newsfirstkannada.com

×

ನಟ ದರ್ಶನ್​​​ ಗ್ಯಾಂಗ್​ ಕೇಸಲ್ಲಿ ಪೊಲೀಸ್ರ ಮಹಾ ಎಡವಟ್ಟು; ರೇಣುಕಾಸ್ವಾಮಿ ಪ್ರಕರಣಕ್ಕೀಗ ಬಿಗ್​ ಟ್ವಿಸ್ಟ್​!

Share :

Published September 12, 2024 at 6:25am

Update September 12, 2024 at 12:32pm

    ರೇಣುಕಾಸ್ವಾಮಿ ಕೇಸ್​ ಸಂಬಂಧ ಕೋರ್ಟ್​ಗೆ ಪೊಲೀಸ್ರಿಂದ ಚಾರ್ಜ್​ಶೀಟ್​ ಸಲ್ಲಿಕೆ

    ಕೋರ್ಟ್​ಗೆ ಸಲ್ಲಿಸಲಾದ ಚಾರ್ಜ್​ಶೀಟ್​ನಲ್ಲಿ ಆಘಾತಕಾರಿ ವಿಚಾರಗಳು ಬಯಲಿಗೆ

    ಆಘಾತಕಾರಿ ವಿಚಾರಗಳು ಬಯಲಿಗೆ ಬರುತ್ತಿದ್ದಂತೆ ದರ್ಶನ್​ಗೆ ಹೆಚ್ಚಾಯ್ತು ಸಂಕಷ್ಟ!

ಬೆಂಗಳೂರು: ಡೆವಿಲ್ ಗ್ಯಾಂಗ್​ನಿಂದ ಬರ್ಬರವಾಗಿ ಕೊಲೆಯಾದ ರೇಣುಕಾಸ್ವಾಮಿ ಸಾವಿಗೂ ಮೊದಲು ಅನುಭವಿಸಿದ ಹಿಂಸೆ ಅಷ್ಟಿಷ್ಟಲ್ಲ. ಬದುಕಿದ್ದಾಗಲೇ ರಕ್ಕಸರು ನರಕ ತೋರಿಸಿದ್ರು. ಹಗ್ಗ, ಲಾಠಿಯಿಂದ ಹೊಡೆದು ಬರ್ಬರವಾಗಿ ಚಿತ್ರ ಹಿಂಸೆ ನೀಡಿದ್ರು. ಆದ್ರೆ ಪೊಲೀಸರು ಬಳಸೋ ಆ ಲಾಠಿ ಡಿ ಗ್ಯಾಂಗ್‌ಗೆ ಸಿಕ್ಕಿದ್ದೇಗೆ ಅನ್ನೋದೇ ಪ್ರಶ್ನೆಯಾಗಿತ್ತು. ಆ ಪ್ರಶ್ನೆಗೆ ಸದ್ಯ ಉತ್ತರ ಸಿಕ್ಕಿದೆ.

ಅಬ್ಬಬ್ಬಾ.. ರೇಣುಕಾಸ್ವಾಮಿಗೆ ದರ್ಶನ್ ಌಂಡ್ ಗ್ಯಾಂಗ್ ಕೊಟ್ಟ ಚಿತ್ರಹಿಂಸೆ ಅಷ್ಟಿಷ್ಟಲ್ಲ. ರಾಕ್ಷಸರು ಕಿಂಚಿತ್ತೂ ಕರುಣೆ ತೋರದೇ ಬದುಕಿದ್ದಾಗಲೇ ನರಕ ಹೇಗಿರುತ್ತೆ ಅಂತ ತೋರಿಸಿದ್ದಾರೆ. ಮುಖ ಮೂತಿ ನೋಡದೇ ಹಿಗ್ಗಾ ಮುಗ್ಗಾ ಹಲ್ಲೆ ಮಾಡಿ ಹಿಂಸೆ ಕೊಟ್ಟಿದ್ದಾರೆ. ದೇಹದ ಎಲ್ಲಾ ಭಾಗಗಳಿಗೂ ಹೊಡೆದು ಮೃಗೀಯವಾಗಿ ವರ್ತಿಸಿದ್ದಾರೆ. ಹೀಗೆ ಹಲ್ಲೆ ಮಾಡಲು ಬಳಸಿದ ಆಯುಧ ಒಂದಾ ಎರಡಾ. ಆದ್ರೆ ಈ ಪೈಕಿ ಪ್ರಮುಖವಾಗಿ ಗಮನ ಸೆಳೆದಿರೋದು ಪೊಲೀಸ್‌ ಲಾಠಿ.

ಯಮಪಾಶದಂತೆ ಕೆಲಸ ಮಾಡಿದ ಪೊಲೀಸ್ ಲಾಠಿ!

ಹಗ್ಗ, ಮೆಗ್ಗರ್ ಮಾತ್ರವಲ್ಲ ಪೊಲೀಸ್​ ಲಾಠಿಯಿಂದಲೂ ಆ ಸಣಕಲು ದೇಹದ ರೇಣುಕಾಸ್ವಾಮಿಗೆ ನಿಷ್ಕರುಣಿಯಾಗಿ ಪಾಪಿಗಳು ಶೆಡ್​ನಲ್ಲಿ ಹಲ್ಲೆ ಮಾಡಿದ್ದಾರೆ. ಈ ಹೊಡಿ-ಬಡಿಯ ಆರ್ಭಟಕ್ಕೆ ಲಾಠಿಯೇ ಮುರಿದೋಗಿದೆ. ಸದ್ಯ ಈ ಲಾಠಿ ಪೊಲೀಸ್ ಪೇದೆಯೊಬ್ಬರದ್ದು ಅನ್ನೋದು ಬಯಲಾಗಿದೆ. ಬರ್ತ್​ಡೇಯಲ್ಲಿ ಕಳೆದುಹೋಗಿದ್ದ ಲಾಠಿಯೇ ರೇಣುಕಾ ಸಾವಿಗೆ ಬಳಕೆಯಾಗಿದೆ.

ಠಾಣೆಯಿಂದ ಶೆಡ್​ವರೆಗಿನ ‘ಲಾಠಿ’ ಕಥೆ

ಫೆ.15ರಂದು ದರ್ಶನ್​ ಬರ್ತ್​ಡೇ ಬಂದೋಬಸ್ತ್​ಗೆ ಬಂದಿದ್ದ ಪೇದೆ ರವೀಂದ್ರ ಅಂದು ಯಡವಟ್ಟು ಮಾಡಿಕೊಂಡಿದ್ರು. ಹಿಂದಿನ ರಾತ್ರಿ ಮರದ ಬಳಿ ಲಾಠಿಯಿಟ್ಟು ಮರೆತು ಠಾಣೆಗೆ ಹೋಗಿದ್ದರು. ಬೆಳಗ್ಗೆ ಬಂದು ನೋಡೋ ಹೊತ್ತಿಗೆ ಇಟ್ಟ ಜಾಗದಿಂದ ಲಾಠಿ ಮಾಯವಾಗಿತ್ತು. ಅದನ್ನು ಕದ್ದು ದರ್ಶನ್​ ಮನೆ ಕೆಲಸದವರು ತೆಗೆದಿಟ್ಟುಕೊಂಡಿದ್ದರು. ಇದೇ ಲಾಠಿಯನ್ನು ಶೆಡ್​ಗೆ ಡಿ ಗ್ಯಾಂಗ್ ತೆಗೆದುಕೊಂಡು ಹೋಗಿತ್ತು. ಜೂ.8ರಂದು ಶೆಡ್​ಗೆ ರೇಣುಕಾ ಬರ್ತಿದ್ದಂತೆ ಆರೋಪಿ ಪವನ್ ಲಾಠಿಯಿಂದ ಬಾರಿಸಿದ್ದ. ಇದೇ ಕೈಯಲ್ಲಿ ತಾನೇ ಮೆಸೇಜ್​ಗಳನ್ನು ಮಾಡಿದ್ದು ಎಂದು ರೇಣುಕಾಸ್ವಾಮಿ ಬೆನ್ನು, ಕೈ-ಕಾಲು ಮೇಲೆ ಹಲ್ಲೆ ಮಾಡಿದ್ದ. ತಪ್ಪಾಯ್ತು ಬಿಟ್ಟು ಬಿಡಿ ಎಂದ್ರೂ ಬಿಡದೇ ಹಿಗ್ಗಾಮುಗ್ಗಾ ಬಾರಿಸಿದ ಹಿನ್ನೆಲೆ ಲಾಠಿ ಪುಡಿ ಪುಡಿಯಾಗಿದೆ. ಜೂನ್ 11ರಂದು ಪಟ್ಟಣಗೆರೆ ಶೆಡ್​ನಲ್ಲಿ ಲಾಠಿ ಪತ್ತೆಯಾಗಿದ್ದು ಪೊಲೀಸರು ಸೀಜ್ ಮಾಡಿದ್ದಾರೆ. ಮಾತ್ರವಲ್ಲದೇ ಪೇದೆ ರವೀಂದ್ರ ವಿಚಾರಣೆ ನಡೆಸಿ ಅವರ ಹೇಳಿಕೆ ದಾಖಲು ಮಾಡಿದ್ದಾರೆ.

ಇನ್ನು ರೇಣುಕಾಸ್ವಾಮಿಯನ್ನು ಬರ್ಬರವಾಗಿ ಹೊಡೆದು ಸಾಯಿಸಲು ಶೆಡ್​ಗೆ ಹೋಗೋ ಮುನ್ನ ಪವಿತ್ರಾ ಸಖತ್ತಾಗಿ ಬಾಡೂಟದ ಬ್ಯಾಟಿಂಗ್ ಮಾಡಿದ್ರು ಅನ್ನೋದು ಗೊತ್ತಾಗಿದೆ. ಸ್ಟೋನಿಬ್ರೂಕ್​​ನಿಂದ ತರಹೇವಾರಿ ಖಾದ್ಯಗಳನ್ನ ದರ್ಶನ್ ಪಾರ್ಸೆಲ್​​ ಕೊಂಡೊಯ್ದಿದ್ದರು. ಭರ್ಜರಿ ಬಾಡೂಟ ತಿಂದೇ ಶೆಡ್​​​​ನಲ್ಲಿ ಮನಸೋ ಇಚ್ಛೆ ದರ್ಶನ್, ಪವಿತ್ರಾ ಗೌಡ ಹಲ್ಲೆ ನಡೆಸಿದ್ದರು.

ಚಿಕನ್‌ ಗೀ ರೋಸ್ಟ್‌ ಪಾರ್ಸಲ್‌​!

ಜೂನ್ 8 ರ ಮಧ್ಯಾಹ್ನ 3:30 ರ ಸುಮಾರಿಗೆ ಪಬ್​​ನಲ್ಲಿ ದರ್ಶನ್ ಪಾರ್ಟಿ ಮಾಡಿದ್ರು. ಸ್ಟೋನಿಬ್ರೂಕ್ ಪಬ್​​​ನಲ್ಲಿ ದರ್ಶನ್, ವಿನಯ್, ಚಿಕ್ಕಣ್ಣ ಮುಂತಾದವರು ಪಾರ್ಟಿ ಮಾಡಿದ್ದರು. ಈ ವೇಳೆ ದರ್ಶನ್​ಗೆ ರೇಣುಕಾಸ್ವಾಮಿ ಕರೆತಂದ ಬಗ್ಗೆ ಪವನ್ ಹೇಳಿದ್ದು ಕೂಡಲೇ ಪವಿತ್ರಾ ಗೌಡಗೆ ದರ್ಶನ್ ವಿಡಿಯೋ ಕಾಲ್ ಮಾಡಿದ್ದ. ಬಳಿಕ ಪವಿತ್ರಾಳಿಗಾಗಿ ಸ್ಟೋನಿಬ್ರೂಕ್​ನಿಂದ ಚಿಕನ್ ಗಿರೋಸ್ಟ್, ಪೆಪ್ಪರ್ ಬಟರ್ ಗಾರ್ಲಿಕ್, ಚಿಕನ್ ಜಾಸ್ಮಿನ್ ಫ್ರೈಡ್ ರೈಸ್ ಪಾರ್ಸೆಲ್ ಮಾಡಿಸಿ ದರ್ಶನ್ ಕೊಂಡೊಯ್ದಿದ್ದರು. ಈ ಬಗ್ಗೆ ಸ್ಟೋನಿಬ್ರೂಕ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಒಟ್ಟಾರೆ ಆರೋಪಿಗಳ ಮೇಲೆ ಪ್ರಯೋಗವಾಗ್ತಿದ್ದ ಪೊಲೀಸರ ಲಾಠಿ ರೇಣುಕಾಸ್ವಾಮಿ ಮೇಲೆ ಪ್ರಯೋಗವಾಗಿದೆ. ಇದರ ಹೊಡೆತ ತಡೆಯಲಾರದೇ ರೇಣುಕಾ ಸಾವಿನ ಮನೆಯ ಕದ ತಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಟ ದರ್ಶನ್​​​ ಗ್ಯಾಂಗ್​ ಕೇಸಲ್ಲಿ ಪೊಲೀಸ್ರ ಮಹಾ ಎಡವಟ್ಟು; ರೇಣುಕಾಸ್ವಾಮಿ ಪ್ರಕರಣಕ್ಕೀಗ ಬಿಗ್​ ಟ್ವಿಸ್ಟ್​!

https://newsfirstlive.com/wp-content/uploads/2024/08/darshan7.jpg

Load More