Advertisment

ಪ್ರೀತಿಸಿ ಮದುವೆಯಾಗ್ತೀನಿ ಕಣೆ ಎಂದು ನಂಬಿಸಿದ ಆರೋಪ.. 18 ಲಕ್ಷ ರೂಪಾಯಿ ಪೀಕಿ ಕೈಕೊಟ್ಟ ಪೊಲೀಸಪ್ಪ!

author-image
AS Harshith
Updated On
ಪ್ರೀತಿಸಿ ಮದುವೆಯಾಗ್ತೀನಿ ಕಣೆ ಎಂದು ನಂಬಿಸಿದ ಆರೋಪ.. 18 ಲಕ್ಷ ರೂಪಾಯಿ ಪೀಕಿ ಕೈಕೊಟ್ಟ ಪೊಲೀಸಪ್ಪ!
Advertisment
  • ಒಂದೆರಡಲ್ಲ.. ಬರೋಬ್ಬರಿ 18 ಲಕ್ಷ ರೂಪಾಯಿ ಪಂಗನಾಮ
  • ಪೊಲೀಸ್ ಕಾನ್​ಸ್ಟೇಬಲ್ ವರಸೆ ಒಂದೊಂದಾಗಿ ಬಿಚ್ಚಿಟ್ಟ ಯುವತಿ
  • ಒಂದು ಬಾರಿ ತನಿಖೆ ಎದುರಿಸಿ ಮತ್ತೆದೇ ಬುದ್ಧಿ ತೋರಿಸಿದ ಪೊಲೀಸ್​

ಪೊಲೀಸ್ ಕಾನ್​ಸ್ಟೇಬಲ್ ಮೇಲೆ ವಂಚನೆ ಆಯೋಪವೊಂದು ಕೇಳಿಬಂದಿದೆ. ಯುವತಿಯೊಬ್ಬಳನ್ನ ಮದುವೆಯಾಗುವುದಾಗಿ ನಂಬಿಸಿ ಆಕೆಯಿಂದ 18 ಲಕ್ಷ ರೂಪಾಯಿ ಹಣ ಪಡೆದು ವಂಚಿಸಿದ್ದಾರೆ. ಅಂದಹಾಗೆಯೇ ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ನಡೆದಿದೆ.

Advertisment

ಮುಂಡಗೋಡು ಠಾಣೆಯ ಕಾನ್​​ಸ್ಟೇಬಲ್ ಗಿರೀಶ್.ಎಸ್.ಎಮ್ ವಂಚನೆ ಮಾಡಿದ ಆರೋಪಿಯಾಗಿದ್ದು, ಹಾಸನ ಮೂಲದ ಚನ್ನರಾಯಪಟ್ಟಣ ಮೂಲದ ಸುಚಿತ್ರ ಎಂಬಾಕೆಗೆ ವಂಚಿಸಿರುವ ಆರೋಪ ಕೇಳಿಬಂದಿದೆ. ವಂಚನೆಗೊಳಗಾದ ಯುವತಿ ಪೊಲೀಸ್​​ ಠಾಣೆ ಮೆಟ್ಟಿಲೇರಿದ್ದು ದೂರು ನೀಡಿದ್ದಾರೆ.

ಇದನ್ನೂ ಓದಿ: ನಿನ್ನೆಗಿಂತ ಕೊಂಚ ಜಾಸ್ತಿ.. ಇಂದು KRS ಡ್ಯಾಂನ ಒಳಹರಿವು ಎಷ್ಟಿದೆ?

ಈ ಹಿಂದೆ ಸುಚಿತ್ರಾ ರವರು ಮದುವೆಯಾಗುವುದಾಗಿ ನಂಬಿಸಿ, 18 ಲಕ್ಷ ವಂಚಿಸಿರುವ ಕುರಿತು ಎಸ್.ಪಿ ವಿಷ್ಣುವರ್ಧನ್ ರವರಿಗೆ ದೂರು ನೀಡಿದ್ದರು. ದೂರು ಹಿನ್ನೆಲೆಯಲ್ಲಿ ಆತನನ್ನು ಕರೆಯಿಸಿ ತನಿಖೆ ಕೈಗೊಂಡಾಗ ಹಣ ಪಡೆದಿದ್ದು ಹಣ ಮರಳಿಸುತ್ತೇನೆ ಎಂದು ಒಪ್ಪಿಕೊಂಡಿದ್ದ. ಆದರೆ ಮದುವೆಯಾಗಲು ನಿರಾಕರಿಸಿದ್ದ.

ಇದನ್ನೂ ಓದಿ: ಹೆರಿಗೆಗೆಂದು ಬಂದ ಗರ್ಭಿಣಿ ಸಾವು.. ಆಸ್ಪತ್ರೆ ಮುಂದೆ ಶವವಿಟ್ಟು ಕುಟುಂಬಸ್ಥರ ಪ್ರತಿಭಟನೆ

Advertisment

ಬಳಿಕ ಹಣ ಮರಳಿಸದೇ ಇರುವುದರಿಂದ ನಿನ್ನೆ ರಾತ್ರಿ ಮುಂಡಗೋಡು ಠಾಣೆಗೆ ತೆರಳಿದ ಯುವತಿ ವಂಚನೆ ದೂರು ನೀಡಿದ್ದಾರೆ. ಮುಂಡಗೋಡು ಪೊಲೀಸರು ಕಲಂ 420 ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ತನಿಖೆ ಕೈಗೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment