ಕಿರಿಯ ವಯಸ್ಸಿನಲ್ಲೇ ದೊಡ್ಡ ದಾಖಲೆ; 14 ವರ್ಷದ ವೈಭವ್ ಆಟದ ಬಗ್ಗೆ ಮೋದಿ ಏನಂದ್ರು?

author-image
Veena Gangani
Updated On
ಕಿರಿಯ ವಯಸ್ಸಿನಲ್ಲೇ ದೊಡ್ಡ ದಾಖಲೆ; 14 ವರ್ಷದ ವೈಭವ್ ಆಟದ ಬಗ್ಗೆ ಮೋದಿ ಏನಂದ್ರು?
Advertisment
  • 14 ವರ್ಷದ ವೈಭವ್ ಸೂರ್ಯವಂಶಿ ಸೆಂಚುರಿಗೆ ಎಲ್ಲರೂ ಫಿದಾ!
  • ದೇಶದ ಗಮನ ಸೆಳೆದಿದ್ದ ಯುವ ಆಟಗಾರ ವೈಭವ್ ಸೂರ್ಯವಂಶಿ
  • ಅತ್ಯಂತ ಕಿರಿಯ ವಯಸ್ಸಿನಲ್ಲೇ ದೊಡ್ಡ ದಾಖಲೆ ಎಂದ ಪ್ರಧಾನಿ ಮೋದಿ

ಐಪಿಎಲ್‌ನಲ್ಲಿ ಅತಿ ವೇಗದ ಸೆಂಚುರಿ ಬಾರಿಸಿದ 14 ವರ್ಷದ ವೈಭವ್ ಸೂರ್ಯವಂಶಿ ಇವತ್ತು ಕ್ರಿಕೆಟ್ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಇವನ ಆಕ್ರಮಣಾಕಾರಿ ಬ್ಯಾಟಿಂಗ್, ಬೌಂಡರಿ, ಸಿಕ್ಸರ್‌ ಶೈಲಿಗೆ ಮಾಜಿ ಕ್ರಿಕೆಟಿಗರು, ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದಾರೆ.

ಇದನ್ನೂ ಓದಿ:ಉಗ್ರರಿಗೆ ನೆರವು ನೀಡಿದ್ದ ಓವರ್ ಗ್ರೌಂಡ್ ವರ್ಕರ್ ಆತ್ಮಹತ್ಯೆ, ಭದ್ರತಾಪಡೆ ಕಣ್ಮುಂದೆಯೇ ನದಿಗೆ ಹಾರಿದ

publive-image

ಇದೀಗ ರಾಜಸ್ಥಾನ ರಾಯಲ್ಸ್​ ತಂಡದ ಆಟಗಾರ ವೈಭವ್ ಸೂರ್ಯವಂಶಿ ಶತಕ ಸಾಧನೆಯನ್ನು ಪ್ರಧಾನಿ ಮೋದಿ ಕೊಂಡಾಡಿದ್ದಾರೆ. ಬಿಹಾರದ ಪಾಟ್ನಾದಲ್ಲಿ ನಡೆದ ಖೇಲೋ ಇಂಡಿಯಾ ಯುವ ಕ್ರೀಡಾಕೂಟ ಸಮಾರಂಭದಲ್ಲಿ ವರ್ಚುವಲ್ ಮೂಲಕ ಮಾತನಾಡಿದ ಮೋದಿ, ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಇಡೀ ದೇಶದ ಗಮನ ಸೆಳೆದಿದ್ದಾರೆ.


">May 4, 2025

ಐಪಿಎಲ್‌ನಲ್ಲಿ ಬಿಹಾರದ ಮಗ ವೈಭವ್ ಸೂರ್ಯವಂಶಿಯ ಪ್ರದರ್ಶನವನ್ನು ನಾವೆಲ್ಲರೂ ನೋಡಿದ್ದೇವೆ. ವೈಭವ್ ಅತ್ಯಂತ ಕಿರಿಯ ವಯಸ್ಸಿನಲ್ಲಿ ಇಷ್ಟೊಂದು ದೊಡ್ಡ ದಾಖಲೆಯನ್ನು ನಿರ್ಮಿಸಿದ್ದಾರೆ. ಅವರ ಯಶಸ್ಸಿನ ಹಿಂದೆ ಅವರ ಕಠಿಣ ಪರಿಶ್ರಮವಿದೆ. ಅವರು ವಿವಿಧ ಹಂತಗಳಲ್ಲಿ ಕ್ರಿಕೆಟ್ ಆಡಿದ್ದು ಸಹ ಅವರಿಗೆ ಸಹಾಯ ಮಾಡಿತು. ಅವರು ಹೆಚ್ಚು ಆಟವಾಡಿದಷ್ಟೂ ಹೆಚ್ಚು ಪ್ರಕಾಶಮಾನವಾಗಿ ಹೊಳೆಯುತ್ತಾರೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment