/newsfirstlive-kannada/media/post_attachments/wp-content/uploads/2024/10/Darshan-release-bellary-Jail.jpg)
ಬೆಂಗಳೂರು: ನಟ ದರ್ಶನ್ಗೆ ಹೈಕೋರ್ಟ್ ಪೂರ್ಣ ಪ್ರಮಾಣದ ಜಾಮೀನು ನೀಡಿದೆ. ಜಾಮೀನು ಸಿಕ್ಕ ಖುಷಿಯಲ್ಲಿರೋ ನಟ ದರ್ಶನ್ಗೆ ಶಾಕಿಂಗ್ ನ್ಯೂಸ್ ಒಂದಿದೆ. ಹೈಕೋರ್ಟ್ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಲು ಬೆಂಗಳೂರು ಪೊಲೀಸ್ರು ನಿರ್ಧಾರಕ್ಕೆ ಬಂದಿದ್ದಾರೆ. ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಸಿದ್ಧರಾಗಿದ್ದು, ಗೃಹ ಇಲಾಖೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಪಾಪಿ ಪಾತಾಳಕ್ಕೆ ಹೋದ್ರು, ಕರ್ಮ ಅನ್ನೋದು ಬೇತಾಳನಂತೆ ಬೆನ್ನಿಗೆ ಅಂಟೇ ಇರುತ್ತೆ ಅನ್ನೋ ಮಾತಿದೆ. ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿ ಬೇಲ್ ಮೇಲೆ ವಾಪಸ್ ಬಂದ್ರೂ ದರ್ಶನ್ಗೆ ಕರ್ಮ ಅನ್ನೋದು ಬೇತಾಳನಂತೆ ಕಾಡುತ್ತಿದೆ.
ದರ್ಶನ್ ಜಾಮೀನು ರದ್ದಾಗುತ್ತಾ?
ಡಿಸೆಂಬರ್ 13ಕ್ಕೆ ಹೈಕೋರ್ಟ್ ಏಳು ಆರೋಪಿಗಳಿಗೆ ಜಾಮೀನು ನೀಡಿತ್ತು. ಈಗ ಏಳು ಆರೋಪಿಗಳು ಜಾಮೀನು ಪ್ರಶ್ನಿಸಲು ಪೊಲೀಸರು ಮುಂದಾಗಿದ್ದಾರೆ. ಪೊಲೀಸ್ ಇಲಾಖೆ ನಿರ್ಧಾರಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈಗಾಗಲೇ ಸುಪ್ರೀಂಕೋರ್ಟ್ಗೆ ವಕೀಲರಾಗಿ ಅನಿಲ್ ಸಿ. ನಿಶಾನಿ ನೇಮಕ ಆಗಿದ್ದು, ರಾಜ್ಯ ಸರ್ಕಾರವೇ ಈ ಬಗ್ಗೆ ಆದೇಶ ಹೊರಡಿಸಿದೆ. ನಟ ದರ್ಶನ್, ಪವಿತ್ರಾ ಗೌಡ, ಲಕ್ಷ್ಮಣ್, ಪ್ರದೂಶ್, ನಾಗರಾಜು, ಅನುಕುಮಾರ್, ಜಗದೀಶ್ಗೆ ಹೊಸ ಸಂಕಷ್ಟ ಶುರುವಾಗಿದೆ.
ಇನ್ನು, ಮೇಲ್ಮನವಿ ಸಲ್ಲಿಸಲು ಅನುಮತಿ ಸಿಕ್ಕ ಬೆನ್ನಲ್ಲೆ ಪೊಲೀಸರು ಕಡತಗಳನ್ನು ಗೃಹ ಇಲಾಖೆಗೆ ರವಾನಿಸಿದ್ದಾರೆ. ಹೈಕೋರ್ಟ್ ನೀಡಿರುವ ಜಾಮೀನು ರದ್ದು ಕೋರಿ ಮೇಲ್ಮನವಿ ಸಲ್ಲಿಕೆ ಆಗಲಿದ್ದು, ಚಾರ್ಜ್ಶೀಟ್ ಕನ್ನಡದಿಂದ ಇಂಗ್ಲಿಷ್ಗೆ ಭಾಷಾಂತರ ಮಾಡಲಾಗಿದೆ. ಇಂದು ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಕೆ ಆಗಲಿದೆ.
ಜಾಮೀನು ಪಡೆದು ಜಸ್ಟ್ ರಿಲೀಫ್ ಆಗಿರೋ ಹೊತ್ತಲ್ಲೇ ಸರ್ಕಾರ ಶಾಕ್ ಕೊಟ್ಟಿದೆ. ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಕೆ ಆಗಲಿದ್ದು, ಕೊಲೆ ಆರೋಪಿ ನಟ ದರ್ಶನ್ ಎದೆಬಡಿತ ಮತ್ತಷ್ಟು ಹೆಚ್ಚಿಸಿದೆ.
ಇದನ್ನೂ ಓದಿ:ಗೃಹ ಇಲಾಖೆಯಿಂದ ಮಹತ್ವದ ನಿರ್ಧಾರ; ದರ್ಶನ್, ಪವಿತ್ರಗೌಡಗೆ ಮತ್ತೆ ಖೆಡ್ಡಾ ತೋಡಿದ ಪೊಲೀಸರು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ