ದೇವಸ್ಥಾನಕ್ಕೆ ಬಂದಿದ್ದ ಕಾನ್ಸ್ಟೇಬಲ್ ಜೊತೆ ಕುಡುಕನ ಕಿರಿಕ್
ಪೊಲೀಸ್ ಮತ್ತು ಆತನ ಪತ್ನಿ ಮೇಲೆ ಹಲ್ಲೆ ಮಾಡಿದ ಕುಡುಕ
ಸಾಲದೆಂಬಂತೆ ದೇವಸ್ಥಾನದ ಆಚೆ ನಿಂತಿದ್ದ ಪೊಲೀಸ್ ಬೈಕ್ಗೆ ಬೆಂಕಿ
ಭೋಪಾಲ್: ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನ ಹಿಲ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಭೋಪಾಲ್ನ ಕಮಲಾನಗರದಲ್ಲಿರುವ ನವಗ್ರಹ ದೇವಸ್ಥಾನಕ್ಕೆ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ತಮ್ಮ ಪತ್ನಿಯೊಡನೆ ಹೋಗಿದ್ದರು. ಈ ವೇಳೆ ದೇವಸ್ಥಾನದಲ್ಲಿ ಕುಡುಕನೊಬ್ಬ ಭಕ್ತರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ. ಅದೇ ವೇಳೆ ದೇವಸ್ಥಾನದಲ್ಲಿದ್ದ ಕಾನ್ಸ್ಟೇಬಲ್ ಧರ್ಮೇಂದ್ರ ಶರ್ಮಾ ಆತನನ್ನು ಹಿಡಿದು ಗದರಿಸಿದ್ದಾರೆ.
ಇದನ್ನೂ ಓದಿ: ಕೊಲ್ಕತ್ತಾದಲ್ಲಿ ಬೀದಿಗಿಳಿದ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಭಾರೀ ಆಕ್ರೋಶ; ಯಾಕೆ?
ಇದಕ್ಕೆ ರೊಚ್ಚಿಗೆದ್ದ ಕುಡುಕ ಧರ್ಮೇಂದ್ರ ಮೇಲೆಯೇ ಹಲ್ಲೆ ಮಾಡಿದ್ದಾನೆ. ಅವರ ಪತ್ನಿಯ ಮೇಲೆಯೂ ಹಲ್ಲೆಗೆ ಯತ್ನಿಸಿದ್ದಾನೆ. ಕೊನೆಗೆ ದೇವಸ್ಥಾನದಿಂದ ಹೊರಗೆ ಹೋದ ಕುಡುಕ ಮಾಡಿದ್ದು ಮತ್ತೊಂದು ಅನಾಹುತಕಾರಿ ಕೆಲಸ.
View this post on Instagram
ಇದನ್ನೂ ಓದಿ: ಜಮ್ಮು-ಕಾಶ್ಮೀರ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್.. 10 ವರ್ಷಗಳ ಬಳಿಕ 3 ಮಹತ್ವದ ಹೆಜ್ಜೆ; ಏನದು?
ಪತ್ನಿಯೊಂದಿಗೆ ಬಂದಿದ್ದ ಕಾನ್ಸ್ಟೇಬಲ್ ಶರ್ಮಾ ತಮ್ಮ ಬೈಕನ್ನು ದೇವಸ್ಥಾನದ ಆಚೆಯೇ ಬಿಟ್ಟು ಬಂದಿದ್ದರು. ಅದನ್ನು ಕಂಡಿದ್ದ ಕುಡುಕ ಬೈಕ್ನಲ್ಲಿದ್ದ ಪೆಟ್ರೋಲನ್ನೇ ತೆಗೆದು ಕಾನ್ಸ್ಟೇಬಲ್ ಬೈಕ್ ಮೇಲೆ ಸುರಿದು ಬೆಂಕಿಯಿಟ್ಟುಬಿಟ್ಟಿದ್ದಾನೆ. ಸದ್ಯ ಕಮಲಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಕುಡುಕನಿಗಾಗಿ ಹುಡುಕಾಟ ಶುರುವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ