/newsfirstlive-kannada/media/post_attachments/wp-content/uploads/2024/06/DARSHAN-1-1.jpg)
ನಟ ದರ್ಶನ್​ ಮತ್ತು ಟೀಂ ಮಾಡಿರುವ ಮರ್ಡರ್​ ಕೇಸ್​ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಅಭಿಮಾನಿಗಳಂತೂ ದರ್ಶನ್​ ವರ್ತನೆಯಿಂದ ಬೇಸರಗೊಂಡಿದ್ದಾರೆ. ಸದ್ಯ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, ಕೆಲವರು ಸಾಮಾಜಿಕ ಜಾಲತಾಣದಲ್ಲಿ ನಟನನ್ನು ಅನ್​ಫಾಲೋ ಮಾಡುತ್ತಿದ್ದಾರೆ.
ರೇಣುಕಾಸ್ವಾಮಿ ಹತ್ಯೆಯಿಂದ ರಾಜ್ಯದಾದ್ಯಂತ ನಟನ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಅತ್ತ ಪೊಲೀಸರು ಸರಿಯಾದ ತನಿಖೆ ನಡೆಸುತ್ತಿದ್ದಾರೆ. ನಟ ದರ್ಶನ್​ ಅನ್ನು ಪೊಲೀಸರು ವಿಚಾರಿಸುತ್ತಿದ್ದಾರೆ. ಆದರೆ ವಿಚಾರಣೆ ವೇಳೆ ದರ್ಶನ್​ ಒಂದೇ ಮಾತು ಹೇಳುತ್ತಿದ್ದಾರಂತೆ. ನನಗೇನು ಗೊತ್ತಿಲ್ಲ ಎಂದು ಚಾಲೆಂಜಿಂಗ್​ ಸ್ಟಾರ್​ ಉತ್ತರಿಸುತ್ತಿದ್ದಾರಂತೆ.
ಇದನ್ನೂ ಓದಿ: ಇಷ್ಟೆಲ್ಲಾ ಆಗಿದ್ದು ನನ್ನಿಂದ.. ಪೊಲೀಸ್​​ ಕಸ್ಟಡಿಯಲ್ಲಿ ಪಶ್ಚಾತ್ತಾಪ ಪಡುತ್ತಿರುವ ಪವಿತ್ರಾ
ಮತ್ತೋರ್ವ ನಟ ಅರೆಸ್ಟ್​
ನಟ ದರ್ಶನ್​, ನಟಿ ಪವಿತ್ರಾ ಮಾತ್ರವಲ್ಲದೆ ಮತ್ತೋರ್ವ ನಟನನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಬುಲ್​ಬುಲ್​, ಬೃಂದಾವನ ಸಿನಿಮಾಗಳಲ್ಲಿ ನಟಿಸಿದ್ದ ನಟ ಪ್ರದೋಶ್​ನನ್ನು ಅರೆಸ್ಟ್​ ಮಾಡಿದ್ದಾರೆ.
ದರ್ಶನ್ ಆಪ್ತ ವಲಯದಲ್ಲಿ ಪ್ರದೋಶ್ ಗುರುತಿಸಿಕೊಂಡಿದ್ದರು. ಬಿಜೆಪಿ ಮುಖಂಡರೊಬ್ಬರ ಜೊತೆ ಆಪ್ತ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದರು. ಬಿಜೆಪಿ ಐಟಿ ವಿಭಾಗದಲ್ಲಿಯೂ ಕೆಲಸ ಮಾಡಿದ್ದರಂತೆ. ರವಿಸುಬ್ರಹ್ಮಣ್ಯ ಆಪ್ತ ವಲಯದಲ್ಲಿ ಪ್ರದೋಶ್ ಗುರುತಿಸಿಕೊಂಡಿದ್ದರು. ಸದ್ಯ ರೇಣುಕಾಸ್ವಾಮಿಯ ಕೊಲೆ ಕೇಸ್​ನ​ಲ್ಲಿ ಪ್ರದೋಶ್ ಅರೆಸ್ಟ್​ ಆಗಿದ್ದಾರೆ. ಈ ಕೊಲೆ ಕೇಸ್​​ನಲ್ಲಿ ಪ್ರದೋಶ್​ ಎ14 ಆರೋಪಿಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ