newsfirstkannada.com

ಚುನಾವಣಾ ಬಾಂಡ್‌: ಪ್ರಧಾನಿ ಮೋದಿ ವಿರುದ್ಧ ರಾಹುಲ್‌ ಗಾಂಧಿ ಸ್ಫೋಟಕ ಹೇಳಿಕೆ; ಏನಂದ್ರು?

Share :

Published April 16, 2024 at 2:24pm

Update April 16, 2024 at 5:51pm

    ಸಂದರ್ಶನದಲ್ಲಿ ನರೇಂದ್ರ ಮೋದಿ ಅವರ ಕಣ್ಣುಗಳಲ್ಲಿ ಭಯ ಎದ್ದು ಕಾಣುತ್ತಿತ್ತು

    ಪ್ರಧಾನಿ ಮೋದಿ ನಿಜವಾದ ಕೆಲಸ ಏನಂದ್ರೆ ದೇಶದ ಜನರ ದಾರಿ ತಪ್ಪಿಸುವುದು

    ಚುನಾವಣಾ ಬಾಂಡ್‌ ಸಮರ್ಥಿಸಿಕೊಂಡಿದ್ದ ಪ್ರಧಾನಿ ವಿರುದ್ಧ ಹಿಗ್ಗಾಮುಗ್ಗ ವಾಗ್ದಾಳಿ

ಕೋಝಿಕ್ಕೋಡ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ದಾರೆ. ಕೇರಳದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆಯಷ್ಟೇ ANIಗೆ ವಿಶೇಷ ಸಂದರ್ಶನ ನೀಡಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ ಅವರು ಮೋದಿ ವಿರುದ್ಧ ಕಿಡಿಕಾರಿದ್ದಾರೆ. ವಿಶೇಷ ಸಂದರ್ಶನದಲ್ಲಿ ಪ್ರಧಾನಿ ಮೋದಿ ಅವರು ವಿವಾದಿತ ಚುನಾವಣಾ ಬಾಂಡ್‌ ಅನ್ನು ಸಮರ್ಥಿಸಿಕೊಂಡಿದ್ದಾರೆ. ಚುನಾವಣಾ ಬಾಂಡ್‌ನ ನಿಜವಾದ ವಿಷಯ ಗೊತ್ತಾದ್ರೆ ವಿಷಾದ ವ್ಯಕ್ತಪಡಿಸಬೇಕಾಗುತ್ತದೆ ಎಂದು ಹೇಳಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಸಂದರ್ಶನದ ಬಗ್ಗೆ ಮಾತನಾಡಿರುವ ರಾಹುಲ್ ಗಾಂಧಿ ಅವರು ಸಂದರ್ಶನದಲ್ಲಿ ಮೋದಿ ಅವರ ಕಣ್ಣುಗಳಲ್ಲಿ ಭಯ ಎದ್ದು ಕಾಣುತ್ತಿತ್ತು ಎಂದಿದ್ದಾರೆ.

ಇಂದು ನಡೆದ ಚುನಾವಣಾ ಱಲಿಯಲ್ಲಿ ಮಾತನಾಡಿರುವ ರಾಹುಲ್ ಗಾಂಧಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ರೀಮಂತರ ಸಾಧನ ಎಂದು ಕರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ದೇಶದ ಕೆಲವೇ ಕೆಲವು ಶ್ರೀಮಂತರ ಸಾಧನವಾಗಿದ್ದಾರೆ. ಮೋದಿ ಅವರ ನಿಜವಾದ ಕೆಲಸ ಏನಂದ್ರೆ ದೇಶದ ಜನರ ದಾರಿ ತಪ್ಪಿಸುವುದು. ಮತ್ತು ಭಾರತದ ಶ್ರೀಮಂತ ಉದ್ಯಮಿಗಳ ಬ್ಯಾಂಕ್‌ ಸಾಲವನ್ನು ಮನ್ನಾ ಮಾಡುವುದೇ ಆಗಿದೆ ಎಂದಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿ ಮೇಲೆ 242 ಕ್ರಿಮಿನಲ್ ಕೇಸ್; BL ಸಂತೋಷ್ ಹೇಳಿದ್ದೇನು?

ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ. ನಿರುದ್ಯೋಗ, ಬೆಲೆ ಏರಿಕೆ ಬಗ್ಗೆ ಉತ್ತರಿಸುವುದಿಲ್ಲ. ಬಿಜೆಪಿ, ಆರ್‌ಎಸ್‌ಎಸ್‌ ಸಂವಿಧಾನವನ್ನು ಬದಲಾವಣೆ ಮಾಡಲು ಮುಂದಾಗಿದೆ. 5 ರಿಂದ 6 ಅತಿ ದೊಡ್ಡ ಶ್ರೀಮಂತ ಉದ್ಯಮಿಗಳ ಸಾಧನವಾಗಿದ್ದಾರೆ. ದೇಶದ 20-25 ಮಂದಿಗೆ 16 ಲಕ್ಷ ಕೋಟಿ ರೂಪಾಯಿ ಕೊಟ್ಟಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಇದೇ ವೇಳೆ, ಚುನಾವಣಾ ಬಾಂಡ್‌ ಅನ್ನೋದು ಪ್ರಧಾನಿ ನರೇಂದ್ರ ಮೋದಿ ಅವರ ಮಾಸ್ಟರ್ ಸ್ಕೀಮ್‌ ಆಗಿದೆ. ಅದರ ಸಂಪೂರ್ಣ ಪ್ಲಾನ್ ರೆಡಿ ಮಾಡಿರೋದು ಅವರೇ ಆಗಿದ್ದಾರೆ. ಚುನಾವಣಾ ಬಾಂಡ್‌ನ ರಹಸ್ಯಗಳನ್ನು ಮುಚ್ಚಿಡಬಾರದು ಎಂದು ಸುಪ್ರೀಂಕೋರ್ಟ್ ಹೇಳಿದರೂ ಕೆಲವರ ಹೆಸರನ್ನು ಮುಚ್ಚಿಟ್ಟಿದ್ದು ಯಾಕೆ ಎಂದು ರಾಹುಲ್ ಗಾಂಧಿ ಅವರು ಪ್ರಶ್ನಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚುನಾವಣಾ ಬಾಂಡ್‌: ಪ್ರಧಾನಿ ಮೋದಿ ವಿರುದ್ಧ ರಾಹುಲ್‌ ಗಾಂಧಿ ಸ್ಫೋಟಕ ಹೇಳಿಕೆ; ಏನಂದ್ರು?

https://newsfirstlive.com/wp-content/uploads/2024/04/Rahul-gandhi-On-Pm-Modi.jpg

Load More