/newsfirstlive-kannada/media/post_attachments/wp-content/uploads/2025/06/BNG_FAKE_CURRENCY.jpg)
ಎಲ್ಲರ ಜೆರಾಕ್ಸ್​ ಮೆಷಿನ್​ನಲ್ಲೂ ಜೆರಾಕ್ಸ್ ಪೇಪರ್​ಗಳು​ ಬಂದರೆ ಈತನ ಜೆರಾಕ್ಸ್​ ಮೆಷಿನ್​ನಲ್ಲಿ ಗರಿ ಗರಿ 500 ರೂಪಾಯಿ ನೋಟುಗಳು ಬರುತ್ತಿದ್ದವು. ವಿನಾಶ ಕಾಲೇ ವಿಪರೀತ ಬುದ್ಧಿ ಅನ್ನೋ ಹಾಗೆ ಊರಿಗೆಲ್ಲ ಒಂದು ದಾರಿಯಾದ್ರೆ ಇವನಿಗೆ ಮತ್ತೊಂದು ದಾರಿ ಆಗಿತ್ತು. ಖರ್ಚಿಗೆ ಹಣ ಇಲ್ಲ ಅಂತ ಖೋಟಾ ನೋಟು ಪ್ರಿಂಟ್​ ಮಾಡಿದ ಈತನ ಅತಿ ಬುದ್ಧಿವಂತಿಕೆ ಕಂಬಿ ಹಿಂದೆ ಸೇರುವಂತೆ ಮಾಡಿದೆ.
/newsfirstlive-kannada/media/post_attachments/wp-content/uploads/2025/06/BNG_FAKE_CURRENCY_1.jpg)
ಖೋಟಾ ನೋಟನ್ನೇ ಪಾವತಿಸಿ ಟೋಪಿ ಹಾಕಿದ್ದ ಚಾಲಾಕಿ
ಗರಿ ಗರಿ ನೋಟುಗಳನ್ನು ಪ್ರಿಂಟ್​ ಮಾಡಲು ಹೋಗಿ ಲಾಕ್ ಆಗಿದ್ದಾನೆ. ಇವನ ಹೆಸರು ಕ್ರಿಶ್​ ಮಾಲಿ. ಟೆಕ್ಸ್ ಟೈಲ್ಸ್ ಉದ್ಯಮಿಯೊಬ್ಬರ ಮಗ. ಮನೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿಕೊಂಡಿದ್ದ ಈತ ಅದೇ ಸಿಟ್ಟಿಗೆ ಆನ್‌ಲೈನ್ ಮೂಲಕ ಜೂನ್​ 1ರಂದು ಹೋಟೆಲ್ ಒಂದರಲ್ಲಿ ರೂಮ್​ ಬುಕ್ ಮಾಡಿದ್ದನು.
ಖೋಟಾ ‘ಕ್ರಿಶ್’!
- ಹೋಟೆಲ್ ಒಂದರಲ್ಲಿ ರೂಮ್ ಬುಕ್ ಮಾಡಿದ್ದ ಈ ಕ್ರಿಶ್​ ಮಾಲಿ
- ಖರ್ಚಿಗೆ ಕಾಸು ಬೇಕು ಅಂತ ಖೋಟಾ ನೋಟು ಪ್ರಿಂಟ್​ಗೆ ಪ್ಲಾನ್
- ಹೋಟೆಲ್​ಗೆ ಬರುವಾಗಲೇ ಪ್ರಿಂಟರ್, ಸ್ಕ್ಯಾನರ್​ ತಂದಿದ್ದ ಕ್ರಿಶ್​​
- 7 ದಿನ ಹೋಟೆಲ್ ರೂಮ್​ನಲ್ಲಿ ಕುಳಿತು ನಕಲಿ ನೋಟು ಜೆರಾಕ್ಸ್
- ಜೂ.7ರಂದು ಹೋಟೆಲ್‌ನಿಂದ ಹೋಗುವಾಗ ನಕಲಿ ನೋಟು ಪಾವತಿ
- ಕ್ರಿಶ್​ ಮಾಲಿ ತಂಗಿದ್ದ ರೂಮ್​​ ಕ್ಲಿನ್ ಮಾಡುವಾಗ ನಕಲಿ ನೋಟು ಪತ್ತೆ
- ಕ್ರಿಶ್​ ನೀಡಿದ್ದ ನೋಟು ಪರಿಶೀಲಿಸಿದಾಗ ಅವು ನಕಲಿ ಎಂಬುದು ಪತ್ತೆ
- ಕಮರ್ಷಿಯಲ್ ಸ್ಟ್ರೀಟ್ ಪೊಲೀಸರಿಗೆ ಹೋಟೆಲ್ ಮ್ಯಾನೇಜರ್ ಮಾಹಿತಿ
ಇದನ್ನೂ ಓದಿ: ವಿಮಾನ ಪ್ರಯಾಣಿಕನೂ ಅಲ್ಲ, ಹಾಸ್ಟೆಲ್ ವಿದ್ಯಾರ್ಥಿಯೂ ಅಲ್ಲ.. ಬಾಲಕ ಕಣ್ಮುಚ್ಚಿದ್ದು ಹೇಗೆ?
/newsfirstlive-kannada/media/post_attachments/wp-content/uploads/2025/06/BNG_FAKE_CURRENCY_2.jpg)
ಆಧಾರ್​ ಕಾರ್ಡ್​ ಕೊಟ್ಟ ಕ್ಲ್ಯೂನಿಂದ ಕ್ರಿಶ್​ ಅಂದರ್​!
ಹೋಟೆಲ್​ ಮ್ಯಾನೇಜರ್​ ದೂರು ಆಧರಿಸಿ ಫಿಲ್ಡ್​ಗಿಳಿದ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ರೂಮ್ ಪರಿಶೀಲನೆ ನಡೆಸಿದ್ದಾಗ ಬಿಳಿ ಪೇಪರ್​ ಬಂಡಲ್​ ಪತ್ತೆಯಾಗಿತ್ತು. ಬಳಿಕ ರೂಮ್​ ಬಾಡಿಗೆಗೆ ಪಡೆದುಕೊಳ್ಳುವಾಗ ಆರೋಪಿ ನೀಡಿದ್ದ ಆಧಾರ್‌ನಲ್ಲಿದ್ದ ವಿಳಾಸ ಆಧರಿಸಿ ಆರೋಪಿಯನ್ನ ಬಂಧಿಸಿದರು.
ಊರಿಗೆಲ್ಲಾ ಒಂದು ದಾರಿಯಾದ್ರೆ ನನಗೆ ಮತ್ತೊಂದು ದಾರಿ ಅಂತ ಅಡ್ಡದಾರಿ ಹಿಡಿದಿದ್ದ ಈ ಕ್ರಿಶ್​ ಮಾಲಿ ಕಂಬಿ ಎಣಿಸುವಂತಾಗಿದೆ. ಖರ್ಚಿಗೆ ಹಣ ಕೊಡದಕ್ಕೆ ಮಗ ಇಂತದೊಂದು ಘನಂದಾರಿ ಕೆಲಸ ಮಾಡಿದ್ದು ಪೋಷಕರನ್ನ ಕಣ್..​ ಕಣ್ ಬಿಡುವಂತೆ ಮಾಡಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us