newsfirstlive-kannada/media/post_attachments/wp-content/uploads/2024/04/Modi-road-Show.jpg)
ಇದನ್ನು ಕಾಣುವ ತವಕದಲ್ಲಿ ಅನೇಕ ಜನರು ನೆರೆದಿದ್ದರು. ಈ ವೇಳೆ ಜನರಿದ್ದ ವೇದಿಕೆ ಕುಸಿದಿದೆ. ಓರ್ವ ಪೊಲೀಸ್​ ಸಿಬ್ಬಂಧಿ ಸೇರಿ ನಾಲ್ವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಮೋದಿ ಮತ್ತೆ ಪ್ರಧಾನಿ ಆಗಬೇಕು.. ಬೆರಳನ್ನೇ ಕತ್ತರಿಸಿ ಕಾಳಿಗೆ ಅರ್ಪಿಸಿದ ಅಭಿಮಾನಿ; ಆಮೇಲೇನಾಯ್ತು?
ಪೊಲೀಸ್​​ ಅಧಿಕಾರಿ ದಿಲೀಪ್​ ಶ್ರೀವಾಸ್ತವ ಘಟನೆ ಬಗ್ಗೆ ಮಾತನಾಡಿದ್ದು, ‘ಮೋದಿ ರ್ಯಾಲಿ ಹಾದು ಹೋದ ಬಳಿಕ ಜನದಟ್ಟಣೆಯಿಂದ ವೇದಿಕೆ ಕುಸಿದಿದೆ. ಓರ್ವ ಪೊಲೀಸ್​ ಸೇರಿದಂತೆ ನಾಲ್ವರು ಗಾಯಗೊಂಡಿದ್ದವರನ್ನು ವಿಕ್ಟೋರಿಯಾಗೆ ಸೇರಿಸಲಾಗಿದೆ’ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us