/newsfirstlive-kannada/media/post_attachments/wp-content/uploads/2024/12/MND_SON.jpg)
ಮಂಡ್ಯ: ರೌಡಿ ಶೀಟರ್ ಮಗನನ್ನು ನೋಡಲು ಕಾರಗೃಹಕ್ಕೆ ಬಂದ ತಂದೆ ಜೈಲು ಪಾಲಾಗಿರುವ ಘಟನೆ ಮಂಡ್ಯದ ಕಾರಾಗೃಹದಲ್ಲಿ ನಡೆದಿದೆ. ಈ ಸಂಬಂಧ ಪಶ್ಚಿಮ ವಲಯದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮಧುಸೂದನ್ ಎನ್ನುವ ವ್ಯಕ್ತಿ ಜೀವ ತೆಗೆದ ಪ್ರಕರಣದಲ್ಲಿ ಮಂಡ್ಯದ ಕಾರಾಗೃಹ ಸೇರಿದ್ದನು. ಹೀಗಾಗಿ ಮಗನನ್ನು ನೋಡಬೇಕೆಂದು ತಂದೆ ಶಿವಣ್ಣ ಕೈಯಲ್ಲಿ ಒಂದು ಬ್ಯಾಗ್ ಹಿಡಿದುಕೊಂಡು ಬಂದಿದ್ದನು. ಮಗನನ್ನು ಮಾತನಾಡಿಸಿದ ಬಳಿಕ ಪೊಲೀಸರು ತಂದೆಯ ಬಳಿ ಇದ್ದ ಬ್ಯಾಗ್ ಅನ್ನು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಬ್ಯಾಗ್ನಲ್ಲಿ ಗಾಂಜಾ ಪತ್ತೆ ಆಗಿದೆ.
ತಕ್ಷಣ ಆತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅದರಲ್ಲಿ ಏನಿದೆ ಎಂದು ನನಗೆ ಗೊತ್ತಿಲ್ಲ. ಜೈಲಿನಲ್ಲಿರುವ ಮಗ ಹೇಳಿದಂತೆ ಆ ಬ್ಯಾಗ್ ಅನ್ನು ತಂದಿದ್ದೇನೆ. ಅದರಲ್ಲಿ ಗಾಂಜಾ ಇರುವುದರ ಬಗ್ಗೆ ಮಾಹಿತಿ ಇರಲಿಲ್ಲ ಎಂದು ಪೊಲೀಸರ ಮುಂದೆ ತಂದೆ ಶಿವಣ್ಣ ಹೇಳಿದ್ದಾನೆ.
ಇದನ್ನೂ ಓದಿ: ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಇತಿಹಾಸ.. ಚಾಂಪಿಯನ್ D ಗುಕೇಶ್ ಬಗ್ಗೆ ನಿಮಗೆ ಎಷ್ಟು ಗೊತ್ತು?
ಇನ್ನು ಜೈಲಿನಲ್ಲಿರುವ ಮಗನನ್ನು ವಿಚಾರಣೆ ಮಾಡಲಾಗಿದ್ದು, ನಾನೇ ಬ್ಯಾಗ್ ತರಿಸಿದ್ದಾಗಿ ತಪ್ಪು ಒಪ್ಪಿಕೊಂಡಿದ್ದಾನೆ. ಜೈಲಿನಿಂದ ಕರೆಮಾಡಿ ತನ್ನ ಸ್ನೇಹಿತ ನೀಡುವ ಬಟ್ಟೆ ಬ್ಯಾಗ್ ತರುವಂತೆ ತಂದೆಗೆ ಹೇಳಿದ್ದನು. ಹೀಗಾಗಿ ಮಳವಳ್ಳಿಯಲ್ಲಿ ಸ್ನೇಹಿತನಿಂದ ಬ್ಯಾಗ್ ಪಡೆದುಕೊಂಡು ಬಳಿಕ ಜೈಲಿಗೆ ತಂದೆ ಬಂದಿದ್ದನು. ಇದು ಎಲ್ಲ ಜೈಲಿನಲ್ಲಿರುವ ಸಹ ಕೈದಿ ನಾಗೇಶ್ ಅಲಿಯಾಸ್ ಸಂಜು ಸೂಚನೆಯಂತೆ ಮಧುಸೂದನ್ ಮಾಡಿದ್ದನು.
ನಿಯಮಾನುಸಾರ ಎನ್ಡಿಪಿಎಸ್ ಕಾಯ್ದೆಯಡಿ ಶಿವಣ್ಣನನ್ನ ಬಂಧಿಸಲಾಗಿದೆ. ಇನ್ನು ಮಳವಳ್ಳಿಯಲ್ಲಿ ಬ್ಯಾಗ್ ಕೊಟ್ಟಿರುವ ಮಗನ ಸ್ನೇಹಿತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಪ್ರಸ್ತುತ ಈ ಸಂಬಂಧ ಪಶ್ಚಿಮ ವಲಯದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ