17 ವರ್ಷಗಳ ಬಳಿಕ 2ನೇ ಟಿ20 ವಿಶ್ವಕಪ್​ ಕಿರೀಟ.. ಪ್ರಧಾನಿ ನರೇಂದ್ರ ಮೋದಿ ಫುಲ್ ಖುಷ್.. ಏನಂದ್ರು..

author-image
Ganesh
Updated On
17 ವರ್ಷಗಳ ಬಳಿಕ 2ನೇ ಟಿ20 ವಿಶ್ವಕಪ್​ ಕಿರೀಟ.. ಪ್ರಧಾನಿ ನರೇಂದ್ರ ಮೋದಿ ಫುಲ್ ಖುಷ್.. ಏನಂದ್ರು..
Advertisment
  • ಟಿ20 ವಿಶ್ವಕಪ್​ ಗೆದ್ದು ಬೀಗಿದ ಟೀಮ್ ಇಂಡಿಯಾ
  • 11 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಗೆಲ್ಲುವ ಕನಸು ನನಸು
  • ರಾಹುಲ್ ಗಾಂಧಿ ಸೇರಿದಂತೆ ಗಣ್ಯರಿಂದ ಶುಭಾಶಯ

ರಣರೋಚಕ ಟಿ20 ವಿಶ್ವಕಪ್​ನ​ ಫೈನಲ್​ ಪಂದ್ಯವನ್ನ ಟೀಮ್ ಇಂಡಿಯಾ ಗೆದ್ದು ಬೀಗಿದ್ದು, ಚಾಂಪಿಯನ್ ಆಗಿ ಹೊರಹೊಮ್ಮಿದೆ. ಲಾಸ್ಟ್​ ಬಾಲ್​ವರೆಗೂ ತೀವ್ರ ರೋಚಕತೆಯಿಂದ ಕೂಡಿದ್ದ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ 7 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ 17 ವರ್ಷಗಳ ಬಳಿಕ ಎರಡನೇ ಟಿ20 ವಿಶ್ವಕಪ್‌ ಮುಡಿಗೇರಿಸಿಕೊಂಡು, ಸತತ 11 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಗೆಲ್ಲುವ ಕನಸನ್ನು ನನಸು ಮಾಡಿಕೊಂಡಿದೆ.

ಭಾರತದ ಅದ್ಭುತ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯಾತಿಗಣ್ಯರು ಅಭಿನಂದಿಸಿದ್ದಾರೆ. ಸಮಾಜಿಕ ಜಾಲತಾಣದಲ್ಲಿ ವೀಡಿಯೋವನ್ನು ಪೋಸ್ಟ್ ಮಾಡಿದ ಪ್ರಧಾನಿ ಮೋದಿ, ಟಿ20 ವಿಶ್ವಕಪನ್ನು ಮನೆಗೆ ತಂದಿರುವುದು ನಮಗೆ ಹೆಮ್ಮೆ ತಂದಿದೆ. ಈ ಗೆಲುವು ಪ್ರತಿಯೊಬ್ಬ ಭಾರತೀಯನ ದೊಡ್ಡ ವಿಜಯವಾಗಿದೆ. ಭಾರತೀಯ ಆಟಗಾರರು ವಿಶ್ವಕಪ್ ಟ್ರೋಫಿ ಜೊತೆಗೆ ಕೋಟ್ಯಂತರ ಭಾರತೀಯರ ಹೃದಯವನ್ನೂ ಗೆದ್ದಿದ್ದಾರೆ. ಒಂದೇ ಒಂದು ಪಂದ್ಯವನ್ನು ಸೋಲದೆ ಈ ದಿಗ್ವಿಜಯವನ್ನು ಸಾಧಿಸಿದ್ದೀರಿ ಎಂದು ಮೋದಿ ಶುಭಾಷಯ ಕೋರಿದ್ದಾರೆ.

ಇದೇ ವೇಳೆ ಟೀಂ ಇಂಡಿಯಾಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಗೃಹ ಸಚಿವ ಅಮಿತ್ ಶಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ದೇಶದ ಅನೇಕ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment