/newsfirstlive-kannada/media/post_attachments/wp-content/uploads/2025/01/justin-trudeau-1.jpg)
ಕೆನಡಾ ದೇಶದ ರಾಜಕೀಯದಲ್ಲಿ ಹಠಾತ್ ಬದಲಾವಣೆಯಾಗಿದೆ. ಕೆನಡಾದ ರಾಜಕಾರಣದಲ್ಲಿ ಇಂದಿನಿಂದ ಜಸ್ಟಿನ್​ ಟ್ರುಡೊ ಆಡಳಿತದ ಯುಗಾಂತ್ಯವಾಗಿದೆ. ತಮ್ಮ ಪ್ರಧಾನ ಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವ ಮೂಲಕ ಕೆನಾಡದಲ್ಲಿ ಲಿಬರಲ್ ಪಕ್ಷದ ಆಡಳಿತ ಕೊನೆಗೊಳಿಸಿದ್ದಾರೆ.
ಸೋಮವಾರ ನಡೆದ ಮಾಧ್ಯಮಗೋಷ್ಠಿಯಲ್ಲಿಯೇ ಈ ಹಿಂದೆ ಊಹೆ ಮಾಡಿದಂತೆ ಜಸ್ಟಿನ್ ಟ್ರುಡೊ ತಮ್ಮ ಪ್ರಧಾನಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ಘೋಷಿಸಿದ್ದಾರೆ. ಪಕ್ಷಕ್ಕೆ ಹೊಸ ನಾಯಕತ್ವ ಬೇಕು ಎಂಬ ನೆಪ ಹೇಳಿರುವ ಜಸ್ಟಿನ್ ಟ್ರುಡೊಗೆ ಪಕ್ಷದ ನಾಯಕರೇ ಇತ್ತೀಚೆಗೆ ಟ್ರುಡೊ ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಅದು ಮಾತ್ರವಲ್ಲ ಪಕ್ಷಕ್ಕೆ ಇತ್ತೀಚೆಗೆ ಜನರ ಬೆಂಬಲವು ಕುಸಿದು ಬೀಳುತ್ತಿದ್ದರು ಮುಂದಿನ ಬಾರಿ ಟ್ರುಡೊ ನಾಯಕತ್ವದಲ್ಲಿ ಚುನಾವಣೆಗೆ ಹೋದಲ್ಲಿ ಗೆಲ್ಲುವ ನಿರೀಕ್ಷೆ ತುಂಬಾ ಕಡಿಮೆಯಿತ್ತು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ವಿಶ್ವವೇ ಕಂಡ ಅತ್ಯಂತ ಶ್ರೀಮಂತ, ಕ್ರೂರ ಮಹಾರಾಣಿ ಈಕೆ.. ಸ್ವಂತ ಮಗಳ ಕಥೆಯನ್ನೇ ಮುಗಿಸಿದ್ದು ಯಾಕೆ!
ಕಳೆದ ಹಲವು ತಿಂಗಳಿಂದ ಟ್ರುಡೊ ರಾಜೀನಾಮೆಗೆ ಪಕ್ಷದ ಸದಸ್ಯರು ಬೇಡಿಕೆಯಿಟ್ಟಿದ್ದರು. ಇತ್ತೀಚಿಗೆ ಬಂದ ಚುನಾವಣಾ ಸಮೀಕ್ಷೆಗಳು ಟ್ರುಡೊ ನಾಯಕತ್ವನ್ನು ಪ್ರಶ್ನಿಸುವಂತಿದ್ದವು. 2015ರ ಬಳಿಕ ಅತ್ಯಂತ ಕಡಿಮೆ ಪ್ರತಿಶತ ಮತ ಬೀಳುವ ಸೂಚನೆಯನ್ನು ನೀಡಿದ್ದವು ಅದು ಅಲ್ಲದೇ ಟೊರೊಂಟೊ ಉಪಚುನಾವಣೆಯಲ್ಲಿ ಈ ಹಿಂದೆಂದೂ ಕಂಡು ಕೇಳರಿಯದ ರೀತಿ ಪಕ್ಷ ಸೋಲುಂಡಿತ್ತು. ಸದ್ಯ ಟ್ರುಡೊ ರಾಜೀನಾಮೆಯಿಂದ ಹೊಸ ಮುಖಗಳಿಗೆ ಅವಕಾಶ ನೀಡಲಾಗುತ್ತದೆ. ಆದ್ರೆ ಅವರ ಸ್ಥಾನ ತುಂಬುವ ಭವಿಷ್ಯದ ನಾಯಕ ಯಾರು ಎಂಬ ಬಗ್ಗೆ ಸ್ಪಷ್ಟನೆ ಸಿಗಲು ಇನ್ನೂ ಕೆಲವು ತಿಂಗಳುಗಳು ಬೇಕು. ಟ್ರೊಡೊ ಆಪ್ತ ಕೆನಾಡದ ಹಣಕಾಸು ಸಚಿವ ಡೊಮಿನಿಕ್ ಲೆಬ್ಲಾನ್ಸ್​ ಅವರನ್ನು ಸದ್ಯ ಮಧ್ಯಂತರ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.
53 ವರ್ಷದ ಜಸ್ಟಿನ್ ಟ್ರುಡೊ 2013ರಿಂದಲೂ ಲಿಬರಲ್ ಪಾರ್ಟಿಯ ನಾಯಕರರಾಗಿದ್ದರು. 2015ರಲ್ಲಿ ಪಕ್ಷಕ್ಕೆ ದೊಡ್ಡ ಮಟ್ಟದ ಗೆಲುವನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ತಮ್ಮ ನಾಯಕತ್ವ ಗುಣದಿಂದಲೇ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬಂದಿದ್ದ ಟ್ರುಡೊ ವಿವಾದಗಳಿಂದಲೂ ಹೊರತಾಗಿರಲಿಲ್ಲ. ಇವರ ಕಾಲದಲ್ಲಿಯೇ ಕೆನಾಡದಲ್ಲಿ ಅತಿಹೆಚ್ಚು ಹಣದುಬ್ಬರ ಉಂಟಾಗಿತ್ತು. ಬೆಲೆ ಏರಿಕೆ ಸೇರಿ ಹಲವು ಸಮಸ್ಯೆಗಳು ದೇಶದಲ್ಲಿ ಸೃಷ್ಟಿಯಾಗಿದ್ದವು. ಈ ಎಲ್ಲಾ ಬೆಳವಣಿಗೆಗಳ ನಡುವೆ ಸದ್ಯ ಜಸ್ಟಿನ್ ಟ್ರುಡೊ ತಮ್ಮ ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು. 20 ವರ್ಷಗಳ ಅವರ ಆಡಳಿತ ಕೊನೆಗೊಂಡಂತಾಗಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us