newsfirstkannada.com

ವಿನೇಶ್​ ಫೋಗಟ್ ಮುಂದಿರೋ ಆಯ್ಕೆಗಳೇನು? ಪಿಟಿ ಉಷಾ ಜೊತೆ ಪ್ರಧಾನಿ ಮೋದಿ ಚರ್ಚೆ; ಹೇಳಿದ್ದೇನು?

Share :

Published August 7, 2024 at 3:21pm

Update August 7, 2024 at 3:28pm

    ಘಟಾನುಘಟಿ ಕುಸ್ತಿಪಟುಗಳನ್ನು ಮಕಾಡೆ ಮಲಗಿಸಿದ್ದ ಪೋಗಟ್

    ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ವಿನೇಶ್​ಗೆ ಎದುರಾದ ಸವಾಲುಗಳಾವುವು?

    ಪಿ.ಟಿ. ಉಷಾ ಅವರ ಜೊತೆ ಪ್ರಧಾನಿ ಮೋದಿ ಮಹತ್ವದ ಮಾತುಕತೆ

ಪ್ಯಾರಿಸ್: ಒಲಿಂಪಿಕ್ಸ್ ಅಂಗಳದಲ್ಲಿ ಮಹಾ ಘಟಾಘಟಿಗಳನ್ನು ಚಿತ್ ಕೆಡವಿ ಮೊಟ್ಟ ಮೊದಲ ಬಾರಿಗೆ ಒಲಿಂಪಿಕ್ಸ್ ಅಂಗಳದಲ್ಲಿ ಭಾರತೀಯ ಹೆಮ್ಮೆಯ ನಾರಿಯೊಬ್ಬಳು ಕುಸ್ತಿ ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಶಿಸಿದ್ದರು. ಪ್ಯಾರಿಸ್ ಅಖಾಡದಲ್ಲಿ ಭಾರತದ ಗರಿಮೆಗೆ ಮತ್ತಷ್ಟು ಗರಿ ಮೂಡಿಸಿದ್ದ ವಿನೇಶ್ ಪೋಗಟ್​ ಈಗ ಫೈನಲ್ ಪಂದ್ಯದಿಂದ ಅನರ್ಹಗೊಂಡಿದ್ದಾರೆ. 100 ಗ್ರಾಂ ತೂಕ ಹೆಚ್ಚಾಗಿದ್ದೊಂದೇ ಕಾರಣವನ್ನು ಮುಂದಿಟ್ಟುಕೊಂಡು ಈಗ ಪೋಗಟ್​ರನ್ನ ಆಚೆ ಇಡಲಾಗಿದೆ.

ಇದನ್ನೂ ಓದಿ: ವಿನೇಶ್‌ ಫೋಗಟ್‌ 100 ಗ್ರಾಂ ತೂಕ ಹೆಚ್ಚಾಗಿದ್ದು ಹೇಗೆ? ಒಲಿಂಪಿಕ್ಸ್‌ನಲ್ಲೂ ಕುಸ್ತಿಪಟುಗೆ ಮೋಸ ಆಯ್ತಾ?

ಒಲಿಂಪಿಕ್ಸ್​ ಕಣದಲ್ಲಿ ಕುಸ್ತಿಪಟು ವಿನೇಶ್ ಎದುರಿಸಿದ್ದ ಸವಾಲುಗಳು ಸಾಮಾನ್ಯಗಳಲ್ಲ. ವಿಶ್ವದ ನಂಬರ್ ಒನ್ ಕುಸ್ತಿ ಪಟುಗಳನ್ನು ನೆಲಕ್ಕೆ ಕೆಡವಿ ಅಂತಿಮ ಪಂದ್ಯಕ್ಕೆ ಪ್ರವೇಶ ಪಡೆದಿದ್ದರು. 2020ರಲ್ಲಿ ಟೋಕಿಯೊ ಚಾಂಪಿಯನ್ ಯುಯಿ ಸುಸಾಕಿಯನ್ನ ಚಿತ್ ಕೆಡುವುವ ಮೂಲಕ ಅವರು ಕ್ವಾರ್ಟರ್​ಫೈನಲ್​ಗೆ ಅರ್ಹತೆ ಪಡೆದಿದ್ದರು.

ಇದನ್ನೂ ಓದಿ: ವಿನೇಶ್ ಫೋಗಟ್ ಆಸ್ಪತ್ರೆಗೆ ದಾಖಲು.. ದೇಹದ ತೂಕ ದಿಢೀರ್‌ ಹೆಚ್ಚಾಗಲು ಕಾರಣವೇನು? ಅಸಲಿಗೆ ಆಗಿದ್ದೇನು?

ನಂತರ ಕ್ವಾರ್ಟರ್​ ಫೈನಲ್​ನಲ್ಲಿ ವಿನೇಶ್ ಉಕ್ರೇನ್​ ಒಕ್ಸಾನಾ ಲಿವಾಚ್​ ಅವರನ್ನು ಎದುರಿಸಿದ್ದರು. ಲಿವಾಚ್​ಳನ್ನ 7-5 ಅಂತರದಲ್ಲಿ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದ ಕುಸ್ತಿ ವೀರಾಂಗಣಿ, ಅಂತಿಮ ಸುತ್ತಿನ ಪಂದ್ಯದಲ್ಲಿ ಕ್ಯೂಬಾದ ಯುಸ್ನೆಲಿಸ್ ಗುಜ್ಮಾನ್ ಲೋಪೆಜ್​ ಅವರನ್ನು ಸೋಲಿಸಿದ್ರು ಆ ಸಂದರ್ಭದಲ್ಲಿಯೇ ಪೋಗಾಟ್ ಅವರ ಕೊರಳಿಗೆ ಪದಕ ಬೀಳುವುದು ಖಚಿತವಾಗಿ ಹೋಗಿತ್ತು. ಆದ್ರೆ ಅದು ಚಿನ್ನವಾ, ಬೆಳ್ಳಿಯಾ ಅನ್ನೋದು ನಿರ್ಧಾರವಾಗುವ ಮುನ್ನವೇ ವಿನೇಶ್​ ಪೋಗಟ್ ತೂಕದ ಕಾರಣವಾಗಿ ಫೈನಲ್​ನ ಅಖಾಡದಲ್ಲಿ ಸೆಣೆಸಾಡುವುದರಿಂದ ಅನರ್ಹಗೊಂಡಿದ್ದಾರೆ.

ಸುಮ್ಮನೆ ಕುಳಿತಿಲ್ಲ ಭಾರತ: ಕೇಂದ್ರ ಸರ್ಕಾರದ ಮುಂದಿನ ನಡೆಯೇನು?
ವಿನೇಶ್ ಪೋಗಟ್​ ಅನರ್ಹತೆಯ ವಿಷಯ ಈಗ ಇಡೀ ದೇಶಾದ್ಯಂತ ಸುದ್ದಿಯಾಗಿದೆ. ಎಲ್ಲಾ ಸವಾಲುಗಳನ್ನು ಟೀಕೆಗಳನ್ನು ಮೆಟ್ಟಿ ನಿಂತು ಕುಸ್ತಿ ಅಂಗಳದಲ್ಲಿಯೇ ತನ್ನ ಸಾಮರ್ಥ್ಯವನ್ನು ಸಾಬೀತು ಮಾಡಿದ ವಿನೇಶ್​ಗೆ ಹೀಗಾಗಿದ್ದು ಎಲ್ಲರಿಗೂ ಬೇಸರ ತರಿಸಿದೆ. ಇದನ್ನು ಮನಗಂಡಿರುವ ಪ್ರಧಾನಿ ನರೇಂದ್ರ ಮೋದಿ, ಇಂಡಿಯನ್ ಒಲಿಂಪಿಕ್ಸ್ ಅಸೋಸಿಯೇಷನ್​ನ ಅಧ್ಯಕ್ಷೆ ಪಿ.ಟಿ ಉಷಾ ಅವರೊಂದಿಗೆ ಮಾತನಾಡಿದ್ದಾರೆ. ಪಿ.ಟಿ.ಉಷಾರಿಂದ ಸಂಪೂರ್ಣ ಮಾಹಿತಿ ಪಡೆದಿರುವ ಪ್ರಧಾನಿ ನರೇಂದ್ರ ಮೋದಿ ವಿನೇಶ್ ಪೋಗಟ್​ಗೆ ಬೆಂಬಲಕ್ಕೆ ನಿಲ್ಲಲು ಏನೆಲ್ಲಾ ಸಾಧ್ಯವೋ ಅದನ್ನೆಲ್ಲಾ ಮಾಡಲು ಸೂಚನೆ ನೀಡಿದ್ದಾರೆ. ಅಗತ್ಯ ಬಿದ್ದಲ್ಲಿ ಪ್ರಬಲ ಪ್ರತಿಭಟನೆ ದಾಖಲಿಸಲೂ ಮುಂದಾಗಿ ಎಂದು ಸೂಚನೆ ನೀಡಿದ್ದಾರೆ. ಆದ್ರೆ ಸದ್ಯಕ್ಕೆ ಒಲಿಂಪಿಕ್ಸ್​ ನಿಯಮದ ಅನ್ವಯ ಅನರ್ಹತೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯಲ್ಲಿ ಅವಕಾಶವಿಲ್ಲ. ಹೀಗಾಗಿ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಅನ್ನೋದು ಸದ್ಯಕ್ಕೆ ಕುತೂಹಲ ಮೂಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿನೇಶ್​ ಫೋಗಟ್ ಮುಂದಿರೋ ಆಯ್ಕೆಗಳೇನು? ಪಿಟಿ ಉಷಾ ಜೊತೆ ಪ್ರಧಾನಿ ಮೋದಿ ಚರ್ಚೆ; ಹೇಳಿದ್ದೇನು?

https://newsfirstlive.com/wp-content/uploads/2024/08/pt-usha-and-pm-modi-1.jpg

Load More