ಟ್ರಾಫಿಕ್​ ಸಿಗ್ನಲ್​ನಲ್ಲಿ ಹೆಂಡತಿ ಮಾಡಿದ ರೀಲ್ಸ್​ನಿಂದ ಪೊಲೀಸಪ್ಪನ ಉದ್ಯೋಗವೇ ಹೋಯಿತು!

author-image
Bheemappa
Updated On
ಟ್ರಾಫಿಕ್​ ಸಿಗ್ನಲ್​ನಲ್ಲಿ ಹೆಂಡತಿ ಮಾಡಿದ ರೀಲ್ಸ್​ನಿಂದ ಪೊಲೀಸಪ್ಪನ ಉದ್ಯೋಗವೇ ಹೋಯಿತು!
Advertisment
  • ಅತ್ತಿಗೆ ಜೊತೆಗೆ ದೇವಾಲಯಕ್ಕೆ ಹೋಗುವಾಗ ರೀಲ್ಸ್ ಮಾಡಿದ್ರು
  • ಸರ್ಕಾರಿ ಅಧಿಕಾರಿಯ ಹೆಂಡತಿ ರೀಲ್ಸ್ ಮಾಡಿದ್ದೇ ತಪ್ಪಾಯಿತು
  • ಹೆಂಡತಿ ರೀಲ್ಸ್​ನಿಂದ ಗಂಡನ ಉದ್ಯೋಗ ಹೋಗಿದ್ದು ಹೇಗೆ..?

ನಿಮ್ಮ ಮನೆಯಲ್ಲಿ ಯಾರದರೂ ಸರ್ಕಾರಿ ಅಧಿಕಾರಿ ಇದ್ರೆ ಕುಟುಂಸ್ಥರು ಕೊಂಚ ಸಭ್ಯತೆಯಿಂದ ರೀಲ್ಸ್​ನಲ್ಲಿ ವರ್ತನೆ ಮಾಡಿದರೆ ಉತ್ತಮ. ಏಕೆಂದರೆ ಮೊಬೈಲ್​ ಗೀಳು ಹಾಗೂ ರಿಲ್ಸ್​ ಹುಚ್ಚಿನಿಂದ ಕಷ್ಟಪಟ್ಟು ಸಂಪಾದಿಸಿರುವ ಸರ್ಕಾರಿ ಕೆಲಸಕ್ಕೆ ಕುತ್ತು ಬರಬಹುದು. ಸದ್ಯ ಇದನ್ನೆಲ್ಲಾ ಯಾಕೆ ಹೇಳುತ್ತಿದ್ದೇವೆ ಎಂದರೆ ಹೆಂಡತಿ ಮಾಡಿದ ತಪ್ಪಿಗೆ ಸರ್ಕಾರಿ ಸಿಬ್ಬಂದಿಯಾಗಿದ್ದ ಗಂಡ ಕೆಲಸವನ್ನೇ ಕಳೆದುಕೊಂಡಿದ್ದಾರೆ.

ಚಂಡೀಗಢ ನಗರದ ಸೆಕ್ಟರ್​ 19 ಪೊಲೀಸ್ ಠಾಣೆಯಲ್ಲಿ ಅಜಯ್ ಕುಂದು ಅವರು ಪೊಲೀಸ್ ಕಾನ್​ಸ್ಟೆಬಲ್ ಆಗಿ ಕೆಲಸ ಮಾಡುತ್ತಿದ್ದರು. ಇವರ ಹೆಂಡತಿ ಜ್ಯೋತಿ ಹಾಗೂ ಸಹೋದರಿ ಪೂಜಾ ಅವರು ಮಾರ್ಚ್ 20 ರಂದು ಹನುಮಾನ್ ದೇವಾಲಯಕ್ಕೆ ದರ್ಶನಕ್ಕೆಂದು ತೆರಳುವಾಗ ಅತ್ತಿಗೆ ಪೂಜಾ ಜೊತೆ ಸೇರಿಕೊಂಡು ರೀಲ್ಸ್​ ಮಾಡಿದ್ದಾರೆ. ಈ ರೀಲ್ಸ್​ ಮಾಡಿದ್ದೇ ಗಂಡನಿಗೆ ಮುಳುವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: MS ಧೋನಿ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸಿಎಸ್​ಕೆ ಕೋಚ್​.. ಮಾಹಿಗೆ ಏನಾಗಿದೆ ಗೊತ್ತಾ?

publive-image

ಹನುಮಾನ್ ದೇವಾಲಯಕ್ಕೆ ತೆರಳುವಾಗ ಚಂಡೀಗಢದ ಸೆಕ್ಟರ್ 20ರ ನಡು ರಸ್ತೆಯಲ್ಲಿ ಝೀಬ್ರಾ ಕ್ರಾಸ್ ಮೇಲೆ ರೀಲ್ಸ್​ನಲ್ಲಿ ಪಂಜಾಬಿ​ ಸಾಂಗ್​ಗೆ ಜ್ಯೋತಿ ಡ್ಯಾನ್ಸ್ ಮಾಡಿದ್ದಾರೆ. ಸಿಗ್ನಲ್ ಇದ್ದಿದ್ದರಿಂದ ವಾಹನಗಳು ಸಾಲಾಗಿ ನಿಂತಿವೆ. ಇದೇ ಸಮಯ ಬಳಸಿಕೊಂಡು ಝೀಬ್ರಾ ಕ್ರಾಸ್ ಮೇಲೆ ಮಹಿಳೆ ಡ್ಯಾನ್ಸ್ ಮಾಡಿದ್ದರು. ಆ ಮೇಲೆ ಈ ವಿಡಿಯೋ ವೈರಲ್ ಆಗಿದ್ದರಿಂದ ಜನ ಆಕ್ರೋಶ ವ್ಯಕ್ತವಾಗಿದೆ.

ವಿಡಿಯೋವನ್ನು ಪರಿಶೀಲನೆ ಮಾಡಿದಾಗ ಜ್ಯೋತಿ, ಕಾನ್​ಸ್ಟೆಬಲ್ ಅಜಯ್ ಕುಂದು ಅವರ ಹೆಂಡತಿ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಚಂಡೀಗಢದಲ್ಲಿ ಜ್ಯೋತಿ ಹಾಗೂ ಪೂಜಾ ವಿರುದ್ಧ ಹೆಡ್ ಕಾನ್‌ಸ್ಟೆಬಲ್ ಜಸ್ಬೀರ್ ಪ್ರಕರಣ ದಾಖಲು ಮಾಡಿದ್ದಾರೆ. ಸದ್ಯ ಪ್ರಕರಣ ಸಂಬಂಧ ಜಾಮೀನು ಪಡೆದು ಮಹಿಳೆ ಹೊರ ಬಂದಿದ್ದಾರೆ. ಆದರೆ ಸರ್ಕಾರಿ ಉದ್ಯೋಗದಿಂದ ಕಾನ್​ಸ್ಟೆಬಲ್ ಅಜಯ್ ಕುಂದು ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment