ಲಾಂಗ್‌ ಹಿಡಿದ ವಿಡಿಯೋ ಡಿಲೀಟ್ ಮಾಡದ ಬುಜ್ಜಿ.. ವಿನಯ್, ರಜತ್ ಇಬ್ಬರಿಗೂ ಪೊಲೀಸರ ಬುಲಾವ್‌!

author-image
Veena Gangani
Updated On
ವಿನಯ್ ಗೌಡ, ರಜತ್​ ರಿಲೀಸ್​ ಕೇಸ್​ಗೆ ಟ್ವಿಸ್ಟ್​; ಏನಿದು ಪೊಲೀಸರ ವರಸೆ..?
Advertisment
  • ಭಯದ ವಾತಾವರಣ ಸೃಷ್ಟಿಸುವ ರೀಲ್ಸ್ ಇದು
  • ಬಿಗ್​ಬಾಸ್ ಮಾಜಿ ಸ್ಪರ್ಧಿಗಳ ವಿರುದ್ಧ FIR ದಾಖಲು
  • ಇನ್​ಸ್ಟಾಗ್ರಾಮ್​ನಲ್ಲಿ ಇನ್ನೂ ಹಾಗೇ ಇದೆ ಆ ವಿಡಿಯೋ

ಬಿಗ್​ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಹಾಗೂ ವಿನಯ್ ವಿರುದ್ಧ ಎಫ್ಐಆರ್ ದಾಖಲಾದ ಬೆನ್ನಲ್ಲೇ ಇಬ್ಬರಿಗೂ ಪೊಲೀಸರು ವಿಚಾರಣೆಗೆ ಕರೆದಿದ್ದಾರೆ.

ಇದನ್ನೂ ಓದಿ: ಭಾರತಕ್ಕೆ ಜಾಕ್‌ಪಾಟ್‌: ಒಂದಲ್ಲ.. ಎರಡಲ್ಲ.. 7 ಕಡೆ KGF ಮಾದರಿಯ ಚಿನ್ನದ ನಿಕ್ಷೇಪ ಪತ್ತೆ; ಗುಡ್‌ನ್ಯೂಸ್‌!

publive-image

ಹೌದು, ವಿನಯ್ ಗೌಡ ಹಾಗೂ ರಜತ್​​ ಕಿಶನ್​ ಇಬ್ಬರು, ಕೈಯಲ್ಲಿ ಲಾಂಗು, ಕಣ್ಣಿಗೆ ಕೂಲಿಂಗ್ ಗ್ಲಾಸ್​ ಹಾಕಿಕೊಂಡು ರೀಲ್ಸ್​ ಮಾಡಿದ್ದರು. ಲಾಂಗ್ ಹಿಡಿದು ಭಯದ ವಾತಾವರಣ ಸೃಷ್ಟಿಸುವ ರೀಲ್ಸ್ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆದ ಬೆನ್ನಲ್ಲೆ ಇಬ್ಬರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪೋಲಿಸರು ಎಫ್ಐಆರ್ ದಾಖಲಿಸಿದ್ದಾರೆ.

publive-image

ಸದ್ಯ ವಿನಯ್​ ಗೌಡ ಹಾಗೂ ರಜತ್​ ಅವರನ್ನು ಬಸವೇಶ್ವರ ನಗರ ಪೊಲೀಸರು ಮೌಖಿಕವಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ಕೊಟ್ಟಿದ್ದಾರೆ. ಶೂಟಿಂಗ್​ನಲ್ಲಿ ಹೊರಗಡೆ ಇರೋ ಕಾರಣ ರಜತ್​ ಅವರು ಸಮಯವಕಾಶ ಕೇಳಿದ್ದಾರೆ. ಅಲ್ಲದೇ ಇಂದು ವಿಚಾರಣೆಗೆ ಹಾಜರಾಗೋದಾಗಿ ವಿನಯ್ ಗೌಡ ತಿಳಿಸಿದ್ದಾರೆ.

publive-image

ಆದ್ರೆ ಇಲ್ಲೊಂದು ಗಮನಿಸಬೇಕಾದ ಅಂಶವೆಂದರೆ ಪೊಲೀಸರು ವಿಡಿಯೋ ಮಾಡಿದ್ದರಿಂದ ಎಫ್​ಐಆರ್​ ದಾಖಲಿಸಿದ್ರೂ ರಜತ್​ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಕೊಂಡ ವಿಡಿಯೋವನ್ನು ಡಿಲೀಟ್ ಮಾಡಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment