/newsfirstlive-kannada/media/post_attachments/wp-content/uploads/2025/07/MODI-4.jpg)
ಭಾರತದ ಪ್ರಧಾನಿ ನರೇಂದ್ರ ಮೋದಿ ಟ್ರಿನಿಡಾಡ್, ಟೋಬಾಗೋಗೆ ಭೇಟಿ ನೀಡಿದ್ದಾರೆ. ವಿಶೇಷ ಅಂದರೆ ಟ್ರಿನಿಡಾಡ್, ಟೋಬಾಗೋ ದೇಶದ ಪ್ರಧಾನಿ ಭಾರತ ಮೂಲದವರು. ಭಾರತದ ಬಿಹಾರ ರಾಜ್ಯದ ಬಕ್ಸಾರ್ ಜಿಲ್ಲೆಯ ಮೂಲದ ಕಮಲಾ ಪ್ರಸಾದ್ ಬಿಸ್ಸೆಸ್ಸರ್ ಸದ್ಯ ಟ್ರಿನಿಡಾಡ್, ಟೋಬಾಗೋ ದೇಶದ ಪ್ರಧಾನಮಂತ್ರಿಯಾಗಿದ್ದಾರೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ರಿನಿಡಾಡ್, ಟೋಬಾಗೋ ಪ್ರಧಾನಿಯನ್ನು ಬಿಹಾರದ ಮಗಳು ಎಂದು ಕರೆದಿದ್ದಾರೆ.
ಕಮಲಾ ಪ್ರಸಾದ್ ಬಿಸ್ಸೆಸ್ಸೆರ್ 2010 ರಿಂದ 2015 ರವರೆಗೂ ಟ್ರಿನಿಡಾಡ್ ಟೋಬಾಗೋ ದೇಶದ ಪ್ರಧಾನಿಯಾಗಿದ್ದರು. ಈಗ ಮತ್ತೊಮ್ಮೆ ಟ್ರಿನಿಡಾಡ್ ಪ್ರಧಾನಿಯಾಗಿದ್ದಾರೆ. ತಮ್ಮ ರಾಜಕೀಯ ನಾಯಕತ್ವದ ಕಾರಣದಿಂದ ಟ್ರಿನಿಡಾಡ್ ನಲ್ಲಿ ಜನ ಮೆಚ್ಚುಗೆ ಗಳಿಸಿದ್ದಾರೆ. ಭಾರತ ಹಾಗೂ ಟ್ರಿನಿಡಾಡ್, ಟೋಬಾಗೋ ದೇಶಗಳ ನಡುವಿನ ಸಾಂಸ್ಕೃತಿಕ ಸಂಬಂಧವನ್ನು ಬಲಗೊಳಿಸಲು ಪ್ರಧಾನಿ ಮೋದಿ ಯತ್ನಿಸಿದ್ದಾರೆ. ಟ್ರಿನಿಡಾಡ್, ಟೋಬಾಗೋ ದೇಶದಲ್ಲಿ ಅನಿವಾಸಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ.
ಇದನ್ನೂ ಓದಿ: ಪ್ರಯತ್ನ ವಿಫಲ ಆದರೂ ಪ್ರಾರ್ಥನೆ ವಿಫಲ ಆಗಲ್ಲ -ಸಿಎಂ ಸ್ಥಾನದ ಬಗ್ಗೆ ಡಿಕೆಶಿ ಪಂಚ್..!
ಟ್ರಿನಿಡಾಡ್ ಮತ್ತು ಟೋಬಾಗೋ ಪ್ರಧಾನಮಂತ್ರಿ ಕಮಲಾ ಪ್ರಸಾದ್ ಬಿಸ್ಸೆಸ್ಸೆರ್ ಪೂರ್ವಜರು ಬಿಹಾರದ ಬಕ್ಸಾರ್ ಜಿಲ್ಲೆಯವರು. ಕಮಲಾ ಜೀ ಖುದ್ದಾಗಿ ಬಕ್ಸಾರ್ಗೆ ಭೇಟಿ ನೀಡಿದ್ದಾರೆ. ಅಲ್ಲಿಯ ಜನರು, ಕಮಲಾ ಜೀ ಅವರನ್ನು ಬಿಹಾರದ ಮಗಳು ಎಂದು ಪರಿಗಣಿಸಿದ್ದಾರೆ ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
A cultural connect like no other!
Very happy to have witnessed a Bhojpuri Chautaal performance in Port of Spain. The connect between Trinidad & Tobago and India, especially parts of eastern UP and Bihar is noteworthy. pic.twitter.com/O751WpAJc5— Narendra Modi (@narendramodi) July 3, 2025
ಟ್ರಿನಿಡಾಡ್ ಪ್ರಧಾನಿಗೆ ಮೋದಿ ಕೊಟ್ಟ ಗಿಫ್ಟ್ ವಿಶೇಷತೆ ಏನು?
ಟ್ರಿನಿಡಾಡ್ನಲ್ಲಿ ಪ್ರಧಾನಿ ಮೋದಿಗೆ ಭೋಜನ ಕೂಟ ಆಯೋಜನೆಗೊಂಡಿತ್ತು. ಈ ವೇಳೆ ಅಯೋಧ್ಯೆಯ ರಾಮಮಂದಿರ ಪ್ರತಿಕೃತಿಯನ್ನು ಕಮಲಾ ಪ್ರಸಾದ್ ಬಿಸ್ಸೆಸ್ಸೆರ್ಗೆ ಗಿಫ್ಟ್ ಆಗಿ ನೀಡಿದ್ದಾರೆ. ಜೊತೆಗೆ ಸರಯೂ ನದಿಯ ನೀರು, ಪ್ರಯಾಗರಾಜ್‌ನ ತ್ರಿವೇಣಿ ಸಂಗಮದ ನೀರು ನೀಡಿದ್ದಾರೆ. ಇದು ಭಾರತ- ಟ್ರಿನಿಡಾಡ್ ನಡುವಿನ ಸಾಂಸ್ಕೃತಿಕ, ಆಧ್ಯಾತ್ಮಿಕ ಸಂಬಂಧವನ್ನು ಪ್ರತಿನಿಧಿಸುತ್ತದೆ.
ಟ್ರಿನಿಡಾಡ್, ಟೋಬ್ಯಾಗೋ ಪ್ರಧಾನಿ ಕಮಲಾ ಪ್ರಸಾದ್ ಬಿಸ್ಸೆಸ್ಸೆರ್ ಅವರು, ಪ್ರಧಾನಿ ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ. ಪ್ರಧಾನಿ ಮೋದಿ ವಿಶ್ವದಲ್ಲಿ ದೂರದೃಷ್ಟಿಯ ನಾಯಕ. ಮೋದಿ ಅವರಿಗೆ ಅತಿಥ್ಯ ನೀಡಿದ್ದು ನಮ್ಮ ಭಾಗ್ಯ. ಪ್ರಧಾನಿ ಮೋದಿ ಅವರ ಟ್ರಿನಿಡಾಡ್ ಭೇಟಿಯೂ ರಾಜತಾಂತ್ರಿಕ ಔಪಚಾರಿಕ ಭೇಟಿಗಿಂತ ಹೆಚ್ಚು ವಿಶೇಷ. ಮೋದಿ ಭೇಟಿಯು ಟ್ರಿನಿಡಾಡ್ ಜನರಿಗೆ ಗೌರವ ಕ್ಷಣ ಎಂದು ಕಮಲಾ ಪ್ರಸಾದ್ ಬಿಸ್ಸೆಸ್ಸೆರ್ ಕರೆದಿದ್ದಾರೆ.
ಇದನ್ನೂ ಓದಿ: ಮಹಾಮಳೆಗೆ 63 ಮಂದಿ ಬಲಿ, 400 ಕೋಟಿ ರೂ ಆಸ್ತಿಪಾಸ್ತಿ ನಷ್ಟ.. ಮತ್ತೆ ಭಾರೀ ಮಳೆಯ ಎಚ್ಚರಿಕೆ..
ಬಿಹಾರದ ಶ್ರೀಮಂತ ಪರಂಪರೆಯು ಭಾರತಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಹೆಮ್ಮೆ. ಬಿಹಾರವೂ ಜಗತ್ತಿನ ಆಲೋಚನೆ, ಪ್ರಗತಿಗೆ ತನ್ನದೇ ಆದ ಕೊಡುಗೆ ನೀಡಿದೆ. ಬಿಹಾರ ಪ್ರಜಾಪ್ರಭುತ್ವ, ರಾಜಕೀಯ, ರಾಜತಾಂತ್ರಿಕತೆ, ಉನ್ನತ ಶಿಕ್ಷಣದಲ್ಲಿ ಶತಮಾನಗಳಿಂದ ಮುಂಚೂಣಿಯಲ್ಲಿದೆ ಎಂದು ಪ್ರಧಾನಿ ಮೋದಿ ಟ್ರಿನಿಡಾಡ್ ನಲ್ಲಿ ಬಿಹಾರ ರಾಜ್ಯವನ್ನು ಹಾಡಿ ಹೊಗಳಿದ್ದಾರೆ.
ಟ್ರಿನಿಡಾಡ್, ಟೋಬಾಗೋ ದೇಶದ ಶೇ.40 ರಷ್ಟು ಜನರು ಭಾರತೀಯ ಮೂಲದವರು.
ಟ್ರಿನಿಡಾಡ್ , ಟೋಬಾಗೋ ದೇಶದ ಅನಿವಾಸಿ ಭಾರತೀಯರ 6ನೇ ತಲೆಮಾರಿನವರಿಗೆ ಓಸಿಐ ಕಾರ್ಡ್ ನೀಡುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ. 1845 ರಿಂದಲೂ ಭಾರತೀಯರು ಟ್ರಿನಿಡಾಡ್ ಗೆ ಭೇಟಿ ನೀಡುತ್ತಿದ್ದಾರೆ. ಟ್ರಿನಿಡಾಡ್ನಲ್ಲಿ 6ನೇ ತಲೆಮಾರಿನ ಅನಿವಾಸಿ ಭಾರತೀಯರಿದ್ದಾರೆ. ಕೋವಿಡ್ ಕಾಲದಲ್ಲಿ ಭಾರತವು ಟ್ರಿನಿಡಾಡ್ ಟೋಬ್ಯಾಗೋಗೆ ಕೊರೊನಾ ವ್ಯಾಕ್ಸಿನ್ಗಳನ್ನು ಉಚಿತವಾಗಿ ನೀಡಿತ್ತು. ಭಾರತದ ಯುಪಿಐ ಅನ್ನು ಟ್ರಿನಿಡಾಡ್ ಟೋಬ್ಯೋಗೋ ಕೂಡ ಅಳವಡಿಸಿಕೊಂಡಿದೆ. 2009 ರ ನಂತರ ಟ್ರಿನಿಡಾಡ್ಗೆ ಭೇಟಿ ನೀಡಿದ ಭಾರತದ ಗಣ್ಯ ನಾಯಕರು ಮೋದಿ.
ಇದನ್ನೂ ಓದಿ: ಮೈಸೂರು ದಸರಾ ಉದ್ಘಾಟಿಸೋರು ಯಾರು..? HD ದೇವೇಗೌಡ, ದ್ರಾವಿಡ್, ಅನಿಲ್ ಕುಂಬ್ಳೆ ಹೆಸರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ