/newsfirstlive-kannada/media/post_attachments/wp-content/uploads/2025/05/PM-Modi-Pakistan-warn.jpg)
ಆಪರೇಷನ್ ಸಿಂಧೂರ, ಭಾರತ, ಪಾಕಿಸ್ತಾನದ ಕದನ ವಿರಾಮದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಬಹಳ ಕಠಿಣವಾದ ಮಾತುಗಳನ್ನಾಡಿದ ಪ್ರಧಾನಿ, ನೇರವಾಗಿ ಪಾಕಿಸ್ತಾನಕ್ಕೆ ಖಡಕ್ ವಾರ್ನಿಂಕ್ ಕೊಟ್ಟಿದ್ದಾರೆ.
ಮೋದಿ ಮಾತಿನ ಹೈಲೈಟ್ಸ್!
- ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ
- ಭಾರತೀಯ ಸೇನೆಯ ಶೌರ್ಯ-ಸಂಯಮ ಕಂಡೆ
- ದೇಶದ ಜನತೆ ಪರವಾಗಿ ಯೋಧರಿಗೆ ಅಭಿನಂದನೆ
- ಪಹಲ್ಗಾಮ್ ದಾಳಿಯನ್ನ ಇಡೀ ವಿಶ್ವವೇ ಖಂಡಿಸಿತ್ತು
- ಉಗ್ರರ ಹುಟ್ಟಡಗಿಸಲು ಸೇನೆಗೆ ಮುಕ್ತ ಅವಕಾಶ
- ನಮ್ಮ ಸಹೋದರಿ, ಮಗಳ ಸಿಂಧೂರ ಅಳಿಸಲಾಗಿತ್ತು
- ಸಿಂಧೂರ ಅಳಿಸಿದ್ರೆ ಏನಾಗುತ್ತೆ ಅನ್ನೋದನ್ನ ತೋರಿಸಿದ್ದೇವೆ
- ಭಾರತದ ಆಪರೇಷನ್ ಸಿಂಧೂರ ಅಖಂಡ ಪ್ರತಿಜ್ಞೆ
- ಟೆರರ್, ಟಾಕ್ ಒಂದೇ ಬಾರಿ ನಡೆಯಲ್ಲ
- ಟೆರರ್, ಟ್ರೇಡ್ ಒಂದೇ ಬಾರಿ ನಡೆಯಲ್ಲ
- ನೀರು, ರಕ್ತ ಒಟ್ಟಿಗೆ ಜೊತೆಯಾಗಿ ಹರಿಯಲ್ಲ
- ಪಾಕ್ ಜೊತೆ ಮಾತುಕತೆಯಾದ್ರೆ POK ಮಾತ್ರ
- ಇದು ಯುದ್ಧದ ಕಾಲವಲ್ಲ, ಹಾಗೆ ಇದು ಭಯೋತ್ಪಾದನೆಗೂ ಕಾಲವಲ್ಲ
- ಪಾಕಿಸ್ತಾನವನ್ನ ಉಗ್ರರೇ ಒಂದು ಸಮಾಪ್ತಿ ಮಾಡುತ್ತಾರೆ
- ಯಾವುದೇ ನ್ಯೂಕ್ಲಿಯರ್ ಬ್ಲ್ಯಾಕ್‌ಮೇಲ್‌ಗೆ ಹೆದರಲ್ಲ
- ಮೇಡ್ ಇನ್ ಇಂಡಿಯಾ ಶಸ್ತ್ರಾಸ್ತ್ರಗಳಿಗೆ ಸಮಯ ಬಂದಿದೆ
- ಭಾರತದ ಸಾಮರ್ಥ್ಯ, ಸಂಯಮ ಜಗತ್ತು ನೋಡಿದೆ
- ಸೈನಿಕರು ‘ಆಪರೇಷನ್ ಸಿಂಧೂರ’ ಯಶಸ್ವಿಗೊಳಿಸಿದ್ದಾರೆ
- ಪಹಲ್ಗಾಮ್ ಘಟನೆ ಭೀಕರ, ಭೀಭತ್ಸ ಎಂದ ಮೋದಿ
- ಬಹವಾಲ್ಪುರ್, ಮುರಿದ್ಕೆ ಉಗ್ರರ ಅಡಗು ತಾಣಗಳಿದ್ದವು
- ಜಾಗತಿಕ ಭಯೋತ್ಪಾದನೆಗೆ ತರಬೇತಿ ಕೇಂದ್ರಗಳಾಗಿದ್ದವು
- ಉಗ್ರರ ಮುಖ್ಯ ಕೇಂದ್ರಗಳನ್ನ ಧ್ವಂಸಗೊಳಿಸಲಾಗಿದೆ
- ಉಗ್ರರು ಪಾಕಿಸ್ತಾನದಲ್ಲಿ ಮುಕ್ತವಾಗಿ ಅಡ್ಡಾಡುತ್ತಿದ್ದರು
- ಒಂದೇ ಏಟಿಗೆ ಉಗ್ರ ನಾಯಕರನ್ನ ಹತ್ಯೆ ಮಾಡಿದ್ವಿ
- ಉಗ್ರರ ಸಂಹಾರಕ್ಕಾಗಿ ಪಾಕ್ ಕೈ ಜೋಡಿಸಲಿಲ್ಲ
- ಬದಲಿಗೆ ಭಾರತದ ವಿರುದ್ಧವೇ ದಾಳಿಗೆ ಯತ್ನಿಸಿತು
- ಭಾರತದ ಗಡಿ ಹಳ್ಳಿಗಳನ್ನ ಗುರಿಯಾಗಿಸಿ ದಾಳಿ ಯತ್ನ
- ಆದರೆ, ಪಾಕ್ ದಾಳಿ ಯತ್ನವನ್ನ ವಿಫಲಗೊಳಿಸಿದ್ದೇವೆ
- ಭಾರತದ ADSನಿಂದ ಎಲ್ಲವನ್ನೂ ಧ್ವಂಸಗೊಳಿಸಲಾಯಿತು
- ಆಪರೇಷನ್ ಸಿಂಧೂರ ನಮ್ಮ ಭಾವನೆಯನ್ನೊಂದಿತ್ತು
- ಆಪರೇಷನ್ ಸಿಂಧೂರನಲ್ಲಿ ಉಗ್ರರ ಕ್ಯಾಂಪ್ ಧ್ವಂಸ
- ನಮ್ಮ ದಾಳಿಯ ಬಗ್ಗೆ ಪಾಕ್ ಊಹೆ ಮಾಡಿರಲಿಲ್ಲ-ಮೋದಿ
- ದಾಳಿಯಲ್ಲಿ 100ಕ್ಕೂ ಹೆಚ್ಚು ಉಗ್ರರು ಹತ್ಯೆಯಾಗಿದೆ
- ಏರ್ಸ್ಟ್ರೈಕ್ನಲ್ಲಿ ಪ್ರಮುಖ ಉಗ್ರರ ಹತ್ಯೆಯಾಗಿದೆ
- ನಾವು ಪಾಕಿಸ್ತಾನದ ಏರ್ಬೇಸ್ಗಳನ್ನ ಹೊಡೆದಾಕಿದ್ದೇವೆ
- ಡ್ರೋನ್ಗಳಿಂದ ಪಾಕ್ ಏರ್ಬೇಸ್ಗಳ ನಾಶವಾಗಿವೆ
- ಉಗ್ರರ ಸಂಹಾರಕ್ಕಾಗಿ ಆಪರೇಷನ್ ಸಿಂಧೂರ
- ಉಗ್ರರಿಗೆ ಬೆಂಬಲ ನೀಡಿದ್ರೆ ತಕ್ಕ ಪ್ರತ್ಯುತ್ತರ ನೀಡ್ತೇವೆ
- ನ್ಯೂಕ್ಲಿಯರ್ ಬ್ಲ್ಯಾಕ್‌ಮೇಲ್‌ಗೆ ಭಾರತ ಹೆದರಲ್ಲ
- ಹಾಗೇನಾದ್ರೂ ಮಾಡಿದ್ರೆ, ತಕ್ಕ ನಿರ್ಧಾರ ಕೈಗೊಳ್ಳುತ್ತೇವೆ
- ಉಗ್ರರು & ಉಗ್ರರ ನಾಯಕರನ್ನ ಬಿಡೋದೇ ಇಲ್ಲ
- ನಮ್ಮ ದಾಳಿಗೆ ಪಾಕ್ ಸೇನಾಧಿಕಾರಿಯೇ ದಂಗಾಗಿದ್ದಾರೆ
- ಪ್ರತಿಯೊಂದೂ ಯುದ್ಧದಲ್ಲಿ ಪಾಕಿಸ್ತಾನವನ್ನ ಸೋಲಿಸಿದ್ದೇವೆ
- ಆದರೆ ಈ ಬಾರಿ ಆಪರೇಷನ್ ಸಿಂಧೂರ ಮಾಡಿದ್ದೇವೆ
- ವಾಯುಪಡೆಯಿಂದ ಆಪರೇಷನ್ ಸಿಂಧೂರ ಮಾಡಿದ್ದೇವೆ
- ಭಾರತದ ಶಸ್ತ್ರಾಸ್ತ್ರಗಳನ್ನ ಇಡೀ ವಿಶ್ವ ನೋಡಿದೆ
- ‘ಮೇಕ್ ಇನ್ ಇಂಡಿಯಾ’ಗೆ ಭಾರಿ ಬೇಡಿಕೆ ಬಂದಿದೆ
- ಭಯೋತ್ಪದನೆ ಬಗ್ಗೆ ಶೂನ್ಯ ಸಹನೆ ಹೊಂದಿದ್ದೇವೆ
- ಇದು ಭಾರತ ಸರ್ಕಾರದ ‘ಗ್ಯಾರಂಟಿ’ಯಾಗಿದೆ
- ಭಯೋತ್ಪಾದನೆಯೇ ಪಾಕಿಸ್ತಾನವನ್ನ ನುಂಗಲಿದೆ
- ಟೆರರ್ & ಟಾಕ್, ಟೆರರ್ & ಟ್ರೇಡ್ ನಡೆಯಲ್ಲ
- ನೀರು & ರಕ್ತ ಒಂದೇ ಕಡೆ ಹರಿಯಲು ಸಾಧ್ಯವಿಲ್ಲ
- ಇಂದು ಬುದ್ಧ ಪೂರ್ಣಿಮೆ, ಶಾಂತಿಯ ಸಂಕೇತ
- ಇಡೀ ವಿಶ್ವ ಶಾಂತಿ ಕಡೆಗೆ ಮುಖ ಮಾಡಬೇಕಾಗಿದೆ
- ಭಾರತದ ದಾಳಿಗೆ ಪಾಕಿಸ್ತಾನ ಪತರಗುಟ್ಟಿದೆ-ಮೋದಿ
- ಪಾಕಿಸ್ತಾನವನ್ನ 3 ದಿನಗಳಲ್ಲಿ ಸರ್ವನಾಶ ಮಾಡಿದ್ದೇವೆ
- ಭಾರತದ ದಾಳಿಗೆ ಪಾಕಿಸ್ತಾನ ಪತರಗುಟ್ಟಿದೆ-ಮೋದಿ
- ಭಾರಿ ಹೊಡೆತದ ಬಳಿಕ ನಮ್ಮ DGMO ಸಂಪರ್ಕಿಸಿತು
- ಮೇ 10ರಂದು ಕದನ ವಿರಾಮಕ್ಕಾಗಿ ಬೇಡಿಕೊಂಡಿತು
- ಪಾಕ್ ಬೇಡಿಕೆಯಿಂದ ಕದನ ವಿರಾಮಕ್ಕೆ ಭಾರತ ಒಪ್ಪಿತ್ತು
- ಆದರೂ ಪಾಕ್, ಕದನ ವಿರಾಮ ಉಲ್ಲಂಘಿಸಿತ್ತು
- ಪಾಕ್ ಮೇಲೆ ದಾಳಿ ಮಾಡಲು ಭಾರತ ಈಗಲೂ ಸಜ್ಜು
- ನಮ್ಮ ಮೂರೂ ಸೇನಾ ತುಕಡಿಗಳು ಕಾರ್ಯನಿರತವಾಗಿವೆ
- ನಮ್ಮ ಬಿಎಸ್‌ಎಫ್ ಯೋಧರೂ ಕೂಡ ಸಿದ್ಧರಿದ್ದಾರೆ
- ಪಾಕಿಸ್ತಾನದ ಜೊತೆ ಯಾವುದೇ ಚರ್ಚೆ ಇರಲ್ಲ
- ಒಂದು ವೇಳೆ ಮಾತು ಅಂದ್ರೆ ಅದು POK ಬಗ್ಗೆ
- ಮಾತು ಅಂದ್ರೆ ಅದು ಉಗ್ರರ ಸಂಹಾರದ ಬಗ್ಗೆ ಆಗಿರುತ್ತೆ
- ಭಾರತ್ ಮಾತಾಕಿ ಜೈ.. ಭಾರತ್ ಮಾತಾಕಿ ಜೈ
ಇದನ್ನೂ ಓದಿ: ಕೆಳಗೆ ಬಿದ್ದರೂ, ಮೀಸೆ ಮಣ್ಣಾಗಲಿಲ್ಲ.. ಶಾಹಿದ್ ಅಫ್ರಿದಿ ವಿಕ್ಟರಿ ಮೆರವಣಿಗೆ; ವಿಡಿಯೋ ವೈರಲ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ