‘ಗುರಿ, ಸಮಯ ನೀವೇ ನಿರ್ಧರಿಸಿ..’ ಮೋದಿ ಮೀಟಿಂಗ್​ನಲ್ಲಿ ತೆಗೆದುಕೊಂಡು 5 ನಿರ್ಧಾರಗಳು ಏನೇನು..?

author-image
Ganesh
Updated On
‘ಗುರಿ, ಸಮಯ ನೀವೇ ನಿರ್ಧರಿಸಿ..’ ಮೋದಿ ಮೀಟಿಂಗ್​ನಲ್ಲಿ ತೆಗೆದುಕೊಂಡು 5 ನಿರ್ಧಾರಗಳು ಏನೇನು..?
Advertisment
  • ರಾಜನಾಥ್‌ ಸಿಂಗ್ ಸೇರಿ 3 ಸೇನಾ ಮುಖ್ಯಸ್ಥರ ಜೊತೆ ಮೋದಿ ಸಭೆ
  • ಪಹಲ್ಗಾಮ್ ಜಿಪ್​ಲೈನ್​ ಆಪರೇಟರ್​ನನ್ನ ರಿಲೀಸ್​ ಮಾಡಿದ NIA
  • ವಶಕ್ಕೆ ಪಡೆದ ಕೆಲವೇ ಗಂಟೆಗಳಲ್ಲಿ ಆತನ ರಿಲೀಸ್ ಮಾಡಿದ್ದೇಕೆ..?

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕು ಎಂಬ ಆಗ್ರಹ ದೇಶಾದ್ಯಂತ ಕೇಳಿ ಬಂದಿದೆ. ಬೆನ್ನಲ್ಲೇ ಪ್ರಧಾನಿ ಮೋದಿ ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ಇನ್ನೂ ಉಗ್ರರ ದಾಳಿ ಟೈಂನಲ್ಲಿ ಅಲ್ಲಾಹು ಅಕ್ಬರ್ ಅಂತ ಕೂಗಿ ಎನ್​ಐಎ ಆಫೀಸ್​ಗೆ ಗೆಸ್ಟ್​ ಆಗಿದ್ದ ಜಿಪ್​ಲೈನ್​ ಆಪರೇಟರ್ ರಿಲೀಸ್​ ಆಗಿದ್ದಾನೆ. ಈ ಬಗ್ಗೆ ಕಂಪ್ಲೀಟ್​ ಡೀಟೇಲ್ಸ್​ ಇಲ್ಲಿದೆ.

ಗುರಿ, ಸಮಯ ನೀವೇ ನಿರ್ಧರಿಸಿ ಎಂದು ಸೇನೆಗಳಿಗೆ ಫ್ರೀ ಹ್ಯಾಂಡ್‌

ಭಾರತೀಯ ಸೇನೆಗೆ ಮೋದಿ ಸರ್ಕಾರ ಫುಲ್​ ಪವರ್​ ಕೊಟ್ಟಿದೆ. ಸದ್ಯಕ್ಕೀಗ ಇಂಡಿಯನ್​ ಆರ್ಮಿ ಕೈಯಲ್ಲಿ ಪಾಕಿಸ್ತಾನದ ಭವಿಷ್ಯ ಅಡಗಿದೆ. ಅದಕ್ಕೆ ಕಾರಣ ದೆಹಲಿಯ 7 ಲೋಕ ಕಲ್ಯಾಣ ಮಾರ್ಗದಲ್ಲಿರೋ ಪ್ರಧಾನಿಗಳ ಅಧಿಕೃತ ನಿವಾಸದಲ್ಲಿ ನಡೆದ ಮಹತ್ವದ ಮೀಟಿಂಗ್. ಪ್ರಧಾನಿ ನರೇಂದ್ರ ಮೋದಿ ನಿನ್ನೆ ಹೈವೋಲ್ಟೇಜ್ ಮೀಟಿಂಗ್ ನಡೆಸಿದ್ದಾರೆ. ಮೂರು ವಿಭಾಗಗಳ ಸೇನಾ ಮುಖ್ಯಸ್ಥರ ಜೊತೆ ಮಹತ್ವದ ಚರ್ಚೆ ನಡೆಸಿ ಮಹತ್ವದ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ. ಪಾಕ್ ಮೇಲೆ ಯುದ್ಧ ಮಾಡಬೇಕೋ.. ಬೇಡವೋ.. ಎಂಬ ಬಗ್ಗೆ ಚರ್ಚೆ ನಡೆದಿದ್ದು, ಈ ವೇಳೆ ಭಾರತೀಯ ಸೇನೆಗೆ ಪ್ರಧಾನಿ ಮೋದಿ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ.

ಇದನ್ನೂ ಓದಿ: ಈ ಬಾರಿ ಕೊಹ್ಲಿ ಗತ್ತು ಬೇರೆ ಲೆವೆಲ್​​ನಲ್ಲೇ ಇದೆ.. ಆರ್​ಸಿಬಿ ಅಭಿಮಾನಿಗಳು ಓದಲೇಬೇಕಾದ ಸ್ಟೋರಿ..!

publive-image

ಸೇನೆಗೆ ಪರಮಾಧಿಕಾರ!

  • ಸಭೆಯಲ್ಲಿ 3 ಸೇನೆಗಳಿಗೂ ಮುಕ್ತ ಸ್ವಾತಂತ್ರ್ಯ ನೀಡಿದ ಮೋದಿ
  •  ಹೋರಾಡಲು ಕೇಂದ್ರ ಸರ್ಕಾರದಿಂದ ಸೇನೆಗೆ ಮುಕ್ತ ಅವಕಾಶ
  •  ಇನ್ನು ಮುಂದೆ ತನ್ನ ಕಾರ್ಯ ನಡೆಸಲು ಯಾವ ಅಡೆತಡೆ ಇಲ್ಲ
  •  ನಮಗೆ ಸೇನೆ ಮೇಲೆ ಪೂರ್ಣ ಪ್ರಮಾಣದಲ್ಲಿ ನಂಬಿಕೆ ಇದೆ
  •  ಅವಕಾಶ ಕೊಟ್ಟಿದ್ದೀವಿ, ಸಮಯ ಮತ್ತು ಸ್ಥಳ ನೀವೆ ನಿರ್ಧರಿಸಿ

ಪಹಲ್ಗಾಮ್ ಜಿಪ್​ಲೈನ್​ ಆಪರೇಟರ್​ ರಿಲೀಸ್

ಭಯೋತ್ಪಾದಕ ದಾಳಿಯ ಸಮಯದಲ್ಲಿ ರೋಪ್ ಕ್ರಾಸಿಂಗ್ ವೇಳೆ ಅಲ್ಲಾಹು ಅಕ್ಬರ್ ಎಂದು ಮೂರು ಬಾರಿ ಕೂಗಿದ್ದ ಜಿಪ್​ಲೈನ್ ಆಪರೇಟರ್ ಮುಜಾಮಿಲ್​ನನ್ನ ಎನ್​ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ರು. ಉಗ್ರರ ದಾಳಿಯಲ್ಲಿ ಮುಜಾಮಿಲ್ ನೇರ ಕೈವಾಡವಿಲ್ಲವಾದ್ರೂ ಉಗ್ರರು ಗುಂಡು ಹಾರಿಸುವ ವೇಳೆ ಮುಜಾಮಿಲ್ ಏಕೆ ಅಲ್ಲಾಹು ಅಕ್ಬರ್ ಅಂತ ಮೂರು ಬಾರಿ ಹೇಳಿದ ಎಂಬುದರ ಕುರಿತು ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಕೆಲ ಗಂಟೆಗಳ ವಿಚಾರಣೆ ಬಳಿಕ ಆತನನ್ನ ತನಿಖಾಧಿಕಾರಿಗಳು ಬಿಟ್ಟು ಕಳುಹಿಸಿದ್ದಾರೆ.

ಆಪರೇಟರ್ ದಾಳಿಗೂ ಮುನ್ನ ಅಲ್ಲಾಹು ಅಕ್ಬರ್ ಅಂತ ಕೂಗಿರೋದು ಸಾಮಾನ್ಯವಾಗಿ.. ಇದರ ಹಿಂದೆ ಯಾವುದೇ ಉದ್ದೇಶವಿಲ್ಲ.. ಹಿಂದೂಗಳು ಹೇಗೆ ಜೈ ಶ್ರೀ ರಾಮ್ ಎಂದು ಕೂಗುತ್ತಾರಲ್ಲ.. ಅದೇ ರೀತಿ ಆತ ಅಲ್ಲಾಹು ಅಕ್ಬರ್ ಎಂದು ಕೂಗಿದ್ದಾನೆ ಎಂದು ಹೇಳಲಾಗ್ತಿದೆ. ಒಟ್ನಲ್ಲಿ.. ಕೇಂದ್ರ ಸರ್ಕಾರ ತನ್ನ ಮೇಲೆ ಇದ್ದ ಭಾರವನ್ನ ಆರ್ಮಿಗೆ ವರ್ಗಾಯಿಸಿ ಸೇನೆಗೆ ಪರಮಾಧಿಕಾರ ಕೊಟ್ಟಿದೆ. ಈ ಅಧಿಕಾರವನ್ನ ಸೇನಾ ಮುಖ್ಯಸ್ಥರು ಯಾವ ರೀತಿ ನಿಭಾಯಿಸುತ್ತಾರೋ ಕಾದು ನೋಡಬೇಕಿದೆ.

ಇದನ್ನೂ ಓದಿ: ಭಕ್ತರ ಕಷ್ಟ ಕೇಳಿ ಮಾತನಾಡುವ AI ದೇವತೆ.. ಇದು ಜಗತ್ತಿನಲ್ಲೇ ಮೊಟ್ಟ ಮೊದಲು; ಏನಿದರ ವಿಶೇಷ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment