/newsfirstlive-kannada/media/post_attachments/wp-content/uploads/2024/06/darshan15.jpg)
- ವಿಚಾರಣೆಯಲ್ಲಿ ಮನೆಯಲ್ಲೇ ಬಟ್ಟೆ ಬಿಚ್ಚಿಟ್ಟಿದ್ದೇ ಎಂದಿದ್ದ ದರ್ಶನ್
- ತನಿಖೆಯಲ್ಲಿ ನಟ ದರ್ಶನ್ ಮನೆಯಲ್ಲಿ ಪತ್ತೆಯಾಗದ ಬಟ್ಟೆಗಳು..!
- ಕಾಸ್ಟೂಮ್ ಡಿಸೈನರ್ ಮನೆಗೆ ಬಂದು ಹೋಗಿರೋದು ಬಯಲು
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನ ಜಾಲಾಡ್ತಿರುವ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸ್ತಿದ್ದಾರೆ. ಈ ನಡುವೆ ಎರಡು ಅಚ್ಚರಿ ಬೆಳವಣಿಗೆಗಳಾಗಿವೆ. ಒಂದು ಹತ್ಯೆಯಾದ ವೇಳೆ ದರ್ಶನ್​ ಧರಿಸಿದ್ದ ಬಟ್ಟೆಗಳು ಪೊಲೀಸರ ಕೈ ಸೇರಿದೆ. ಮತ್ತೊಂದು, ಗಂಡನ ಬಂಧನದಿಂದ ಸೋಶಿಯಲ್​ ಮೀಡಿಯಾದಿಂದ ಮಾಯವಾಗಿದ್ದ ವಿಜಯಲಕ್ಷ್ಮಿ ಮತ್ತೆ ಪ್ರತ್ಯಕ್ಷವಾಗಿದ್ದಾರೆ.
ಹತ್ಯೆ ದಿನ ನಟ ದರ್ಶನ್​ ಧರಿಸಿದ್ದ ಬಟ್ಟೆಗಳು ಸೀಜ್!
ವಿಜಯಲಕ್ಷ್ಮಿ ಫ್ಲಾಟ್​ನಲ್ಲಿ ಪತ್ತೆಯಾದ ದರ್ಶನ್​ ಬಟ್ಟೆ
ಕೊಲೆ ಕೇಸ್​ನಲ್ಲಿ ದರ್ಶನ್ ಪ್ರಮುಖ ಆರೋಪಿಯಾಗಿದ್ದಾರೆ. ಹೀಗಾಗಿ, ಪೊಲೀಸರು ದರ್ಶನ್​ ಬಗೆಗಿನ ಇಂಚಿಂಚೂ ಮಾಹಿತಿಯನ್ನ ಕಲೆ ಹಾಕ್ತಿದ್ದಾರೆ. ಪಟ್ಟಣಗೆರೆ ಶೆಡ್​ನಲ್ಲಿ ರೇಣುಕಾಸ್ವಾಮಿ ಕೊಲೆ ನಡೆದ ಬಳಿಕ ದರ್ಶನ್​ ಏನ್ಮಾಡಿದ್ರೂ? ಎಲ್ಲಿಗೆ ಹೋಗಿದ್ರೂ? ಅನ್ನೋ ಪ್ರಶ್ನೆಗಳಿಗೆ ಉತ್ತರದ ಹುಡುಕಾಟ ನಡೆಯುತ್ತಿದೆ. ಈ ಮಧ್ಯೆ ರೇಣುಕಾಸ್ವಾಮಿ ಹತ್ಯೆ ದಿನ ದರ್ಶನ್ ಧರಿಸಿದ್ದ ಬಟ್ಟೆಗಳು ವಿಜಯಲಕ್ಷ್ಮಿ ನಿವಾಸದಲ್ಲಿ ಪತ್ತೆಯಾಗಿದೆ.
ಒಂದು ಮೇಜರ್​ ಡೌಟ್​ ಬರೋದು ಸಹಜ.. ಯಾಕಂದ್ರೆ, ನಟ ದರ್ಶನ್​ ವಿಚಾರಣೆ ವೇಳೆ ಪಟ್ಟಣಗೆರೆ ಶೆಡ್​ನಿಂದ ರೇಣುಕಾಸ್ವಾಮಿ ಹತ್ಯೆ ಬಳಿಕ ದರ್ಶನ್​ ತಮ್ಮ ಆರ್​.ಆರ್​.ನಗರದ ನಿವಾಸಕ್ಕೆ ತೆರಳಿದ್ರಂತೆ. ತಮ್ಮ ಮನೆಯಲ್ಲಿ ಆ ಬಟ್ಟೆಗಳನ್ನ ಬಿಚ್ಚಿಟ್ಟಿರೋದಾಗಿ ದರ್ಶನ್​ ಹೇಳಿದರು. ಇದೇ ಮಾತನ್ನ ಆಧಾರವಾಗಿ ಇಡ್ಕೊಂಡು ಪೊಲೀಸರು ದರ್ಶನ್​ ಮನೆಯನ್ನ ಮಹಜರು ನಡೆಸಿ ಬಟ್ಟೆಗಳನ್ನ ಹುಡುಕಾಡಿದ್ರು.. ಆದ್ರೆ, ಈ ವೇಳೆ ಯಾವುದೇ ಬಟ್ಟೆ ಸಿಕ್ಕಿರಲಿಲ್ಲ.
ಬಟ್ಟೆಗಳನ್ನ ಮನೆಯಲ್ಲೇ ಬಿಚ್ಚಿಟ್ಟಿದ್ದೇ ಎಂದಿದ್ದ ದರ್ಶನ್
ದರ್ಶನ್​ ಬಟ್ಟೆಗಳನ್ನ ಮನೆಯಲ್ಲೇ ಬಿಚ್ಚಿಟ್ಟಿದ್ದೇ ಅಂತಾ ಹೇಳಿದ್ರು. ಆದ್ರೆ, ಮನೆಯಲ್ಲಿ ಯಾವುದೇ ಬಟ್ಟೆಗಳು ಪತ್ತೆಯಾಗಿಲ್ಲ. ಈ ವೇಳೆ ಮನೆಯ ಸಿಸಿಟಿವಿ ಪರಿಶೀಲನೆ ನಡೆಸಿದಾಗ ದರ್ಶನ್​ ಕಾಸ್ಟೂಮ್​ ಡಿಸೈನರ್​ ಮನೆಗೆ ಬಂದು ಹೋಗಿರೋದು ಗೊತ್ತಾಗಿದೆ. ಕೊನೆಗೆ ಕಾಸ್ಟೂಮ್​ ಡಿಸೈನರ್​ನ ವಿಚಾರಣೆ ಮಾಡಿದಾಗ ತಾನೇ ವಿಜಯಲಕ್ಷ್ಮಿ ಮನೆಗೆ ತಗೊಂಡು ಹೋಗಿ ಇಟ್ಟಿದ್ದೆ ಎಂದಿದ್ದ. ಆದ್ರೆ, ಈ ವಿಚಾರ ದರ್ಶನ್​ಗೆ ಮಾಹಿತಿ ಇರ್ಲಿಲ್ಲ ಎನ್ನಲಾಗ್ತಿದೆ. ಕೊನೆಗೆ ವಿಜಯಲಕ್ಷ್ಮಿ ಮನೆಗೆ ಹೋಗಿ ಪೊಲೀಸರು ದರ್ಶನ್ ಬಟ್ಟೆಗಳನ್ನ ಸೀಜ್ ಮಾಡಿದ್ರು.
ಸೋಷಿಯಲ್ ಮೀಡಿಯಾದಲ್ಲಿ ವಿಜಯಲಕ್ಷ್ಮಿ ರೀ ಆಕ್ಟೀವ್!
ಅದ್ಯಾವಾಗ ದರ್ಶನ್​ ಅರೆಸ್ಟ್ ಆದ್ರೋ ಈ ಬೆನ್ನಲ್ಲೆ ಮನನೊಂದ ಪತ್ನಿ ವಿಜಯಲಕ್ಷ್ಮಿ ಸಾಮಾಜಿಕ ಜಾಲತಾಣಕ್ಕೆ ಗುಡ್​ಬೈ ಹೇಳಿದ್ರು. ಮೊದಲಿಗೆ ಪ್ರೊಫೈಲ್ ಫೋಟೋ ಡಿಲೀಟ್ ಮಾಡಿದ್ದ ವಿಜಯಲಕ್ಷ್ಮಿ ಕೊನೆಗೆ ಅಕೌಂಟ್​ನೆ ಡಿಲೀಟ್​ ಮಾಡಿಬಿಟ್ರು. ಸದ್ಯ ಇದೀಗ ಮತ್ತೆ ರೀ ಆ್ಯಕ್ಟೀವ್ ಆಗಿದ್ದಾರೆ. ಆದ್ರೆ, ಹಿಂದೆ ಇದ್ದ ಹಳೆ ಫೋಟೋಗಳನ್ನೆಲ್ಲಾ ವಿಜಯಲಕ್ಷ್ಮೀ ಡಿಲೀಟ್ ಮಾಡಿದ್ದಾರೆ.
ಇನ್ನೊಂದ್ಕಡೆ ದರ್ಶನ್‌ಗೆ ವಕೀಲರನ್ನ ನೇಮಿಸುವ ಮೂಲಕ ಕಾನೂನು ಹೋರಾಟಕ್ಕೆ ವ್ಯವಸ್ಥೆ ಮಾಡೋದ್ರಲ್ಲೂ ವಿಜಯಲಕ್ಷ್ಮಿ ಮುತುವರ್ಜಿ ವಹಿಸಿದ್ದಾರೆನ್ನಲಾಗಿದೆ. ಅದೇನೆ ಹೇಳಿ.. ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದಿನದಿನಕ್ಕೂ ಮಹತ್ವದ ಸಾಕ್ಷಿಗಳನ್ನ ಕಲೆ ಹಾಕಲು ಪೊಲೀಸರು ಹರಸಾಹಸ ಪಡ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ