newsfirstkannada.com

UAEನಲ್ಲಿ ಮೊದಲ ಹಿಂದೂ ದೇಗುಲ ಉದ್ಘಾಟನೆಯ ಕ್ಷಣ ಹೇಗಿತ್ತು.. ಫೋಟೋಗಳು ಇಲ್ಲಿವೆ

Share :

Published February 15, 2024 at 8:11am

  ಹಿಂದೂ ದೇವಸ್ಥಾನ ನಿರ್ಮಿಸಿದಕ್ಕೆ ಯುಎಇ ದೊರೆಗೆ ಮೋದಿ ಧನ್ಯವಾದ

  ಅರಬ್​ಗೆ ಭಾರತದಿಂದ ಹೆಚ್ಚಿನ ಭಕ್ತರು ಆಗಮಿಸುತ್ತಾರೆಂದ ಮೋದಿ

  ದುಬೈ ಪ್ರವಾಸ ಮುಗಿಸಿ ಕತಾರ್​ಗೆ ತೆರಳಿದ ಮೋದಿಗೆ ಅದ್ದೂರಿ ಸ್ವಾಗತ

ಯುಎಇ ರಾಜಧಾನಿ ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯವನ್ನ ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಿದ್ದಾರೆ. ಸ್ವಾಮಿನಾರಾಯಣ ಮಂದಿರದಲ್ಲಿ ದೀಪ ಬೆಳಗಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಭವ್ಯ ಮಂದಿರ ಉದ್ಘಾಟನೆ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಯುಎಇ ಒಂದು ಸುವರ್ಣ ಅಧ್ಯಾಯ ಬರೆದಿದೆ. ಹಿಂದೂ ದೇವಾಲಯ ಉದ್ಘಾಟನೆ ಹಿಂದೆ ಹಲವು ವರ್ಷಗಳ ಶ್ರಮವಿದೆ ಮತ್ತು ಅನೇಕರ ಕನಸುಗಳು ದೇವಾಲಯದೊಂದಿಗೆ ಸಂಪರ್ಕ ಹೊಂದಿವೆ ಎಂದು ತಿಳಿಸಿದ್ದಾರೆ.

ಸ್ವಾಮಿನಾರಾಯಣನ ಆಶೀರ್ವಾದವೂ ಇದೆ. ಇದು ಏಕತೆ ಮತ್ತು ಸಾಮರಸ್ಯದ ಸಂಕೇತವಾಗಿದೆ. ದೇವಾಲಯ ನಿರ್ಮಾಣದಲ್ಲಿ ಯುಎಇ ಸರ್ಕಾರದ ಪಾತ್ರ ಶ್ಲಾಘನೀಯವಾಗಿದೆ ಎಂದು ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿ ಅಬುಧಾಬಿಯಲ್ಲಿ ದೇಗುಲ ಉದ್ಘಾಟನೆ ಬಳಿಕ ಕತಾರ್‌ಗೆ ತೆರಳಿದ್ದಾರೆ. ಕತಾರ್‌ನ ದೋಹಾದಲ್ಲಿರೋ ಭಾರತೀಯ ಸಮುದಾಯ ಪ್ರಧಾನಿ ನರೇಂದ್ರ ಮೋದಿಗೆ ಅದ್ಧೂರಿ ಸ್ವಾಗತ ಕೋರಿತು.

ಬಳಿಕ ಪ್ರಧಾನಿ ಮೋದಿ ಕತಾರ್ ಎಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿಯೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದ್ರು. ಈ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ದೋಹಾದಲ್ಲಿ ಅನಿರೀಕ್ಷಿತ ಸ್ವಾಗತ ಸಿಕ್ಕಿದೆ. ಅನಿವಾಸಿ ಭಾರತೀಯರಿಗೆ ಕೃತಜ್ಞತೆ ಸಲ್ಲಿಸಿದ್ದು, ಫೋಟೋಗಳನ್ನ ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

UAEನಲ್ಲಿ ಮೊದಲ ಹಿಂದೂ ದೇಗುಲ ಉದ್ಘಾಟನೆಯ ಕ್ಷಣ ಹೇಗಿತ್ತು.. ಫೋಟೋಗಳು ಇಲ್ಲಿವೆ

https://newsfirstlive.com/wp-content/uploads/2024/02/MODI-52.jpg

Load More