/newsfirstlive-kannada/media/post_attachments/wp-content/uploads/2025/04/Modi-on-pahlgam-terror-Attack-3.jpg)
ಪ್ರಧಾನಿ ಮೋದಿ ಇವತ್ತು ಒಟ್ಟು ನಾಲ್ಕು ಉನ್ನತ ಮಟ್ಟದ ಸಭೆಗಳನ್ನ ನಡೆಸಲಿದ್ದಾರೆ. ಪಹಲ್ಗಾಮ್ ದಾಳಿ ನಂತರ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇವತ್ತಿನ ಸರಣಿ ಸಭೆಗಳು ತುಂಬಾನೇ ಮಹತ್ವ ಪಡೆದುಕೊಂಡಿವೆ.
ಆ 4 ಮೀಟಿಂಗ್ಗಳು..
ಬೆಳಗ್ಗೆ 11 ಗಂಟೆಗೆ ಕೇಂದ್ರ ಭದ್ರತಾ ಸಮಿತಿ ಜೊತೆಗೆ ಸಭೆ ನಡೆಸಲಿದ್ದಾರೆ. ನಂತರ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ಸಭೆ, ಆರ್ಥಿಕ ಸಂಪುಟ ಸಮಿತಿ ಸಭೆ ನಡೆಸಲಿದ್ದಾರೆ. ಅಂತಿಮವಾಗಿ ಕೇಂದ್ರ ಸಚಿವ ಸಂಪುಟ ಸಭೆ ನಡೆಸಲಿದ್ದಾರೆ.
CCPA ಸಭೆಗೆ ಮಹತ್ವ
ಈ ನಾಲ್ಕು ಸಭೆಗಳಲ್ಲಿ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ (Cabinet Committee on Political Affairs) ಅಥವಾ ಸಿಸಿಪಿಎ ಸಭೆ ತುಂಬಾನೇ ನಿರ್ಣಾಯಕ. ಈ ಸಮಿತಿಯನ್ನು ‘ಸೂಪರ್ ಕ್ಯಾಬಿನೆಟ್’ ಅಂತಲೂ ಕರೆಯಲಾಗುತ್ತದೆ. ಪಹೆಲ್ಗಾಮ್ ದಾಳಿ CCS ಸಭೆ ನಡೆಸಲಾಗಿತ್ತು. ಈ ಸಭೆಯ ಮೊದಲ ಸುತ್ತಿನಲ್ಲಿ ಸಿಂಧೂ ನದಿ ನೀರು ಒಪ್ಪಂದ ಸ್ಥಗಿತ, ಅಟ್ಟಾರಿ ಗಡಿ ಮುಚ್ಚುವುದು, ವೀಸಾಗಳನ್ನು ರದ್ದುಗೊಳಿಸುವುದು ಸೇರಿದಂತೆ ಮಿಲಿಟರಿಯೇತರ ಕ್ರಮಗಳನ್ನು ತೆಗೆದುಕೊಂಡಿತ್ತು.
ಇದನ್ನೂ ಓದಿ: ಪಾಕಿಸ್ತಾನದ ಮಗ್ಗಲು ಎಲ್ಲಾ ಕಡೆಯಿಂದಲೂ ಮುರಿಯುತ್ತಿದೆ.. ಈಗ ಶಾಕ್ ಮೇಲೆ ಶಾಕ್..!
ಅಂತೆಯೇ ಇಂದು ನಡೆಯುವ ಸಭೆ ಬಗ್ಗೆ ಒಂದಷ್ಟು ಊಹಾಪೋಹಗಳು ಸೃಷ್ಟಿಯಾಗಿದೆ. ಯಾಕೆಂದರೆ, 2019ರಲ್ಲಿ ಪುಲ್ವಾಮಾದಲ್ಲಿ ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯ ನಂತರ ಭದ್ರತಾ ಪರಿಸ್ಥಿತಿ ಪರಿಶೀಲಿಸಲು ಮತ್ತು ಪ್ರತಿ-ತಂತ್ರಗಳನ್ನು ರೂಪಿಸಲು CCPA ಸಭೆ ಸೇರಿತ್ತು. ಅದಾದ ಬಳಿಕ ಇಲ್ಲಿಯವರೆಗೆ CCPA ಯಾವುದೇ ಸಭೆ ನಡೆದಿರಲಿಲ್ಲ. ನಂತರ ಫೆಬ್ರವರಿ 26, 2019 ರಂದು ಭಾರತೀಯ ವಾಯುಪಡೆ ಬಾಲಕೋಟ್‌ನಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿತ್ತು.
CCPA ಕಾರ್ಯ
- CCPA ದೇಶದ ಪ್ರಮುಖ ರಾಜಕೀಯ ಮತ್ತು ಆರ್ಥಿಕ ವಿಷಯಗಳನ್ನು ಪರಿಶೀಲಿಸುತ್ತದೆ. ಜೊತೆಗೆ ನಿರ್ಣಾಯಕ ಸಂದರ್ಭದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ.
- CCPA ಮುಖ್ಯವಾಗಿ ಕೇಂದ್ರ ಮತ್ತು ರಾಜ್ಯಗಳ (Centre and the states) ನಡುವಿನ ಸಂಬಂಧಗಳನ್ನು ಪರಿಗಣಿಸುತ್ತದೆ. ವಿಶೇಷವಾಗಿ ಒಮ್ಮತ ರೂಪಿಸುವ ಸಂದರ್ಭದಲ್ಲಿ.
- ರಾಜಕೀಯ ಪರಿಣಾಮ ಹೊಂದಿರುವ ಆರ್ಥಿಕ ನೀತಿಗಳು, ಆಂತರಿಕ ಭದ್ರತಾ ವಿಷಯಗಳ ಕುರಿತು ಚರ್ಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ.
- ರಾಜಕೀಯ ಪರಿಣಾಮ ಬೀರುವ ವಿಷಯಗಳ ಕುರಿತು ವಿವಿಧ ಸಚಿವಾಲಯಗಳ ನಡುವಿನ ಸಮನ್ವಯಕ್ಕೂ ಸಹಾಯ ಮಾಡುತ್ತದೆ.
- ದೇಶದ ರಾಜಕೀಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರುವ ವಿದೇಶಾಂಗ ನೀತಿ ವಿಷಯಗಳ ಬಗ್ಗೆಯೂ CCPA ಚರ್ಚಿಸುತ್ತದೆ ಮತ್ತು ನಿರ್ಧರಿಸುತ್ತದೆ.
CCPA ಸದಸ್ಯರು..
ಪ್ರಧಾನಿ ಅಧ್ಯಕ್ಷತೆಯಲ್ಲಿ CCPA ರಚನೆಯಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ಆರೋಗ್ಯ ಸಚಿವ ಜೆ.ಪಿ.ನಡ್ಡಾ, ನಾಗರಿಕ ವಿಮಾನಯಾನ ಸಚಿವ ಕೆ. ರಾಮ್ ಮೋಹನ್ ನಾಯ್ಡು, ಎಂಎಸ್‌ಎಂಇ ಸಚಿವ ಜಿತನ್ ರಾಮ್ ಮಾಂಝಿ, ಬಂದರು ಸಚಿವ ಸರ್ಬಾನಂದ ಸೋನೋವಾಲ್, ಪರಿಸರ ಸಚಿವ ಭೂಪೇಂದ್ರ ಯಾದವ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಅನ್ನಪೂರ್ಣ ದೇವಿ, ಸಂಸದೀಯ ವ್ಯವಹಾರ ಸಚಿವೆ ಕಿರಣ್ ರಿಜಿಜು ಮತ್ತು ಕಲ್ಲಿದ್ದಲು ಸಚಿವ ಜಿ.ಕಿಶನ್ ರೆಡ್ಡಿ ಸಿಸಿಪಿಎ ಸದಸ್ಯರಾಗಿದ್ದಾರೆ.
ಇದನ್ನೂ ಓದಿ: ಮುಂದಿನ 24 -36 ಗಂಟೆಯಲ್ಲಿ ಭಾರತ ಅಟ್ಯಾಕ್ -ಹೆದರಿ ಬೊಬ್ಬೆ ಹೊಡೆದುಕೊಂಡ ಪಾಕ್ ಸಚಿವ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ