/newsfirstlive-kannada/media/post_attachments/wp-content/uploads/2025/07/UP_FAKE_POLICE.jpg)
ಇಲ್ಲೊಬ್ಬ ಅಸಲಿ ಯುನಿಫಾರ್ಮ್​ ಹಾಕೊಂಡ ನಕಲಿ ಪೊಲೀಸ್, ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡಿದ್ದ. ಹೆಸರು ಬದಲಾಯಿಸಿಕೊಂಡಿದ್ದ ಭೂಪ ಪೊಲೀಸ್ ಕಾನ್‌ಸ್ಟೆಬಲ್ ಅಂತ ಹೇಳಿಕೊಂಡೇ 4 ರಾಜ್ಯಗಳ ಮಹಿಳೆಯರನ್ನ ವಂಚಿಸಿದ್ದ. ಆದ್ರೆ ಇವನ ನವರಂಗಿ ಆಟಗಳಿಗೆ ಕೊನೆಗೂ ಮಹಿಳೆಯೊಬ್ಬಳು ಬ್ರೇಕ್ ಹಾಕಿ ಬಾಂಬೆ ಕೋರ್ಟ್​ ಮೆಟ್ಟಿಲು ಏರಿಸಿದ್ದಾರೆ.
20ಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ವಂಚಿಸಿದ್ದ ನಕಲಿ ಕಾನ್‌ಸ್ಟೆಬಲ್​!
ಕಾನ್‌ಸ್ಟೆಬಲ್ ವೇಶ ಧರಿಸಿ ಸುತ್ತುತ್ತಿದ್ದ ನೌಶಾದ್ ತ್ಯಾಗಿ ಮೈತುಂಬ ವಿಶವೇ ಇತ್ತು. ಈತನ ಸ್ಟೈಲ್​ಗೆ ಮಹಿಳೆಯರ ಮನಸ್ಸು ವಶವಾಗುತ್ತಿದ್ದರು. ಮಾಡಿದ್ದು ಮೋಸವಾದರೂ ನೌಶಾದ್ ತ್ಯಾಗಿ ಹೆಸರಿನ ಬದಲಿಗೆ ​ರಾಹುಲ್​ ತ್ಯಾಗಿ ಎಂದು ಬದಲಾಯಿಸಿಕೊಂಡಿದ್ದನು.
/newsfirstlive-kannada/media/post_attachments/wp-content/uploads/2025/07/UP_FAKE_POLICE_1.jpg)
‘ಪೋಲಿ’ಸ್ ಮೋಹ!
- ನಕಲಿ ಪೊಲೀಸ್ ವೇಶ ಧರಿಸಿ ಸುತ್ತಾಡುತ್ತಿದ್ದ ನೌಶಾದ್ ತ್ಯಾಗಿ
- ನಾಲ್ಕು ರಾಜ್ಯದ ಮಹಿಳೆಯರನ್ನ ವಂಚಿಸಿರೋ ಆರೋಪ
- ಕೆಲವರನ್ನ ಲೈಂಗಿಕವಾಗಿ ಶೋಷಣೆ ಮಾಡಿದ ಆರೋಪವಿದೆ
- ಪೊಲೀಸ್ ಕಾನ್‌ಸ್ಟೆಬಲ್ ಆಗಿ ಮಹಿಳೆಯರನ್ನ ನಂಬಿಸ್ತಿದ್ದ
- ನಕಲಿ ಪೊಲೀಸ್ ಯೂನಿಫಾರ್ಮ್ ಧರಿಸಿ ಅವರನ್ನ ಬಲೆಗೆ
- ಪತಿಯೊಂದಿಗೆ ಬೇರ್ಪಟ್ಟ ಮಹಿಳೆಯರ ಜೊತೆ ಸ್ನೇಹ ಬೆಳೆಸ್ತಿದ್ದ
- ಬಳಿಕ ಅವರನ್ನ ಲೈಂಗಿಕವಾಗಿ ಶೋಷಿಸಿ ಸ್ಥಳ ಬದಲಾಯಿಸ್ತಿದ್ದ
- ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಂದಲೇ ಹೇಳಿಕೆ
ಮೋಸ ಹೋದವರಲ್ಲಿ ಓರ್ವ ಮಹಿಳೆ ಮುಜಫರ್‌ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಂತರ ಈ ಕುರಿತಂತೆ ತನಿಖೆ ಆರಂಭಿಸಿದ ಪೊಲೀಸರು ನೌಶಾದ್‌ನನ್ನ ಬಂಧಿಸಿ ಕರೆ ತಂದಿದ್ದಾರೆ. ಬಂಧನ ಸಮಯದಲ್ಲಿ ನಕಲಿ ಪೊಲೀಸ್ ಸಮವಸ್ತ್ರ ಹಾಗೂ ಸಂಬಂಧಿತ ದಾಖಲೆಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ದಾಖಲಾದ ಕೇಸ್​ಗಳು
- ಸೆಕ್ಷನ್- ಶಿಕ್ಷೆ
- ಸೆಕ್ಷನ್ 420- ವಂಚನೆ
- ಸೆಕ್ಷನ್ 376- ಲೈಂಗಿಕ ದೌರ್ಜನ್ಯ
- BNS ಸೆಕ್ಷನ್ 69- ವಂಚನೆಯ ಮೂಲಕ ಲೈಂಗಿಕ ಶೋಷಣೆ
/newsfirstlive-kannada/media/post_attachments/wp-content/uploads/2025/07/UP_FAKE_POLICE_2.jpg)
ನೌಶಾದ್ ಬಳಿ ಇದ್ದಿದ್ದು ಸರ್ಕಾರ ಕೊಟ್ಟ ಅಸಲಿ ಸಮವಸ್ತ್ರ!
ಗಮನಿಸಬೇಕಾದ ಸಂಗತಿ ಏನಂದ್ರೆ ಆರೋಪಿ ನೌಶಾದ್ ಬಳಿ ಇದ್ದಿದ್ದು ಸರ್ಕಾರವೇ ಕೊಟ್ಟ ಅಸಲಿ ಸಮವಸ್ತ್ರ. ಸಂಭಾಲ್‌ನಲ್ಲಿ ಕಾನ್‌ಸ್ಟೆಬಲ್ ಆಗಿರೋ ತನ್ನ ಸ್ನೇಹಿತನ ಬಳಿ ಸಮವಸ್ತ್ರವನ್ನ ಕದ್ದಿದ್ದಂತೆ. ಅದೇ ಸಮವಸ್ತ್ರವನ್ನ ನೌಶಾದ್ ಎರಡು ವರ್ಷಗಳಿಗೂ ಹೆಚ್ಚು ಕಾಲ ಬಳಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಸದ್ಯ ವಿಚಾರಣೆ ಆರಂಭಿಸಿರೋ ಪೊಲೀಸರು ನೌಶಾದ್​ಗೆ ಮತ್ತಷ್ಟು ಅಪರಾಧಗಳಲ್ಲಿ ಕೈವಾಡವಿದ್ದಾನೆಯೇ ಎಂಬುದರ ಕುರಿತು ತನಿಖೆ ಮುಂದುವರೆಸಿದ್ದಾರೆ. ಸದ್ಯ ನಕಲಿ ಪೊಲೀಸ್ ಅಸಲಿ ಪೊಲೀಸರ ಆತಿಥ್ಯ ಸ್ವೀಕರಿಸುತ್ತಿದ್ದಾನೆ. ಹೆಣ್ಣುಮಕ್ಕಳು ಕೂಡ ಸರ್ಕಾರಿ ಅಧಿಕಾರಿಗಳು ಅಂದಾಕ್ಷಣ ಕರುಡಾಗಬೇಡಿ ಎಚ್ಚರ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us