/newsfirstlive-kannada/media/post_attachments/wp-content/uploads/2024/06/Snake.jpg)
ಬೆಂಗಳೂರು: ಮಳೆಗಾಲ ಆರಂಭವಾಗಿದ್ದು, ಕಳೆದೆರಡು ದಿನ ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಭಾನುವಾರದಂದು 110 ಮಿಲಿ ಮೀಟರ್​ ಮಳೆಯಾಗಿದ್ದು, ಸಾಲು ಸಾಲು ಅವಾಂತರ ಸೃಷ್ಟಿಯಾಗಿವೆ. ಈ ಅವಾಂತರಗಳ ನಡುವೆ ಸಿಲಿಕಾನ್​ ಸಿಟಿ ಮಂದಿಗೆ ಇದೀಗ ಮತ್ತೊಂದು ಕಾಟ ಶುರುವಾಗಿದೆ. ಅದುವೇ ಹಾವುಗಳ ಕಾಟ. ವಿಷಜಂತುಗಳ ಕಾಟದಿಂದ ಬೆಂಗಳೂರಿನ ಜನರು ಬೇಸತ್ತಿದ್ದಾರೆ.
ಹೌದು. ಸದ್ಯ ಸಿಟಿ ಮಂದಿಗೆ ಹಾವುಗಳ ಕಾಟ ಶುರುವಾಗಿದೆ. ಬೆಂಗಳೂರಿನಲ್ಲಿ ವಿಷಜಂತುಗಳ ತೊಂದರೆಗೆ ಜನರು ಕಂಗಲಾಗಿದ್ದಾರೆ.
[caption id="attachment_67473" align="alignnone" width="800"]
ನಾಗರಹಾವು[/caption]
ಅಂದಹಾಗೆಯೇ ಇದು ಹಾವುಗಳ ಸಂತಾನೋತ್ಪತ್ತಿ ಕಾಲವಾಗಿದ್ದು, ನಗರದ ಹಲವು ಪ್ರದೇಶದಲ್ಲಿ ಮನೆಯೊಳಗೆ ಹಾವು ಕಾಣಸಿಗುತ್ತಿವೆ. ಹೀಗಾಗಿ ಪಾಲಿಕೆ ವನ್ಯ ಜೀವಿ ಸಂರಕ್ಷಣಾ ತಂಡ ಸಾರ್ವಜನಿಕರಿಗೆ ಎಚ್ಚರಿಕೆಯಿಂದ ಇರುವಂತೆ ಮಾಹಿತಿ ರವಾನಿಸಿದೆ.
[caption id="attachment_67474" align="alignnone" width="800"]
ನಾಗರಹಾವು[/caption]
ಈಗಾಗಲೇ ಬೊಮ್ಮನಹಳ್ಳಿ, ಬ್ಯಾಟರಾಯನಪುರ, ದಾಸರಹಳ್ಳಿ, ಮಹದೇವಪುರ ಮತ್ತು ರಾಜರಾಜೇಶ್ವರಿನಗರ ಸೇರಿ ಕೆಲವು ಹಳ್ಳಿಗಳಿಂದ ಬಿಬಿಎಂಪಿಗೆ ಕರೆಗಳು ಬಂದಿವೆ. ವನ್ಯ ಜೀವಿ ಸಂರಕ್ಷಣಾ ತಂಡ ಕಳೆದ ವಾರ 100 ಕರೆಗಳನ್ನು ಸ್ವೀಕರಿಸಿದೆ. ಸರಾಸರಿ ಪ್ರತಿದಿನ 30 ಕರೆಗಳು ಬಂದಿವೆ. ಹೆಚ್ಚಿನ ಕರೆಗಳು ಯಲಹಂಕ ಮತ್ತು ಬೊಮ್ಮನಹಳ್ಳಿ ವಲಯದಿಂದ ಬಂದಿವೆ.
ಸಹಾಯವಾಣಿ ಸಂಖ್ಯೆಗಳು
ಬಿಬಿಎಂಪಿ ವನ್ಯಜೀವಿ ಸಹಾಯವಾಣಿ: 1533
ಕರ್ನಾಟಕ ಅರಣ್ಯ ಇಲಾಖೆ ಸಹಾಯವಾಣಿ: 1926
ಬಿಬಿಎಂಪಿ ವನ್ಯ ಜೀವಿ ಸಂರಕ್ಷಣಾ ಸಹಾಯವಾಣಿ: 9902794711
ಶೂ, ಹೆಲ್ಮೆಟ್​ಗಳಲ್ಲಿ ಅವಿತು ಕುಳಿತಿರುತ್ತವೆ ಎಚ್ಚರಿಕೆ
ಮಳೆಗಾಲ ಆರಂಭವಾಗಿದೆ. ಹಾವುಗಳು ಕಾಣ ಸಿಕ್ಕರೆ ಅಚ್ಚರಿಯೇನಿಲ್ಲ. ಅದರಲ್ಲೂ ಈ ಸಮಯದಲ್ಲಿ ಹಾವುಗಳು ಬೆಚ್ಚಗೆ ಮಲಗಳು ಶೂ, ಹೆಲ್ಮೆಟ್​ಗಳ ಒಳಗೆ ಸೇರುತ್ತವೆ. ಹೀಗಾಗಿ ಸರಿಯಾಗಿ ನೋಡಿ ಶೂ ಧರಿಸುವುದು ಒಳತು. ಅದರಲ್ಲೂ ಪೋಷಕರು ಮಕ್ಕಳ ಬಗ್ಗೆ ಹೆಚ್ಚು ಗಮನಹರಿಸಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us