newsfirstkannada.com

VIDEO: ಈಜಿಪ್ಟ್‌ ಅತ್ಯುನ್ನತ ಗೌರವಕ್ಕೆ ಪಾತ್ರರಾದ ನರೇಂದ್ರ ಮೋದಿ; ‘ಆರ್ಡರ್ ಆಫ್ ದಿ ನೈಲ್’ ಇದರ ವಿಶೇಷತೆ ಏನು?

Share :

Published June 25, 2023 at 4:34pm

Update June 25, 2023 at 6:54pm

    'ಆರ್ಡರ್ ಆಫ್ ದಿ ನೈಲ್' ಈಜಿಪ್ಟ್ ದೇಶದ ಅತ್ಯುನ್ನತ ಪ್ರಶಸ್ತಿ

    ಗೋಲ್ಟನ್‌ ಕಾಲರ್ ದುಷ್ಟರ ವಿರುದ್ಧ ರಾಜ್ಯವನ್ನು ರಕ್ಷಿಸುವ ಕಲ್ಪನೆ

    ನೈಲ್ ನದಿಯಿಂದ ತಂದ ಸಮೃದ್ಧಿ ಮತ್ತು ಸಂತೋಷಗಳ ಬಣ್ಣನೆ

ಕೈರೋ: ಅಮೆರಿಕಾ ಪ್ರವಾಸದ ಬಳಿಕ ಈಜಿಪ್ಟ್‌ಗೆ ಭೇಟಿ ಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿಯೂ ಅತ್ಯುನ್ನತ ಗೌರವ ಸಿಕ್ಕಿದೆ. ಈಜಿಪ್ಟ್ ದೇಶದ ಅತ್ಯುನ್ನತ ಪ್ರಶಸ್ತಿಯಾದ ಆರ್ಡರ್ ಆಫ್ ದಿ ನೈಲ್ ಪ್ರಶಸ್ತಿಯನ್ನು ನರೇಂದ್ರ ಮೋದಿ ಅವರಿಗೆ ಪ್ರದಾನ ಮಾಡಲಾಗಿದೆ.

ಕೈರೋದಲ್ಲಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್‌-ಸಿಸಿ ಅವರು ದೇಶದ ಅತ್ಯುನ್ನತ ಆರ್ಡರ್ ಆಫ್ ದಿ ನೈಲ್ ಪ್ರಶಸ್ತಿಯನ್ನು ಮೋದಿ ಅವರಿಗೆ ಪ್ರದಾನ ಮಾಡಿದ್ದಾರೆ. ಉಭಯ ನಾಯಕರು ನಡೆಸುವ ದ್ವಿಪಕ್ಷೀಯ ಮಾತುಕತೆ ಮುನ್ನ ಈಜಿಪ್ಟ್ ಅಧ್ಯಕ್ಷರು ಆರ್ಡರ್ ಆಫ್ ದಿ ನೈಲ್ ಪ್ರಶಸ್ತಿಯನ್ನು ಪ್ರಧಾನಿ ಮೋದಿಗೆ ಹಸ್ತಾಂತರಿಸಿದರು.

1997ರ ನಂತರ ಭಾರತದ ಪ್ರಧಾನಿಯೊಬ್ಬರು ಈಜಿಪ್ಟ್‌ ದೇಶಕ್ಕೆ ಭೇಟಿ ನೀಡಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ನರೇಂದ್ರ ಮೋದಿ ಅವರಿಗೆ ದೇಶದ ಅತ್ಯುನ್ನತ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. ಈ ಮೂಲಕ ವಿಶ್ವದ ಹಲವು ದೇಶಗಳಲ್ಲಿ ಅತ್ಯುನ್ನತ ಗೌರವ ಸ್ವೀಕರಿಸಿರುವ ನರೇಂದ್ರ ಮೋದಿ ಅವರ ಹಿರಿಮೆಗೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಕಳೆದ 9 ವರ್ಷಗಳಲ್ಲಿ ವಿಶ್ವದ ವಿವಿಧ ದೇಶಗಳು ಪ್ರಧಾನಿ ಮೋದಿಯವರಿಗೆ ನೀಡುತ್ತಿರುವ 13 ನೇ ಅತ್ಯುನ್ನತ ಗೌರವ ಇದಾಗಿದೆ.

ಇದನ್ನೂ ಓದಿ: ಈಜಿಪ್ಟ್ ಪ್ರಧಾನಿ ತಬ್ಬಿ ಬಾಂಧ್ಯವದ ಬಾಗಿಲು ತೆರೆದ ಮೋದಿ.. ಮಕ್ಕಳ ಜೊತೆ ಮಗುವಾಗಿ ದೇಶದ ಧ್ವಜ ಹಾರಿಸಿದ ನಮ್ಮ ಪ್ರಧಾನಿ

‘ಆರ್ಡರ್ ಆಫ್ ದಿ ನೈಲ್’ ಏನಿದು? 
‘ಆರ್ಡರ್ ಆಫ್ ದಿ ನೈಲ್’ ಈಜಿಪ್ಟ್ ದೇಶದ ಅತ್ಯುನ್ನತ ಪ್ರಶಸ್ತಿ. ನಮ್ಮ ದೇಶದಲ್ಲಿ ನೀಡುವ ಭಾರತ ರತ್ನಕ್ಕೆ ಹೋಲಿಸಬಹುದು. ‘ಆರ್ಡರ್ ಆಫ್ ದಿ ನೈಲ್’ ಪ್ರಶಸ್ತಿಯು ಶುದ್ಧ ಚಿನ್ನದ ಕಾಲರ್ ರೂಪದಲ್ಲಿದೆ. ಮೂರು ಚೌಕಗಳನ್ನು ಹೊಂದಿರುವ ಶುದ್ಧ ಚಿನ್ನದ ಕಾಲರ್ ಇದಾಗಿದೆ. ‘ಆರ್ಡರ್ ಆಫ್ ದಿ ನೈಲ್’ ಕಾಲರ್ ಮೇಲೆ ಫರೋನಿಕ್ ಚಿಹ್ನೆಗಳಿವೆ. ಮೊದಲ ಚೌಕವು ದುಷ್ಟರ ವಿರುದ್ಧ ರಾಜ್ಯವನ್ನು ರಕ್ಷಿಸುವ ಕಲ್ಪನೆಯನ್ನು ಹೋಲುತ್ತದೆ. ಎರಡನೆಯದು ನೈಲ್ ನದಿಯಿಂದ ತಂದ ಸಮೃದ್ಧಿ ಮತ್ತು ಸಂತೋಷವನ್ನು ಹೋಲುತ್ತದೆ. ಮೂರನೆಯದು ಸಂಪತ್ತು ಮತ್ತು ಸಹಿಷ್ಣುತೆಯನ್ನು ಸೂಚಿಸುತ್ತದೆ.

ವಜ್ರ ವೈಡೂರ್ಯದಿಂದ ಅಲಂಕರಿಸಲ್ಪಟ್ಟ ವೃತ್ತಾಕಾರದ ಚಿನ್ನದ ಹೂವಿನಿಂದ ಮೂರು ಚೌಕಗಳು ಒಂದಕ್ಕೊಂದು ಸಂಪರ್ಕ ಹೊಂದಿವೆ. ಕಾಲರ್‌ನಿಂದ ನೇತಾಡುವುದು ಷಡ್ಭುಜಾಕೃತಿಯ ಪೆಂಡೆಂಟ್ ಇದರಲ್ಲಿದೆ. ಇದನ್ನು ಫರೋನಿಕ್ ಶೈಲಿಯ ಹೂವುಗಳು ಮತ್ತು ವೈಡೂರ್ಯ ಮತ್ತು ಮಾಣಿಕ್ಯ ರತ್ನಗಳಿಂದ ಅಲಂಕರಿಸಲಾಗಿದೆ. ಪೆಂಡೆಂಟ್‌ನ ಮಧ್ಯದಲ್ಲಿ, ನೈಲ್ ನದಿಯನ್ನು ಪ್ರತಿನಿಧಿಸುವ ಚಾಚಿಕೊಂಡಿರುವ ಚಿಹ್ನೆಯು ಉತ್ತರವನ್ನು ಮತ್ತು ದಕ್ಷಿಣವನ್ನು ಒಟ್ಟಿಗೆ ತರುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ  

VIDEO: ಈಜಿಪ್ಟ್‌ ಅತ್ಯುನ್ನತ ಗೌರವಕ್ಕೆ ಪಾತ್ರರಾದ ನರೇಂದ್ರ ಮೋದಿ; ‘ಆರ್ಡರ್ ಆಫ್ ದಿ ನೈಲ್’ ಇದರ ವಿಶೇಷತೆ ಏನು?

https://newsfirstlive.com/wp-content/uploads/2023/06/PM-Modi-3.jpg

Load More