newsfirstkannada.com

ಫ್ರಾಂಚೈಸಿ ಕೊಡಿಸೋದಾಗಿ ಲಕ್ಷ ಲಕ್ಷ ಮೋಸ.. ಇಡ್ಲಿಗುರು ಹೋಟೆಲ್​ ಮಾಲೀಕನ ವಿರುದ್ಧ ಕೇಸ್!​​

Share :

Published February 7, 2024 at 8:32am

    ಇಡ್ಲಿ ಗುರು ಹೋಟೆಲ್ ಮಾಲೀಕನ ವಿರುದ್ಧ ಅಕ್ರಮ ಆರೋಪ

    ಸಾಕಷ್ಟು ಜನರಿಗೆ ಲಕ್ಷಗಟ್ಟಲೇ ಹಣ ವಂಚಿಸಿರುವ ಆರೋಪ!

    ಮಾಲೀಕ ಕಾರ್ತಿಕ್ ಶೆಟ್ಟಿ, ಕುಟುಂಬ, ಸಿಬ್ಬಂದಿ ವಿರುದ್ಧ ದೂರು

ಬೆಂಗಳೂರು: ಖ್ಯಾತ ತಿಂಡಿ ಹೋಟೆಲ್ ಇಡ್ಲಿಗುರು ಮಾಲೀಕನ ವಿರುದ್ಧ ಅಕ್ರಮ ಆರೋಪ ಕೇಳಿ ಬಂದಿದೆ. ಫ್ರಾಂಚೈಸಿ ಕೊಡಿಸೋದಾಗಿ ನಂಬಿಸಿ ಸಾಕಷ್ಟು ಜನರಿಗೆ ಲಕ್ಷಾಂತರ ಹಣ ಮೋಸ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಇಡ್ಲಿಗುರು ಹೋಟೆಲ್​ ಮಾಲೀಕ ಕಾರ್ತಿಕ್​ ಶೆಟ್ಟಿ ಮತ್ತವರ ಪತ್ನಿ ಮಂಜುಳಾ ಸೇರಿ ಹಲವರ ವಿರುದ್ಧ ದೂರು ನೀಡಲಾಗಿದೆ.

ಇನ್ನು, ಚೇತನ್​ ಎಂಬುವರು ಕಾಮಾಕ್ಷಿಪಾಳ್ಯ ಪೊಲೀಸ್​ ಠಾಣೆಯಲ್ಲಿ ಕೇಸ್​ ಮಾಡಲಾಗಿದೆ. ಕಾರ್ತಿಕ್​​​ ಲಕ್ಷಾಂತರ ರೂಪಾಯಿ ಕೊಟ್ಟು ಫ್ರಾಂಚೈಸಿ ಕೊಡುತ್ತಿದ್ದರು. ಫುಡ್​ಕಾರ್ಟ್​ ಮೂಲಕ ವ್ಯಾಪರ ಮಾಡಿಸೋ ಭರವಸೆ ನೀಡುತ್ತಿದ್ದರು. ಆದ್ರೆ, ಕಾರ್ತಿಕ್​ ಶೆಟ್ಟಿ ಹೇಳಿದಂತೆ ವ್ಯಾಪರ ಆಗುತ್ತಿರಲಿಲ್ಲ. ನಂತರ ಕೇಳಿದ್ರೆ ಬೇರೆ ಎಲ್ಲಾದ್ರೂ ವ್ಯಾಪರ ಮಾಡೋಣ ಎನ್ನುತ್ತಿದ್ದರು ಎಂದು ದೂರಲಾಗಿದೆ.

ಇಷ್ಟೇ ಅಲ್ಲ ಕಮೀಷನ್​​ ಕೊಡೋದಾಗಿ ಕೂಡ ಹೇಳಿ ಮೋಸ ಮಾಡಿದ್ದಾರೆ. ನಗರದಲ್ಲಿ 10ಕ್ಕೂ ಹೆಚ್ಚು ಮಂದಿಗೆ ವಂಚಿಸಿದ್ದಾರೆ. ಯಾವಾಗ ಜನ ಸಿಟ್ಟಿಗೆದ್ದರೋ ಆಗ ಕಾರ್ತಿಕ್​ ಕುಟುಂಬ ಯಾರಿಗೂ ಸಿಗದೆ ಬೇರೆ ರಾಜ್ಯಕ್ಕೆ ಪರಾರಿಯಾಗಿದೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫ್ರಾಂಚೈಸಿ ಕೊಡಿಸೋದಾಗಿ ಲಕ್ಷ ಲಕ್ಷ ಮೋಸ.. ಇಡ್ಲಿಗುರು ಹೋಟೆಲ್​ ಮಾಲೀಕನ ವಿರುದ್ಧ ಕೇಸ್!​​

https://newsfirstlive.com/wp-content/uploads/2024/02/Idly-Guru.jpg

Load More