newsfirstkannada.com

ದಿನಕ್ಕೆ 3 ಗಂಟೆ 30 ನಿಮಿಷ ಮಾತ್ರ ನಿದ್ದೆ.. ಪ್ರಧಾನಿ ಮೋದಿ ದಣಿವರಿಯದೆ ದುಡಿಯುವ ರಹಸ್ಯ ಬಯಲು; ಏನದು?

Share :

Published February 12, 2024 at 6:26am

    ಆರೋಗ್ಯಕರ ಜೀವನದ ರಹಸ್ಯ ಬಿಚ್ಚಿಟ್ಟ ಪ್ರಧಾನಿ ನರೇಂದ್ರ ಮೋದಿ

    ಪ್ರತಿ ದಿನ ಸಂಜೆ 6 ಗಂಟೆ ಬಳಿಕ ಏನೂ ತಿನ್ನುವುದಿಲ್ಲವಂತೆ ನಮೋ!

    ಸಂಸದರ ಜೊತೆ ಊಟ​ ಮಾಡಿದ ನರೇಂದ್ರ ಮೋದಿ ಹೇಳಿದ್ದೇನು?

ನರೇಂದ್ರ ಮೋದಿ ದೇಶದ ಹೆಮ್ಮೆಯ ಪ್ರಧಾನಿ. ಇಡೀ ವಿಶ್ವವನ್ನೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಧೀಮಂತ ನಾಯಕ. 10 ವರ್ಷಗಳಿಂದ ದಣಿವರಿಯದೇ ದೇಶಕ್ಕಾಗಿ ದುಡಿಯುತ್ತಿರೋ ಮೋದಿಯ ಸಕ್ಸಸನ್​ ಮತ್ತೊಂದು ಬಿಗ್​ ಸೀಕ್ರೆಟ್​ ರಿವೀಲ್​ ಆಗಿದೆ.

10 ವರ್ಷಗಳಲ್ಲಿ ಹತ್ತಾರು ದೇಶಗಳಿಗೆ ಭೇಟಿ. ನೂರಾರು ರೋಡ್​ ಶೋಗಳಲ್ಲಿ ಭಾಗಿ. ಸಾವಿರಾರು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರೋ ಪ್ರಧಾನಿ. ಒಂದು ದಿನವೂ ರಜೆ ಇಲ್ಲ, ರೆಸ್ಟೂ ಇಲ್ಲ, ಆಸ್ಪತ್ರೆ ಸೇರಿದ್ದೇ ಇಲ್ಲ. ನಮೋ ಎನರ್ಜಿಯನ್ನ ದೇಶದ ಜನತೆ ಮಾತ್ರವಲ್ಲ ಇಡೀ ವಿಶ್ವವೇ ಮೆಚ್ಚಿ ಕೊಂಡಾಡಿದೆ. ಇದಕ್ಕೆಲ್ಲ ಮೋದಿಯ ಲೈಫ್​ ಸ್ಟೈಲ್​ ಕಾರಣ. ಆ ರಹಸ್ಯವನ್ನ ಸ್ವತಃ ಮೋದಿಯೇ ಸಂಸದರ ಮುಂದೆ ಬಿಚ್ಚಿಟ್ಟಿದ್ದಾರೆ.

‘ದಿನಕ್ಕೆ ಕೇವಲ ಮೂರುವರೆ ಗಂಟೆ ಮಾತ್ರ ನಿದ್ರೆ’

ಮೋದಿ ದಿನಕ್ಕೆ ಕೇವಲ ಮೂರುವರೆ ಗಂಟೆ ಮಾತ್ರ ನಿದ್ದೆ ಮಾಡ್ತಾರಂತೆ. ಅಷ್ಟೇ ಅಲ್ಲ ಸಂಜೆ 6 ಗಂಟೆ ಬಳಿಕ ಪಿಎಂ ಏನನ್ನೂ ಸೇವಿಸುವುದಿಲ್ಲವೆಂದು ಖುದ್ದು ಪ್ರಧಾನಿಯೇ ತಮ್ಮ ಲೈಫ್​ಸ್ಟೈಲ್​ ​ಅನ್ನ ಸಂಸದರ ಮುಂದೆ ರಿವೀಲ್​ ಮಾಡಿದ್ದಾರೆ. ಮೋದಿ ವಿರೋಧ ಪಕ್ಷದ ಸಂಸದರ ಜೊತೆ ಸಂಸತ್​ ಕ್ಯಾಂಟೀನ್​​ನಲ್ಲಿ ಊಟ ಮಾಡಿದ್ರು. ಈ ವೇಳೆ ಪ್ರಧಾನಿ ಅವರ ಆರೋಗ್ಯಕರ ಜೀವನದ ರಹಸ್ಯವನ್ನ ಬಿಚ್ಚಿಟ್ಟಿದ್ದಾರೆ. ದಿನಕ್ಕೆ ಕೇವಲ 3.5 ಗಂಟೆಗಳ ಕಾಲ ತಾವು ನಿದ್ರೆ ಮಾಡೋದಾಗಿ ಹೇಳಿರುವ ಮೋದಿ, ಸಂಜೆ 6 ಗಂಟೆಯ ಬಳಿಕ ಏನೂ ತಿನ್ನುವುದಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ ಆರೋಗ್ಯಕರ ಜೀವನಕ್ಕಾಗಿ ಯೋಗ ಮಾಡುವ ನಮೋ ಆಗಾಗ ಉಪವಾಸಗಳನ್ನು ಮಾಡುವ ವಿಷಯವನ್ನೂ ಸಂಸದರ ಮುಂದೆ ತೆರೆದಿಟ್ಟಿದ್ದಾರೆ. ಪ್ರಧಾನಿ ಜೊತೆ ಸಮಯ ಕಳೆದ ಬಳಿಕ ಸಂಸದ ಎಲ್​. ಮುರುಗನ್​ ನಮೋ ಲೈಫ್​ಸ್ಟೈಲ್​ ಕೇಳಿ​ ಅಚ್ಚರಿ ವ್ಯಕ್ತಪಡಿಸಿದ್ರು.

8 ಸಂಸದರಿಗೆ ತುಂಬಾ ವಿಶೇಷವಾದ ದಿನ. ನಮಗೆಲ್ಲ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಊಟ ಮಾಡೋ ಅವಕಾಶ ಸಿಕ್ಕಿತ್ತು. ಸರ್​ ಕೇವಲ ಮೂರುವರೆ ಗಂಟೆಗಳ ಅಷ್ಟೇ ಮಲಗೋದಾಗಿ ಹೇಳಿದ್ರು. ಅಷ್ಟೇ ಅಲ್ಲ 6 ಗಂಟೆ ಬಳಿಕ ಏನನ್ನೂ ಸೇವಿಸೋಲ್ಲ ಅಂತ ಸರ್​ ಹೇಳಿದ್ರು. ನಮಗೆ ನಮ್ಮ ಪ್ರಧಾನ ಮಂತ್ರಿಗಳ ಜೊತೆ ಕಾಲ ಕಳೆಯಲು, ಅವ್ರಿಂದ ಹಲವು ಅಂಶ ಕಲಿಯಲು ಒಳ್ಳೆಯ ಸಮಯ ಸಿಕ್ಕಿತು.

– ಎಲ್​. ಮುರುಗನ್​, ಸಂಸದ

45 ನಿಮಿಷಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಜೊತೆ ಸಮಯ ಕಳೆದಿದ್ದಕ್ಕೆ ಸಂಸದರು ಸಂತಸಗೊಂಡಿದ್ದಾರೆ. ಬರೀ ಬಿಜೆಪಿ ಸಂಸದರಷ್ಟೇ ಅಲ್ಲ, ಎಲ್ಲಾ ಪಕ್ಷದ 8 ಸಂಸದರ ಜೊತೆ ಪ್ರಧಾನಿ ಸಮಯ ಕಳೆದ್ರು. ದೇಶದ ಪ್ರಧಾನಿಯಾಗಿ ಅಲ್ಲ, ಸಾಮಾನ್ಯ ವ್ಯಕ್ತಿಯಂತೆ ನಮ್ಮ ಜೊತೆ ಕುಳಿತು ಹೊಸ ಸಂಸತ್​ನ ಕ್ಯಾಂಟೀನ್​ನಲ್ಲಿ ಊಟ ಮಾಡಿದ್ರು ಎಂದು ಮುರುಗನ್​ ಪ್ರಧಾನಿಯನ್ನ ಹಾಡಿ ಹೊಗಳಿದ್ರು. ದಣಿವರೆಯದ ದೇಶದ ದೊರೆಯ ಲೈಫ್​ಸ್ಟೈಲ್​ ಕೇಳಿ ಸಂಸದರು ಅಚ್ಚರಿಗೊಂಡಿದ್ದಷ್ಟೇ ಅಲ್ಲ, ಅವರಿಂದ ಪ್ರೇರೇಪಿತರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಿನಕ್ಕೆ 3 ಗಂಟೆ 30 ನಿಮಿಷ ಮಾತ್ರ ನಿದ್ದೆ.. ಪ್ರಧಾನಿ ಮೋದಿ ದಣಿವರಿಯದೆ ದುಡಿಯುವ ರಹಸ್ಯ ಬಯಲು; ಏನದು?

https://newsfirstlive.com/wp-content/uploads/2024/01/PM_MODI_RAM_TEMPLE.jpg

Load More