/newsfirstlive-kannada/media/post_attachments/wp-content/uploads/2024/07/narendra-modi-Team-India.jpg)
ನವದೆಹಲಿ: ಟಿ20 ವಿಶ್ವಕಪ್ ಗೆದ್ದು ಬೀಗಿದ ಟೀಂ ಇಂಡಿಯಾ ಆಟಗಾರರು ತವರಿಗೆ ಮರಳಿದ್ದು ಅದ್ಧೂರಿ ಸ್ವಾಗತ ಸಿಕ್ಕಿದೆ. ದೆಹಲಿಗೆ ಬಂದಿಳಿದ ಚಾಂಪಿಯನ್ ತಂಡವನ್ನ ಬಿಸಿಸಿಐ ಆತ್ಮೀಯವಾಗಿ ಬರಮಾಡಿಕೊಂಡಿದೆ. ವಿಶ್ವಕಪ್ ಗೆದ್ದು ಭಾರತಕ್ಕೆ ಬಂದಿರುವ ಆಟಗಾರರನ್ನ ಪ್ರಧಾನಿ ನರೇಂದ್ರ ಮೋದಿ ವಿಶೇಷವಾಗಿ ಗೌರವಿಸಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ ಹೊತ್ತು ಭಾರತಕ್ಕೆ ಬಂದ ರೋಹಿತ್ ಪಡೆ.. ತೆರೆದ ಬಸ್ನಲ್ಲಿ ಮೆರವಣಿಗೆ, ಟ್ರೋಫಿ ಜೊತೆಗೆ ಸಂಭ್ರಮಾಚರಣೆ
ಇಂದು ಬೆಳಗ್ಗೆ ಸೌಥ್ ಆಫ್ರಿಕಾದಿಂದ ಬಂದ ಟೀಂ ಇಂಡಿಯಾ ಆಟಗಾರರನ್ನ ಪ್ರಧಾನಿ ಮೋದಿ ಅವರು ಭೇಟಿಯಾದರು. ನವದೆಹಲಿಯ ಪ್ರಧಾನಿ ನಿವಾಸದಲ್ಲಿ ಭಾರತ ತಂಡಕ್ಕೆ ಬ್ರೇಕ್ ಫಾಸ್ಟ್ ಆಯೋಜಿಸಲಾಗಿತ್ತು. ಟೀಂ ಇಂಡಿಯಾ ಆಟಗಾರರನ್ನು ಆತ್ಮೀಯವಾಗಿ ಬರಮಾಡಿಕೊಂಡ ಪ್ರಧಾನಿ ಮೋದಿ ಅವರು ಚಾಂಪಿಯನ್‌ಗಳಿಗೆ ಶುಭಾಶಯ ಕೋರುವುದರ ಜೊತೆ ಖುಷಿಯನ್ನು ಸೆಲೆಬ್ರೇಟ್ ಮಾಡಿದ್ದಾರೆ.
ಕ್ಯಾಪ್ಟನ್ ರೋಹಿತ್ ಶರ್ಮಾ ಅವರ ತಂಡ ವಿಶ್ವಕಪ್ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ಆಗಮಿಸಿದ್ದರು. ಈ ವೇಳೆ ಪ್ರತಿಯೊಬ್ಬ ಆಟಗಾರರಿಗೂ ಶುಭಾಶಯ ತಿಳಿಸಿದ ನರೇಂದ್ರ ಮೋದಿ ಅವರು ವಿಶ್ವಕಪ್ ಜೊತೆ ಫೋಟೋಗೆ ಪೋಸ್ ಕೊಟ್ಟರು. ಈ ವೇಳೆ ಕೋಚ್ ರಾಹುಲ್ ದ್ರಾವಿಡ್, ಕ್ಯಾಪ್ಟನ್ ರೋಹಿತ್ ಶರ್ಮಾ ಅವರ ಕೈಯನ್ನು ಮೋದಿ ಅವರು ಹಿಡಿದುಕೊಂಡಿದ್ದಾರೆ.
Prime Minister Narendra Modi meets with the champion Indian national cricket team, Team India. pic.twitter.com/8VbqIiQ8O9
— Political Kida (@PoliticalKida)
Prime Minister Narendra Modi meets with the champion Indian national cricket team, Team India. pic.twitter.com/8VbqIiQ8O9
— Political Kida (@PoliticalKida) July 4, 2024
">July 4, 2024
ಟೀಂ ಇಂಡಿಯಾ ಆಟಗಾರರ ಜೊತೆ ಗಂಟೆಗೂ ಹೆಚ್ಚು ಕಾಲ ಕಳೆದ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಕಪ್ ಗೆದ್ದ ಕ್ಷಣಗಳ ಬಗ್ಗೆ ಮಾತನಾಡಿದರು. ನನಗೆ ನೀವೆಲ್ಲಾ ಟಿ20 ವರ್ಲ್ಡ್ ಕಪ್ ಗೆದ್ದೇ ಗೆಲ್ಲುವ ವಿಶ್ವಾಸವಿತ್ತು. ಮುಂದಿನ ಸರಣಿಗಳನ್ನು ಗೆಲ್ಲುವ ಬಗ್ಗೆ ಆಟಗಾರರ ಜೊತೆ ನರೇಂದ್ರ ಮೋದಿ ಚರ್ಚೆ ನಡೆಸಿದರು. ರಾಹುಲ್ ದ್ರಾವಿಡ್, ಜಸ್ಪ್ರೀತ್ ಬೂಮ್ರಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಜೊತೆ ಸೇರಿ ಎಲ್ಲಾ ಆಟಗಾರರ ಜೊತೆ ಮೋದಿ ಮಾತುಕತೆ ನಡೆಸಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ