ಕ್ಷೇಮವಾಗಿ ಬನ್ನಿ.. ಭಾರತದ ಹೆಮ್ಮೆಯ ಮಗಳೇ; ಸುನೀತಾ ವಿಲಿಯಮ್ಸ್​ಗೆ ಪ್ರಧಾನಿ ಮೋದಿ ವಿಶೇಷ ಪತ್ರ!

author-image
Veena Gangani
Updated On
ಕ್ಷೇಮವಾಗಿ ಬನ್ನಿ.. ಭಾರತದ ಹೆಮ್ಮೆಯ ಮಗಳೇ; ಸುನೀತಾ ವಿಲಿಯಮ್ಸ್​ಗೆ ಪ್ರಧಾನಿ ಮೋದಿ ವಿಶೇಷ ಪತ್ರ!
Advertisment
  • ಸುನೀತಾ ವಿಲಿಯಮ್ಸ್​ಗೆ ಸ್ವಾಗತ ಕೋರಿ ಪ್ರಧಾನಿ ಮೋದಿ ಪತ್ರ
  • ಸುನೀತಾಗೆ ಪತ್ರ ತಲುಪಿಸಿದ ಗಗನಯಾತ್ರಿ ಮೈಕ್ ಮೆಸ್ಸಿಮಿನೋ
  • ಪತ್ರದಲ್ಲಿ ಸುರಕ್ಷಿತವಾಗಿ ಭೂಮಿಗೆ ಬನ್ನಿ ಎಂದ ಪ್ರಧಾನಿ ಮೋದಿ

ಬರೋಬ್ಬರಿ 9 ತಿಂಗಳ ಬಾಹ್ಯಾಕಾಶ ವಾಸಕ್ಕೆ ಕೊನೆಗೂ ಮುಕ್ತಿ ಸಿಗ್ತಿದೆ. ಕೋಟಿ ಕೋಟಿ ಜನರ ಪ್ರಾರ್ಥನೆ ಹಾಗೂ ವಿಜ್ಞಾನಿಗಳ ಶ್ರಮದ ಫಲವಾಗಿ ಸುನಿತಾ ವಿಲಿಯಮ್ಸ್ ಹಾಗೂ ಬಚ್ ವಿಲ್ಮೋರ್ ಭೂಮಿಗೆ ವಾಪಸ್ಸಾಗುತ್ತಿದ್ದಾರೆ. ಅಮೆರಿಕಕ್ಕೆ ಇಂದು ಬಂದು ಇಳಿದರೇ ಭಾರತ ಇದನ್ನು ಕಾಣಲು ನಾಳೆ ಬೆಳಗ್ಗೆವರೆಗೆ ಕಾಯಬೇಕಾಗಿದೆ.

ಇದನ್ನೂ ಓದಿ:ಚಂದನ್ ಶೆಟ್ಟಿ 2ನೇ ಮದುವೆ ಆದ್ರಾ? ರಿಸೆಪ್ಶನ್‌ ಫೋಟೋ ವೈರಲ್‌! ಏನಿದರ ಗುಟ್ಟು?

publive-image

ಇನ್ನೂ, ಬಾಹ್ಯಾಕಾಶದಿಂದ ಬರುತ್ತಿರೋ ಸುನೀತಾ ವಿಲಿಯಮ್ಸ್​ಗೆ ಪ್ರಧಾನಿ ಮೋದಿ ಅವರು  ಸ್ವಾಗತ ಕೋರಿ ಪತ್ರ ಬರೆದಿದ್ದಾರೆ. ಮಾರ್ಚ್​ 1ರಂದೇ ಮೋದಿ ಅವರು ಪತ್ರ ಕಳುಹಿಸಿದ್ದಾರೆ. ಈಗಾಗಲೇ ಸುನೀತಾ ಅವರಿಗೆ ಗಗನಯಾತ್ರಿ ಮೈಕ್ ಮೆಸ್ಸಿಮಿನೋ ಪತ್ರ ತಲುಪಿಸಿದ್ದಾರೆ.

publive-image

ಮೋದಿ ಬರೆದ ಪತ್ರದಲ್ಲಿ ಏನಿದೆ?

‘ಕ್ಷೇಮವಾಗಿ ಬನ್ನಿ’

ಭಾರತದ ಜನರ ಪರವಾಗಿ ನಿಮಗೆ ಶುಭಾಶಯ ಕೋರುತ್ತೇನೆ. ಭಾರತದ 140 ಕೋಟಿ ಜನ ಯಾವಾಗಲೂ ನಿಮ್ಮ ಸಾಧನೆಗಳ ಬಗ್ಗೆ ಹೆಮ್ಮೆ ಪಡುತ್ತಾರೆ. ಇತ್ತೀಚಿನ ಬೆಳವಣಿಗೆಗಳು ಮತ್ತೊಮ್ಮೆ ನಿಮ್ಮ ಸ್ಫೂರ್ತಿದಾಯಕ ಧೈರ್ಯ ಮತ್ತು ಪರಿಶ್ರಮವನ್ನ ಪ್ರದರ್ಶಿಸಿವೆ. ನೀವು ಸಾವಿರಾರು ಮೈಲುಗಳಷ್ಟು ದೂರದಲ್ಲಿದ್ದರೂ, ನಮ್ಮ ಹೃದಯಗಳಿಗೆ ಹತ್ತಿರವಾಗಿದ್ದೀರಿ. ಭಾರತದ ಜನ ನಿಮ್ಮ ಉತ್ತಮ ಆರೋಗ್ಯ ಮತ್ತು ನಿಮ್ಮ ಕಾರ್ಯಾಚರಣೆಯಲ್ಲಿ ಯಶಸ್ಸಿಗೆ ಪ್ರಾರ್ಥಿಸ್ತಿದ್ದಾರೆ. ನಿಮ್ಮ ತಾಯಿ ಬೋನಿ ಪಾಂಡ್ಯಾ ನಿಮ್ಮ ಬರುವಿಕೆಗಾಗಿ ಕಾಯ್ತಿದ್ದಾರೆ. ತಂದೆ ದೀಪಕ್ ಪಾಂಡ್ಯಾ ಆಶೀರ್ವಾದ ನಿಮ್ಮ ಮೇಲಿರುತ್ತೆ. ನಾನು ಬೈಡೆನ್, ಟ್ರಂಪ್​ರನ್ನು ಭೇಟಿಯಾದಾಗ ನಿಮ್ಮ ಯೋಗಕ್ಷೇಮದ ಬಗ್ಗೆ ಚರ್ಚೆ ನಡೆಸಿದ್ದೆ. ನೀವು ಬಾಹ್ಯಾಕಾಶದಿಂದ ವಾಪಸ್ ಬಂದ ಬಳಿಕ ನಿಮ್ಮನ್ನ ಭೇಟಿಯಾಗಲು ಎದುರು ನೋಡ್ತಿದ್ದೇವೆ. ಭಾರತದ ಹೆಮ್ಮೆಯ ಮಗಳಿಗೆ ಆತಿಥ್ಯ ವಹಿಸಲು ನಮಗೆ ಖುಷಿಯಾಗುತ್ತೆ. ಬಾಹ್ಯಾಕಾಶದಿಂದ ಸುರಕ್ಷಿತವಾಗಿ ವಾಪಸ್ ಆಗಲು ನಿಮಗೆ, ಬುಚ್ ವಿಲ್ಮೋರ್​ಗೆ ಶುಭ ಹಾರೈಸುತ್ತೇವೆ.

ನರೇಂದ್ರ ಮೋದಿ, ಪ್ರಧಾನಿ

publive-image

ಈಗಾಗಲೇ ಸುನಿತಾ ವಿಲಿಯಮ್ಸ್ ಹಾಗೂ ಬಚ್ ವಿಲ್ಮೋರ್ ಅವರನ್ನು ಯಶಸ್ವಿಯಾಗಿ ಭೂಮಿಗೆ ವಾಪಸ್ ಕರೆತರುವ ಕಾರ್ಯಾಚರಣೆ ಆರಂಭವಾಗಿದೆ. ಭಾರತೀಯ ಕಾಲಮಾನಕ್ಕೆ ಹೋಲಿಸಿದ್ರೆ 9 ಗಂಟೆ ವ್ಯತ್ಯಾಸವಿದ್ದು ಬುಧವಾರ ಬೆಳಗಿನ ಜಾವ 3 ಗಂಟೆ 27 ನಿಮಿಷಕ್ಕೆ ಬಂದು ತಲುಪಲಿದ್ದಾರೆ. ನಾಸಾ ಇದರ ಲೈವ್ ಕವರೇಜ್ ನೀಡಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment