newsfirstkannada.com

ಶ್ರೀರಾಮನಿಗಾಗಿ ‘ವಿಶೇಷ ಅನುಷ್ಠಾನ ಆಚರಣೆ’ಗೆ ಮೋದಿ ಸಂಕಲ್ಪ.. 11 ದಿನ ಪ್ರಧಾನಿ ಏನೇನು ಮಾಡ್ತಾರೆ ಗೊತ್ತಾ..?

Share :

Published January 12, 2024 at 3:06pm

    ಜನವರಿ 22 ರಂದು ರಾಮಲಲ್ಲಾ ಪ್ರತಿಷ್ಠಾಪನೆ

    ರಾಮಮಂದಿರ ಉದ್ಘಾಟನೆಗೆ 11 ದಿನಗಳು ಭಾಕಿ

    ಜನರ ಆಶೀರ್ವಾದವನ್ನೂ ಕೇಳಿದ ಮೋದಿ

ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಕೇವಲ 11 ದಿನಗಳು ಮಾತ್ರ ಬಾಕಿ ಇವೆ. ಮರ್ಯಾದಾ ಪುರುಷೋತ್ತಮ ಶ್ರೀರಾಮನ ಮೇಲಿನ ಭಕ್ತಿ, ಆರಾಧನೆಯ ದೊಡ್ಡ ಹಬ್ಬಕ್ಕಾಗಿ ಇಡೀ ದೇಶ ಕಾದು ಕೂತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಸಂದೇಶವನ್ನು ರಾಮ ಭಕ್ತರಿಗೆ ಇಂದು ನೀಡಿದರು. ಜೊತೆಗೆ, ಮುಂದಿನ 11 ದಿನಗಳ ಕಾಲ ವಿಶೇಷ ಅನುಷ್ಠಾನ ಆಚರಿಸುವುದಾಗಿ ಘೋಷಿಸಿದರು. ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿರುವ ಹಿನ್ನೆಲೆಯಲ್ಲಿ ಮೋದಿ ವಿಶೇಷ ವ್ರತ ಮಾಡಲು ಸಂಕಲ್ಪ ಮಾಡಲು ನಿರ್ಧರಿಸಿದ್ದಾರೆ.

ಏನದು ವಿಶೇಷ ಅನುಷ್ಠಾನ..?

  • ನಿತ್ಯ ಪ್ರಾಣಾಯಾಮ, ಯೋಗ, ಉಪವಾಸ ನಡೆಸುವುದು
  • ಉಪವಾಸದ ಸಮಯದಲ್ಲಿ ಭಗವತ್ ನಾಮ ಸಂಕೀರ್ತನೆ
  • ಸಾಧು ಸತ್ಸಂಗ ಮಾಡಬೇಕು, ಸಾಧು ಸಜ್ಜನರೊಡನೆ ಸತ್ಸಂಗ
  • ಉಪವಾಸ ಅಂದರೆ ಮಿತ ಆಹಾರ ಮಾತ್ರ ಸೇವನೆ
  • ಬ್ರಹ್ಮ ಮುಹೂರ್ತ ಜಾಗರಣೆ, ದೇವರ ಪ್ರಾರ್ಥನೆ ಮಾಡುವುದಾಗಿದೆ

ವಿಶೇಷ ಆಡಿಯೋ ಸಂದೇಶನದಲ್ಲಿ ಮಾತನಾಡಿರುವ ಅವರು.. ಇಂದು ನಾನು ಭಕ್ತಿಯ ವಿಭಿನ್ನ ಭಾವನೆಗಳನ್ನು ಅನುಭವಿಸುತ್ತಿದ್ದೇನೆ. ನನಗಿದು ಅಭಿವ್ಯಕ್ತಿಗೆ ಅವಕಾಶವಲ್ಲ. ಅನುಭವಕ್ಕಾಗಿ, ನಾನು ಬಯಸಿದ್ದರೂ ಅದರ ಆಳ, ಅಗಲ ಮತ್ತು ತೀವ್ರತೆಯನ್ನು ಪದಗಳಲ್ಲಿ ಹೇಳಲು ಸಾಧ್ಯವಾಗ್ತಿಲ್ಲ. ನನ್ನ ಪರಿಸ್ಥಿತಿಯನ್ನು ನೀವು ಸಹ ಅರ್ಥಮಾಡಿಕೊಳ್ಳಬಹುದು. ಹಲವು ತಲೆಮಾರುಗಳ ಸಂಕಲ್ಪ, ಬದುಕಿದ ಕನಸು ಮತ್ತು ಅದನ್ನು ಸಾಧಿಸುವ ಸಮಯದಲ್ಲಿರುವ ಸೌಭಾಗ್ಯ ನನ್ನದಾಗಿದೆ. ಇದೊಂದು ದೊಡ್ಡ ಜವಾಬ್ದಾರಿ. ಯಾಗ ಮತ್ತು ದೇವರ ಆರಾಧನೆ ಬಗ್ಗೆ ಶಾಸ್ತ್ರಗಳು ಹೇಳುವಂತೆ ನಮ್ಮಲ್ಲಿಯೂ ಪರಮಾತ್ಮನ ಪ್ರಜ್ಞೆಯನ್ನು ಜಾಗೃತಗೊಳಿಸಬೇಕು. ಪವಿತ್ರ ಗ್ರಂಥಗಳಲ್ಲಿ ಉಪವಾಸಗಳು ಮತ್ತು ಕಟ್ಟುನಿಟ್ಟಾದ ನಿಯಮಗಳನ್ನು ಉಲ್ಲೇಖಿಸಲಾಗಿದೆ. ಅದನ್ನು ಪವಿತ್ರೀಕರಣದ ಮೊದಲು ಅನುಸರಿಸಬೇಕು ಎಂದರು.

ಇದನ್ನೂ ಓದಿ: ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಮೋದಿ ಸಂದೇಶ.. 11 ದಿನ ‘ವಿಶೇಷ ವ್ರತ’ ಮಾಡೋದಾಗಿ ಘೋಷಣೆ

ತಪಸ್ವಿಗಳು ಮತ್ತು ಆಧ್ಯಾತ್ಮಿಕ ಯಾತ್ರೆಯ ಮಹಾಪುರುಷರಿಂದ ನನಗೆ ಕೆಲವು ಮಾರ್ಗದರ್ಶನ ದೊರೆತಿದೆ. ಅವರು ಸೂಚಿಸಿದ ನಿಯಮಗಳ ಪ್ರಕಾರ, ನಾನು ಇಂದಿನಿಂದ 11 ದಿನಗಳ ವಿಶೇಷ ಆಚರಣೆಯನ್ನು ಪ್ರಾರಂಭಿಸುತ್ತಿದ್ದೇನೆ. ಪುಣ್ಯದ ಸಂದರ್ಭದಲ್ಲಿ ದೇವರ ಪಾದದಲ್ಲಿ ಪ್ರಾರ್ಥಿಸುತ್ತೇನೆ. ನನ್ನ ಕಡೆಯಿಂದ ಯಾವುದೇ ಕೊರತೆ ಆಗದಂತೆ ಆಶೀರ್ವದಿಸಬೇಕೆಂದು ಜನರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶ್ರೀರಾಮನಿಗಾಗಿ ‘ವಿಶೇಷ ಅನುಷ್ಠಾನ ಆಚರಣೆ’ಗೆ ಮೋದಿ ಸಂಕಲ್ಪ.. 11 ದಿನ ಪ್ರಧಾನಿ ಏನೇನು ಮಾಡ್ತಾರೆ ಗೊತ್ತಾ..?

https://newsfirstlive.com/wp-content/uploads/2024/01/MODI-36.jpg

Load More