ದರ್ಪ, ಧಿಮಾಕಿನ ಪರಮಾವಧಿ.. ಲಾಲು ಪುತ್ರನ ಆವಾಜ್‌ಗೆ ಹೆದರಿದ ಪೊಲೀಸ್; ವಿಡಿಯೋ ಫುಲ್ ವೈರಲ್‌!

author-image
admin
Updated On
ದರ್ಪ, ಧಿಮಾಕಿನ ಪರಮಾವಧಿ.. ಲಾಲು ಪುತ್ರನ ಆವಾಜ್‌ಗೆ ಹೆದರಿದ ಪೊಲೀಸ್; ವಿಡಿಯೋ ಫುಲ್ ವೈರಲ್‌!
Advertisment
  • ಪೊಲೀಸ್​​ ಮೇಲೆ ಬಿಹಾರದ ಮಾಜಿ ಸಿಎಂ ಸುಪುತ್ರನಿಂದ ದರ್ಪ
  • ಸ್ಟೇಜ್​​ ಮೇಲೆ ಬಣ್ಣ ಹಚ್ಕೊಂಡು, ಧಿಮಾಕಲ್ಲಿ ಪೊಲೀಸ್​​​​ಗೆ ಆವಾಜ್​​​​!
  • ‘ಫಾಲ್ತೂ ಚಾಚಾ ಹ್ಯಾಪಿ ಹೋಳಿ’ ಅಂತ ಕೂಗಾಡಿದ ತೇಜ್ ಪ್ರತಾಪ್‌

ನಮ್ಮ ಅಪ್ಪ ಯಾರು​ ಗೊತ್ತಾ. ನಮ್ಮ​ ತಾತ ಯಾರು​ ಗೊತ್ತಾ ಅಂತಾನೆ ಕೆಲವರು ಮೆರೀತಿರ್ತಾರೆ. ಹೀಗೆ ಬಿಹಾರದ ಮಾಜಿ ಸಿಎಂ ಸುಪುತ್ರ ಕೂಡ ಪೊಲೀಸ್​​ ಮೇಲೆ ದರ್ಪ ತೋರಿದ್ದಾನೆ. ಸಸ್ಪೆಂಡ್​ ಮಾಡ್ತೀನಿ ಅಂತ ಬೆದರಿಕೆ ಹಾಕಿ ತನ್ನದೇ ಭದ್ರತೆಗೆ ಬಂದಿದ್ದ ಪೊಲೀಸ್​​ ಕೈಯಲ್ಲಿ ಡ್ಯಾನ್ಸ್​ ಮಾಡಿಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

publive-image

ಅದೇನ್​​ ಹುಕುಂ​​.. ಪೊಲೀಸ್‌ ಅಧಿಕಾರಿಗಳು ಅಂದ್ರೆ ಕಾಲು ಕಸನಾ.. ಸ್ಟೇಜ್​​ ಮೇಲೆ ಬಣ್ಣ ಹಚ್ಕೊಂಡು, ಧಿಮಾಕಲ್ಲಿ ಪೊಲೀಸ್​​​​ಗೆ ಆವಾಜ್​​​​ ಬೀಡ್ತಿರೋದು ಬಿಹಾರದ ಮಾಜಿ ಸಿಎಂ ಸುಪುತ್ರ. ಇವರ ಹೆಸರು ತೇಜ್​ ಪಾಲ್​ ಯಾದವ್​​. ಬಿಹಾರ ಕಾ ಲಾಲ್​​ ಲಾಲು ಯಾದವ್​​​ ಕಾ ಬೇಟಾ.

ಇಡೀ ದೇಶವೇ ಹೋಳಿ ಹಬ್ಬದ ಸಂಭ್ರಮದಲ್ಲಿ ಮುಳುಗೆದ್ದಿದೆ. ಎಲ್ಲೆಡೆ ರಂಗಿನ ಹೋಳಿ ಹಬ್ಬ.. ಇದ್ರ ಮಧ್ಯೆ ಇದೊಂದು ವಿಡಿಯೋ ಬಿಹಾರ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ.

publive-image

ಬಿಹಾರದಲ್ಲಿ ಸದ್ಯ ಜೆಡಿಯು-ಬಿಜೆಪಿ ಆಡಳಿತದಲ್ಲಿದೆ. ಈ ವರ್ಷಾಂತ್ಯಕ್ಕೆ ಎಲೆಕ್ಷನ್​​ ಬರ್ತಿದೆ. ಆ ಕಾರಣಕ್ಕೆ ಆರ್​ಜೆಡಿ ನಾಯಕ ತೇಜ್​ ಪ್ರತಾಪ್​​ ಯಾದವ್​​ ತಮ್ಮ ಕಾರ್ಯಕರ್ತರಿಗೆ ಹೋಳಿ ಕಾರ್ಯಕ್ರಮ ಆಯೋಜಿಸಿದ್ರು. ಈ ವೇಳೆ ಲಾಲು ಸುಪುತ್ರ ಪೊಲೀಸ್​ ಕಾನ್ಸ್​​​ಟೇಬಲ್​ಗೆ ಆವಾಜ್​ ಹಾಕಿದ್ದಾನೆ. ಡ್ಯಾನ್​​ ಮಾಡು ಇಲ್ಲ ಅಂದ್ರೆ ನಿನ್ನೆ ಸಸ್ಪೆಂಡ್​​ ಮಾಡಿಸ್ತೀನಿ ಅಂತ ಧಮ್ಕಿ ಹಾಕಿದ್ದಾನೆ. ಪಾಪ ಅಧಿಕಾರ ಹೋಗುತ್ತೆ ಅನ್ನೋ ಭಯದಲ್ಲಿ ಆ ಕಾನ್ಸ್​​ಟೇಬಲ್​ ಒಂದೆರೆಡು ಸ್ಟೆಪ್​ ಹಾಕಿದ್ದಾರೆ.

ಮನೆಯಲ್ಲಿ ಜಬರ್​​​ಜಸ್ತ್​​​ ಆಗಿ ಹೋಳಿ ಆಚರಿಸಿದ್ದ ಲಾಲೂ ಪುತ್ರ, ಅದ್ಯಾವ್​ ಜೋಶ್​​ನಲ್ಲಿದ್ನೋ ಗೊತ್ತಿಲ್ಲ. ತಾನೊಬ್ಬ ರಾಜಕೀಯ ನಾಯಕ ಅನ್ನೊದು ಮರೆತು, ಪುಂಡ ಪೋಕರಿಗಳ ಹಾಗೆ ಗ್ಯಾಂಗ್​ ಕಟ್ಕೊಂಡು ಪಾಟ್ನಾದ ಬೀದಿ ಬೀದಿ ಸುತ್ತಿದ್ದಾನೆ. ಅಷ್ಟೇ ಅಲ್ಲ ಬಿಹಾರ್​ ಸಿಎಂ ನಿತೀಶ್​​​ ಕುಮಾರ್​​​​ ಮನೆ ಮುಂದೆ ಹೋಗಿ ‘ಫಾಲ್ತೂ ಚಾಚಾ ಹ್ಯಾಪಿ ಹೋಳಿ’ ಅಂತ ಜೋರಾಗಿ ಕೂಗಾಡಿದ್ದಾನೆ.

ಇದನ್ನೂ ಓದಿ: ರನ್ಯಾ ರಾವ್ ಮಲತಂದೆ, ಡಿಜಿಪಿಗೆ ಸರ್ಕಾರದ ಶಿಕ್ಷೆ; ಗೋಲ್ಡ್ ಸ್ಮಗ್ಲಿಂಗ್ ಕೇಸ್‌ಗೆ CBI ಎಂಟ್ರಿ ಆಗುತ್ತಾ? 

ಬಿಹಾರದಲ್ಲಿ ಜಂಗಲ್ ರಾಜ್.. ಬಿಜೆಪಿ ಟೀಕೆ
ಲಾಲೂ ಪುತ್ರನ ಧಮ್ಕಿ ವಿಡಿಯೋ ಇಡೀ ಬಿಹಾರದಲ್ಲೆ ಹಲ್​​ಚಲ್​ ಎಬ್ಬಿಸಿದೆ. ತೇಜ್​​​ ಪ್ರತಾಪ್​​​ ಯಾದವ್​ ಪುಂಡಾಟಕ್ಕೆ ಆಕ್ರೋಶ ವ್ಯಕ್ತವಾಗ್ತಿದ್ದು, ಒಂದು ವೇಳೆ ಬಿಹಾರದಲ್ಲಿ ಮತ್ತೆ ಆರ್​​ಜೆಡಿ ಅಧಿಕಾರಕ್ಕೆ ಬಂದರೆ ಜಂಗಲ್​ ರಾಜ್​ ಆಗಿ ಬದಲಾಗಲಿದೆ. ಇದು ಟ್ರೈಲರ್​ ಅಷ್ಟೇ.. ಇಡೀ ಬಿಹಾರ ಎಚ್ಚರಿಕೆಯಿಂದ ಇರಬೇಕು ಅಂತ ಬಿಜೆಪಿ ಹೇಳಿದೆ. ಆದ್ರೆ ಸಿಎಂ ಚಾಚಾ ನಿತೀಶ್​ ಮಾತ್ರ ಭತೀಜಾ ತೇಜ್​ ಪ್ರತಾಪ್​​ ಆಟಾಟೋಪ ಬಗ್ಗೆ ಒಂದೇ ಒಂದು ಮಾತನಾಡಿಲ್ಲ.


">March 15, 2025

ಲಾಲೂ ಸುಪುತ್ರನ ದರ್ಪ ಅಹಂನ ವಿಶ್ವ ದರ್ಶನವಾಗಿದೆ. ಇದೇ ವರ್ಷದ ಕೊನೆಯಲ್ಲಿ ಬಿಹಾರದಲ್ಲಿ ಎಲೆಕ್ಷನ್​ ನಡೆಯಲಿದ್ದು ಇದೇ ದೃಶ್ಯ ಪ್ರತಿಪಕ್ಷಗಳಿಗೆ ಅಸ್ತ್ರ ಕೊಟ್ಟಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment