/newsfirstlive-kannada/media/post_attachments/wp-content/uploads/2025/04/MODI_MEETING-1.jpg)
ಪ್ರಧಾನಿ ನರೇಂದ್ರ ಮೋದಿ ನಾಳೆ ಕೇಂದ್ರ ಭದ್ರತಾ ಮಂಡಳಿಯ ಸಭೆ ಕರೆದಿದ್ದಾರೆ. ಮತ್ತೊಂದು ಬಾರಿಗೆ ಕೇಂದ್ರ ಭದ್ರತಾ ಮಂಡಳಿ ಸಭೆ ನಡೆಸಲಿದ್ದು, ಸಭೆಯಲ್ಲಿ ದೇಶದ ಆಂತರಿಕ ಮತ್ತು ಗಡಿ ಭಾಗದಲ್ಲಿನ ಭದ್ರತೆಯ ಜೊತೆಗೆ ದೇಶದ ರಕ್ಷಣಾ ಒಪ್ಪಂದಗಳ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ.
ಈ ಸಭೆಯಲ್ಲಿ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಜೈಶಂಕರ್, ಗೃಹ ಸಚಿವ ಅಮಿತ್ ಶಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರಾಷ್ಟ್ರೀಯ ಭದ್ರತೆ ಸಲಹೆಗಾರ ಅಜಿತ್ ದೋವಲ್ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: ದೇಶದ 244 ಜಿಲ್ಲೆಗಳಲ್ಲಿ ನಾಳೆ ಮಾಕ್ ಡ್ರಿಲ್.. ಈ ಯುದ್ಧ ಕವಾಯತ್ನ ಉದ್ದೇಶ ಏನು..?
ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ಕರಿಛಾಯೆ ಜೋರಾಗ್ತಿದೆ. ಹೀಗಾಗಿ ಮೊನ್ನೆ ಪಂಜಾಬ್ ಗಡಿಯಲ್ಲಿ ಸೇನೆ ಮಾಕ್ ಡ್ರಿಲ್ ಮಾಡಿದಂತೆ ದೇಶಾದ್ಯಂತ ಮಾಕ್ ಡ್ರಿಲ್ ಮಾಡಲು ಸರ್ಕಾರ ಆಜ್ಞೆ ಹೊರಡಿಸಿದೆ. ಜಿಲ್ಲೆಗಳಿಂದ ಹಳ್ಳಿವರೆಗೂ ಈ ಕವಾಯತು ನಡೆಸಲು ಸೂಚಿಸಲಾಗಿದೆ. ಈ ನಡುವೆ ಮತ್ತೆ ನಾಳೆ ಮೋದಿ ಸಭೆ ಕರೆದಿರೋದು ಭಾರೀ ಕುತೂಹಲ ಮೂಡಿಸಿದೆ. ಪಾಕ್ ವಿರುದ್ಧ ಮಿಲಿಟರಿ ಆಪರೇಷನ್ ನಡೆಯೋದು ಪಕ್ಕಾ ಆಗ್ತಿದೆ ಅಂತಾ ಹಲವರು ಮಾತಾಡಿಕೊಳ್ತಿದ್ದಾರೆ.
ಇದನ್ನೂ ಓದಿ: ನಾಗರಿಕರ ಸ್ವಯಂ ರಕ್ಷಣೆಗಾಗಿ ಮಾಕ್ ಡ್ರಿಲ್.. ದೇಶದಲ್ಲಿ ನಾಳೆ ಏನೆಲ್ಲ ನಡೆಯಲಿದೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ