ಕುಬೇರನ ಮದುವೆಗೆ ಬಂದ ಪ್ರಧಾನಿ.. ಅನಂತ್ ಅಂಬಾನಿ ದಂಪತಿಗೆ ಮೋದಿ ಶುಭ ಆಶೀರ್ವಾದ್; VIDEO

author-image
admin
Updated On
ಕುಬೇರನ ಮದುವೆಗೆ ಬಂದ ಪ್ರಧಾನಿ.. ಅನಂತ್ ಅಂಬಾನಿ ದಂಪತಿಗೆ ಮೋದಿ ಶುಭ ಆಶೀರ್ವಾದ್; VIDEO
Advertisment
  • ಭಾರತದ ಕುಬೇರ ಮುಖೇಶ್​ ಅಂಬಾನಿ ಪುತ್ರ ಅನಂತ ಅಂಬಾನಿ
  • ಶುಭ ಆಶಿರ್ವಾದ್ ಸಮಾರಂಭಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ
  • ಸಾಕ್ಷಾತ್‌ ಇಂದ್ರಲೋಕದಂತ ಮದುವೆಗೆ ಸಾಕ್ಷಿಯಾದ ಗಣ್ಯಾತಿಗಣ್ಯರು

ಇದು ಸಾಕ್ಷಾತ್ ಇಂದ್ರಲೋಕ.. ನೋಡಲು ಎರಡು ಕಣ್ಣು ಸಾಲಲ್ಲ. ಅಬ್ಬಬ್ಬಾ ಎಂಥಾ ವೈಭೋಗ. ಸ್ವರ್ಗವೇ ಧರೆಗಿಳಿದು ಬಂದಂತೆ. ಇಂದ್ರನೇ ನಾಚುವಂತ ಸ್ವರ್ಗ ಸದೃಶ ದೃಶ್ಯ.

ಅದಕ್ಕೆ ತಕ್ಕಂತೆ ಮಿರಿ ಮಿರಿ ಮಿಂಚುವಂತ ಪೋಷಾಕಿನಲ್ಲಿ ಮಿಂಚುತ್ತಿರುವ ತಾರೆಗಳು. ಹಿಂದೆಂದೂ ಕಂಡಿಲ್ಲ. ಮುಂದೆ ನಡೆಯುತ್ತೋ ಗೊತ್ತಿಲ್ಲ. ಇದು ಭಾರತದ ಕುಬೇರ ಮುಖೇಶ್​ ಅಂಬಾನಿ ಪುತ್ರ ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಮಹೋತ್ಸವ.

publive-image

ಅಂಬಾನಿ ಮದುವೆಗೆ ಮೋದಿ ಆಗಮನ
ನಿನ್ನೆ ಶುರುವಾದ ಈ ಶುಭ ವಿವಾಹ ಉತ್ಸವದಲ್ಲಿ ಇಂದು ಶುಭ ಆಶಿರ್ವಾದ್ ಜರುಗಿದೆ. ಅಲ್ಲಿ ದಂಪತಿಗಳು ಗೌರವಾನ್ವಿತ ಅತಿಥಿಗಳಿಂದ ಆಶೀರ್ವಾದ ಪಡೆದುಕೊಳ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಶುಭ ಆಶಿರ್ವಾದ್ ಸಮಾರಂಭಕ್ಕೆ ಸಾಕ್ಷಿಯಾಗಿದ್ದಾರೆ. ಮೋದಿ ಅವರು ನವದಂಪತಿಗಳಿಗೆ ಶುಭಾಶಯ ಕೋರಿದ್ದಾರೆ. ಅಂಬಾನಿ ಮದುವೆಗೆ ಪ್ರಧಾನಿ ಮೋದಿ ಆಗಮಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.


">July 13, 2024

ಶ್ರೀಮಂತ ಉದ್ಯಮಿ ಅಂಬಾನಿ ಮನೆಯ ಮದುವೆಗೆ ಮೋದಿ ಆಗಮಿಸಿದ್ದು ವಿಶೇಷವಾಗಿತ್ತು. ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಪ್ರಧಾನಿ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ.

publive-image

₹5 ಸಾವಿರ ಕೋಟಿ ವೆಚ್ಚದಲ್ಲಿ ಅನಂತ ಅಂಬಾನಿ ಕಲ್ಯಾಣ
ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಮತ್ತು ನೀತಾ ಅಂಬಾನಿ ಪುತ್ರ ಅನಂತ್ ಮತ್ತು ರಾಧಿಕಾ ಮರ್ಚೆಂಟ್ ಅದ್ಧೂರಿ ವಿವಾಹ ನೆರವೇರಿದೆ. 18.5 ಎಕರೆಯಷ್ಟು ಇರುವ ಮುಂಬೈನ ಜಿಯೋ ವರ್ಲ್ಡ್ ಕನ್ವೆಂಷನ್ ಸೆಂಟರ್​ನಲ್ಲಿ ನಿನ್ನೆ ರಾತ್ರಿ ನಡೆದಿದೆ. ಆದ್ರೆ ಇಲ್ಲಿ ಗಮನ ಸೆಳೆದದ್ದು ಮದುವೆ ಖರ್ಚು. ಈ ಅದ್ದೂರಿ ಮದುವೆಗೆ ಖರ್ಚಾಗಿದ್ದು ನೂರು-ಸಾವಿರ ಕೋಟಿ ಅಲ್ಲ. 5 ಸಾವಿರ ಕೋಟಿ ರೂಪಾಯಿ.

publive-image

3 ದಿನ.. 3,000 ಬಗೆಯ ಭಕ್ಷ್ಯಗಳು!
ಸಾಮಾನ್ಯ ಜನರಿಗೆ ಸಾವಿರಾರು ಕೋಟಿ ಖರ್ಚು ಮಾಡಿ ಮದುವೆ ಮಾಡ್ಬೇಕಾ ಅಂತ ಅನ್ನಿಸಬಹುದು. ಆದ್ರೆ ಅಂಬಾನಿ ಚಿಕ್ಕ ಮಗನ ಮದುವೆಗೆ ಆಗುವ ಖರ್ಚು ಅಂಬಾನಿಗೆ ಐದು ಪೈಸೆ ಲೆಕ್ಕ ಅಷ್ಟೆ. ಅಂಬಾನಿಯ ಒಟ್ಟು ಆಸ್ತಿಯಲ್ಲಿ ಇದೇನು ಲೆಕ್ಕವೇ ಅಲ್ಲ. ಯಾಕಂದ್ರೆ ಅಂಬಾನಿ ಆಸ್ತಿಯಲ್ಲಿ ಇದು ಜಸ್ಟ್ 0.5 ಪರ್ಸೆಂಟ್​ ಅಷ್ಟೇ ಎನ್ನಲಾಗುತ್ತಿದೆ.

ಇದನ್ನೂ ಓದಿ: ಅಂಬಾನಿ ಮದ್ವೆಗೆ 160 ವರ್ಷದ ಹಳೇ ಸೀರೆ ತೊಟ್ಟ ಆಲಿಯಾ; ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ! 

ಮದುವೆ ಮನೆ ಅಂದ್ರೆ ಅಲ್ಲಿ ಊಟದ್ದೇ ಕಾರುಬಾರು. ಊಟದ ವಿಚಾರದಲ್ಲೂ ಅಂಬಾನಿ ಕುಟುಂಬ ದಾರಾಳತನ ಪ್ರದರ್ಶಿಸಿದೆ. ಪ್ರಪಂಚದ ಮೂಲೆ ಮೂಲೆಯಲ್ಲಿರುವ ದುಬಾರಿ ಖಾದ್ಯಗಳನ್ನೆಲ್ಲ ಮಾಡಿಸಿದ್ದರು. ಒಟ್ಟು 3,000 ವೆರೈಟಿ ಭಕ್ಷ್ಯಗಳನ್ನು ಅತಿಥಿಗಳು ಸವಿದಿದ್ದಾರೆ.

publive-image

ರಜನಿಕಾಂತ್, ಯಶ್​, ಶಾರುಖ್​, ಜಾನ್​ ಸೆನಾ ಹಾಜರ್!
ಅಂಬಾನಿ ಮದುವೆ ಅಂದ್ರೆ ಅಲ್ಲಿ ಸೆಲೆಬ್ರೆಟಿಗಳದ್ದೇ ಕಾರುಬಾರು. ಸೂಪರ್​ಸ್ಟಾರ್ ರಜನಿಕಾಂತ್, ರಾಕಿಂಗ್ ಸ್ಟಾರ್ ಯಶ್​, ಮಹೇಶ್​ ಬಾಬು, ಶಾರುಖ್ ಖಾನ್, ಐಶ್ವರ್ಯ ರೈ, WWE ಸ್ಟಾರ್ ಜಾನ್​ ಸೀನಾ, ಖ್ಯಾತ ಕ್ರಿಕೆಟರ್ಸ್​, ರಾಜಕಾರಣಿಗಳೆಲ್ಲ ಭಾಗಿಯಾಗಿದ್ದರು. ಇಲ್ಲಿ ಜಾನ್ ಸೆನಾ ಭಾರತೀಯ ಉಡುಪಿನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ಅಮಿತಾಬ್ ಬಚ್ಚನ್ ಮಗನನ್ನ ಬಿಟ್ರಾ ಐಶ್ವರ್ಯ ರೈ..? ಅಂಬಾನಿ ಸಂಭ್ರಮದಲ್ಲಿ ಬಿಗ್ ಬಿ ಫ್ಯಾಮಿಲಿ ಬೇರೆ ಬೇರೆ! 

ನಾಳೆ ಭವ್ಯ ಸ್ವಾಗತವಾದ ಮಂಗಳ ಉತ್ಸವದ ಮೂಲಕ ಕೊನೆಯಾಗುತ್ತೆ. ಒಟ್ಟಾರೆ ಅಂಬಾನಿ ಕುಟುಂಬದ ಮದುವೆಗಿಂತ ಮದುವೆಗೆ ಮಾಡಿದ ಖರ್ಚಿನಿಂದಲೇ ಹೆಚ್ಚಿನ ಸದ್ದು ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment