/newsfirstlive-kannada/media/post_attachments/wp-content/uploads/2025/06/RCB_PBKS-1.jpg)
ಬೆಂಗಳೂರು: ನಮೋ ಅಂಗಳದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಐಪಿಎಲ್ನ ಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕಾಗಿ ಕೋಟಿ ಕೋಟಿ ಅಭಿಮಾನಿಗಳು ಕಾತರದಿಂದ ಇದ್ದಾರೆ. ಇದು ಈಗಿರುವಾಗಲೇ ಫೈನಲ್ ಪಂದ್ಯದ ಸಂಭ್ರಮಾಚರಣೆ ಹೆಸರಲ್ಲಿ ಅಭಿಮಾನಿಗಳು ಹದ್ದುಮೀರಿ ವರ್ತಿಸಿದರೆ ಪೊಲೀಸರು ಪ್ರಕರಣ ದಾಖಲಿಸುತ್ತಾರೆ.
ಆರ್ಸಿಬಿ ಹಾಗೂ ಪಂಜಾಬ್ ನಡುವಿನ ಪಂದ್ಯ ಗುಜರಾತ್ನಲ್ಲಿ ನಡೆದರೂ ಬೆಂಗಳೂರಿನಲ್ಲಿ ಅಭಿಮಾನಿಗಳು ಸಂಭ್ರಮಾಚರಣೆ ಹೆಸರಲ್ಲಿ ಹದ್ದುಮೀರಿ ವರ್ತಿಸುವಂತೆ ಇಲ್ಲ. ಪಂದ್ಯದ ಹೆಸರಲ್ಲಿ ಉದ್ಧಟತನ ತೋರಿಸಬಾರದು. ಅಭಿಮಾನಿಗಳ ಸಂಭ್ರಮಾಚರಣೆ ಕಾನೂನಿನ ಚೌಕಟ್ಟಿನಲ್ಲಿ ಇರಬೇಕು. ಅತಿರೇಕದಿಂದ ವರ್ತನೆ ಮಾಡಿದರೆ ಪೊಲೀಸರು ಪ್ರಕರಣ ದಾಖಲು ಮಾಡಲು ಸಿದ್ಧತೆ ನಡೆಸಿದ್ದಾರೆ.
ಇದನ್ನೂ ಓದಿ:ಏಕದಿನ ವಿಶ್ವಕಪ್ ಟೂರ್ನಿ ನಡೆಯುವ ದಿನಾಂಕ, ಸ್ಥಳ ಘೋಷಣೆ.. ಬೆಂಗಳೂರಿಂದಲೇ ಆರಂಭ
ಅಭಿಮಾನದ ಹೆಸರಲ್ಲಿ ರಸ್ತೆ ತಡೆಯುವುದು, ಟೈರ್ಗೆ ಬೆಂಕಿ ಹಚ್ಚುವುದು, ವಾಹನಗಳನ್ನು ತಡೆಯುವುದು, ಸಾರ್ವಜನಿಕರಿಗೆ ಶಾಂತಿ ಭಂಗ ಉಂಟು ಮಾಡುವುದು ಸೇರಿದಂತೆ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟು ಉಂಟುಮಾಡುವಂತಹದ್ದನ್ನು ಮಾಡಬಾರದು. ಒಂದು ವೇಳೆ ಇಂತಹವುಗಳನ್ನು ಮಾಡಿದರೆ ಅಂತವರ ವಿರುದ್ಧ ಪೊಲೀಸರು ಕ್ರಮಕ್ಕೆ ಮುಂದಾಗುತ್ತಾರೆ.
ಉದ್ಯಾನ ನಗರಿಯ ಎಂ.ಜಿ ರಸ್ತೆ, ಕೋರಮಂಗಲ, ಇಂದಿರಾ ನಗರ, ಎಂ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತಾ ಸೇರಿದಂತೆ ನಗರದಲ್ಲಿ ಹೆಚ್ಚುವರಿ ಭದ್ರತೆ ನಿಯೋಜನೆ ಮಾಡಲಾಗಿದೆ. ನಗರದಲ್ಲಿ ಎಲ್ಲೆಲ್ಲಿ ಐಪಿಎಲ್ ಫೈನಲ್ ಪಂದ್ಯದ ಸ್ಕ್ರೀನಿಂಗ್ ಅಳವಡಿಸಿದ್ದಾರೋ, ಅಲ್ಲೆಲ್ಲಾ ಖಾಕಿ ಹದ್ದಿನ ಕಣ್ಣಿಟ್ಟಿರುತ್ತದೆ. ಸೋಶಿಯಲ್ ಮೀಡಿಯಾದಲ್ಲೂ ಅತಿರೇಕವಾಗಿ ಪೋಸ್ಟ್ಗಳನ್ನು ಹಾಕುವುದು, ಉದ್ಧಟತನದ ವಿಡೀಯೋ ಪೋಸ್ಟ್ ಮಾಡುವುದು ಮಾಡಿದರೆ ಕ್ರಮಕ್ಕೆ ಮುಂದಾಗುತ್ತಾರೆ. ಜೊತೆಗೆ ಪಬ್, ಕ್ಲಬ್, ಪ್ರತಿಷ್ಠಿತ ಹೋಟೆಲ್‌ಗಳು ರಾತ್ರಿ ವೇಳೆ ಅವಧಿ ಮೀರಿ ತೆರೆಯುವಂತಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ