newsfirstkannada.com

13ನೇ ವಯಸ್ಸಿನಲ್ಲೇ IPS ಅಧಿಕಾರಿಯಾದ ಬಾಲಕ; ಇದರ ಹಿಂದಿದೆ ಒಂದು ನೋವಿನ ಕಥೆ

Share :

Published March 3, 2024 at 6:31am

Update March 3, 2024 at 7:00am

    ಬಾಲಕನ ಆಸೆ ಬಗ್ಗೆ ತಿಳಿದುಕೊಂಡ ಬೆಂಗಳೂರು ಪೊಲೀಸ್ ಅಧಿಕಾರಿ

    ಐಪಿಎಸ್ ಮಾಡುವ ಕನಸನ್ನ ಹೊಂದಿದ್ದ ಬಾಲಕ ಮೋಸಿನ ರ‍ಾಜ್

    ಬಾಲಕನ ಕನಸು ನನಸು ಮಾಡಿದ ಕಿದ್ವಾಯಿ ಸಂಸ್ಥೆ, ಪೊಲೀಸ್ ಇಲಾಖೆ

ಬೆಂಗಳೂರು: 13 ವರ್ಷದ ಬಾಲಕನ ಪೊಲೀಸ್ ಆಗುವ ಆಸೆಯನ್ನು ಈಡೇರಿಸಿದ ಪೊಲೀಸರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ 13 ವರ್ಷದ ಬಾಲಕನ ಆಸೆಯನ್ನು ಈಡೇರಿಸಿ ಪೊಲೀಸರು ಮಾನವೀಯತೆ ಮೆರೆದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಸಣ್ಣ ವಯಸ್ಸಿನಲ್ಲೇ ಕ್ಯಾನ್ಸರ್‌ಗೆ ತುತ್ತಾಗಿ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕನ ಕನಸು ಈಡೇರಲು ಪೊಲೀಸರ ಮುಂದಾಗಿದ್ದರು. ಮೋಸಿನ್ ರಾಜ್‌ ಎಂಬ ಬಾಲಕ ಐಪಿಎಸ್ ಅಧಿಕಾರಿಯಾಗುವ ಕನಸು ಹೊಂದಿದ್ದ.

ಆದರೆ, ಚಿಕ್ಕ ವಯಸ್ಸಿನಲ್ಲೇ ಮಾರಕ ಕ್ಯಾನ್ಸರ್‌ಗೆ ತುತ್ತಾಗಿದ್ದರಿಂದ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಬಾಲಕನ ಆಸೆ ಬಗ್ಗೆ ತಿಳಿದುಕೊಂಡ ಬೆಂಗಳೂರು ಪೊಲೀಸ್ ಪರಿಹಾರ ಸಂಸ್ಥೆ ಹಾಗೂ ಕಿದ್ವಾಯಿ ಸಂಸ್ಥೆ, ಪೊಲೀಸರೊಂದಿಗೆ ಮಾತನಾಡಿ ಬಾಲಕನ ಆಸೆ ಈಡೇರಲು ಸಹಕರಿಸಿದ್ದಾರೆ.

ಇನ್ನು ಬಾಲಕನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದ ಬೆಂಗಳೂರು ದಕ್ಷಿಣ ವಿಭಾಗದ ಪ್ರಭಾರ ಡಿಸಿಪಿ ಶಿವಪ್ರಕಾಶ್ ದೇವರಾಜ್ ಅವರು ಒಂದು ದಿನದ ಮಟ್ಟಿಗೆ ಬಾಲಕನಿಗೆ ಐಪಿಎಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಟ್ಟು, ಮಾನವೀಯತೆ ಮೆರೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

13ನೇ ವಯಸ್ಸಿನಲ್ಲೇ IPS ಅಧಿಕಾರಿಯಾದ ಬಾಲಕ; ಇದರ ಹಿಂದಿದೆ ಒಂದು ನೋವಿನ ಕಥೆ

https://newsfirstlive.com/wp-content/uploads/2024/03/police-16.jpg

Load More