newsfirstkannada.com

×

ಒಂದೇ ಒಂದು ಮಿಸ್ ಕಾಲ್​ ಸಾಕು.. ಇಲ್ಲಿ ಎಮ್ಮೆಗಳ ಮೇಲೆ ಯಮರಾಜನಲ್ಲ, ಪೊಲೀಸ್​​ ಬರ್ತಾರೆ!

Share :

Published September 30, 2024 at 7:35am

Update September 30, 2024 at 9:07am

    ಜಗತ್ತಿನ ವಿಚಿತ್ರ ಪೊಲೀಸ್​​ ಪಡೆ ಇದು

    ಎಮ್ಮೆ ನಿನಗೆ ಸಾಟಿ ಇಲ್ಲ ಎನ್ನುತ್ತಾರೆ ಪೊಲೀಸರು

    ಗಸ್ತು ತಿರುಗಲು ಎಮ್ಮೆಗಳ ಮೇಲೆ ಬರ್ತಾರೆ ಆರಕ್ಷಕರು

ಪೊಲೀಸ್​ ಪಡೆಯು ಕಾನೂನು ಜಾರಿಗೊಳಿಸಲು, ರಾಜ್ಯ ರಕ್ಷಿಸಲು, ಜನರ ಆಸ್ತಿ ಪಾಸ್ತಿ ರಕ್ಷಿಸಲು, ಅಪರಾಧ ತಡೆಗಟ್ಟಲು, ಸಮಾಜದ ಸ್ವಾಸ್ಥ್ಯ ಕಾಪಾಡಲು ಇರುವ ಒಂದು ವ್ಯವಸ್ಥೆ. ಸಾಮಾನ್ಯವಾಗಿ ಪೊಲೀಸರು ಆಯಾ ಪ್ರದೇಶದಲ್ಲಿ ಎಲ್ಲೆಡೆ ಗಸ್ತು ತಿರುಗುತ್ತಲೇ ಇರುತ್ತಾರೆ. ಪೊಲೀಸರು ಬೈಕ್, ಜೀಪು, ಕಾರುಗಳಲ್ಲಿ ಗಸ್ತು ತಿರುವುದನ್ನು ನೋಡಿರುತ್ತೀರಿ. ಆದರೆ ಈ ದೇಶದ ನಗರವೊಂದರಲ್ಲಿ ಪೊಲೀಸರು ಎಮ್ಮೆಗಳ ಮೇಲೆ ಗಸ್ತು ತಿರುಗುತ್ತಾರೆ.

ಡಿಫರೆಂಟ್​ ಪೊಲೀಸ್ ವ್ಯವಸ್ಥೆ

ಬ್ರೆಜಿಲ್​ನ ಪೊಲೀಸರು ಉತ್ತರ ರಾಜ್ಯವಾದ ಪಾರ್‌ನಲ್ಲಿರುವ ಮರಾಜೋ ದ್ವೀಪದಲ್ಲಿ ಎಮ್ಮೆಗಳ ಮೇಲೆ ಗಸ್ತು ತಿರುಗುತ್ತಾರೆ. ಬ್ರೆಜಿಲ್​ನ ಉತ್ತ ಭಾಗದಲ್ಲಿ ಅಮೆಜಾನ್ ನದಿಯು ಅಟ್ಲಾಂಟಿಕ್ ಸಾಗರ ಸೇರುವ ದಡದಲ್ಲಿರುವ ಮರಾಜೋ ದ್ವೀಪ ವಿಶಿಷ್ಟವಾದ ಪೊಲೀಸ್ ವ್ಯವಸ್ಥೆಯಿಂದ ವಿಶ್ವದ ಗಮನ ಸೆಳೆದಿದೆ.

ಇದನ್ನೂ ಓದಿ: ‘ಹೆದ್ದಾರಿ ಕಳ್ಳರ’ ಕೈಚಳಕ.. ಕಾರು ಅಡ್ಡಗಟ್ಟಿ 1 ಕೋಟಿ ನಗದು, 350KG ಬೆಳ್ಳಿ ಗಟ್ಟಿ ದೋಚಿ ಪರಾರಿ

ಮರಾಜೋ ದ್ವೀಪದ ರಾಜಧಾನಿ ಸೌರೆಯಲ್ಲಿ 8ನೇ ಮಿಲಿಟರಿ ಪೊಲೀಸ್ ಬೆಟಾಲಿಯನ್ ಇದೆ. ಸೌರೆ ನಗರದಲ್ಲಿ 25 ಸಾವಿರ ಜನಸಂಖ್ಯೆ ಇದ್ದು 200 ಮಿಲಿಟರಿ ಪೊಲೀಸ್ ಅಧಿಕಾರಿಗಳಿದ್ದಾರೆ. ಇಲ್ಲಿನ ಪೊಲೀಸರು ಗಸ್ತು ತಿರುಗಲು ಬೈಕ್​ಗಳ ಜೊತೆಗೆ ಎಮ್ಮೆಗಳನ್ನೂ ಬಳಸುತ್ತಾರೆ.

ಎಮ್ಮೆಗಳ ಮೇಲೆ ಗಸ್ತು ತಿರುಗಾಟ

ಎಮ್ಮೆಗಳ ಮೇಲೆ ಗಸ್ತು ” ಬಫಲೋ ಸೋಲ್ಜರ್ಸ್ ಆಫ್ ಮರಾಜೋ’’ ಬ್ರೆಜಿಲ್​ನ ಮಿಲಿಟರಿ ಪೊಲೀಸರ ಒಂದು ಘಟಕವಾಗಿದ್ದು ವಿಶೇಷವಾಗಿ ಅಳವಡಿಸಿರುವ ಆಸನಗಳೊಂದಿಗೆ ಎಮ್ಮೆಗಳ ಮೇಲೆ ಗಸ್ತು ತಿರುಗುತ್ತಾರೆ.

ಇದನ್ನೂ ಓದಿ: ಮಳೆ ಆರ್ಭಟ.. 170ಕ್ಕೆ ಏರಿಕೆಯಾದ ಸಾವಿನ ಸಂಖ್ಯೆ, 64 ಮಂದಿ ನಾಪತ್ತೆ

ಮರಾಜೋ ದ್ವೀಪವು ಚೌಗು ಪ್ರದೇಶವಾಗಿದ್ದು ಅಂದರೆ ಹೆಚ್ಚಾಗಿ ನೀರಿನಿಂದ ಕೂಡಿರುವ, ಕೆಸರಿನಿಂದ ಕೂಡಿರುವ ಭೂಮಿ. ಇಲ್ಲಿ ಇತರ ಸಾರಿಗೆ ವ್ಯವಸ್ಥೆ ಪರಿಸರಕ್ಕೆ ಹೊಂದಿಕೆ ಆಗದ ಕಾರಣ ಈ ದ್ವೀಪದಲ್ಲಿ ಪೊಲೀಸರು ಗಸ್ತು ತಿರುಗಲು ಎಮ್ಮೆಗಳನ್ನೇ ಬಳಸುತ್ತಾರೆ. ಅಲ್ಲದೇ ಈ ದ್ವೀಪದ ಪರಿಸರಕ್ಕೆ ಕುದುರೆಗಳು, ಇತರ ವಾಹನಗಳಿಗಿಂತ ಎಮ್ಮೆಗಳ ಮೇಲೆಯೇ ಗಸ್ತು ತಿರುಗುವುದು ಹೆಚ್ಚಿನ ಪ್ರಯೋಜನಕಾರಿ.

ಎಮ್ಮೆ ನಿನಗೆ ಸಾಟಿ ಇಲ್ಲ

ಭಾರತ, ಆಗ್ನೇಯ ಏಷ್ಯಾಕ್ಕೆ ಸ್ಥಳೀಯ ಪ್ರಾಣಿಯಾಗಿರುವ ಎಮ್ಮೆಗಳು ಮರಾಜೋ ದ್ವೀಪದ ಸಂಸ್ಕೃತಿ, ಆರ್ಥಿಕತೆಯಲ್ಲೂ ಆಳವಾಗಿ ಬೆರೆತುಹೋಗಿವೆ. ಎಮ್ಮೆಗಳನ್ನು ರೈತರು ಸಹ ವ್ಯವಸಾಯದಲ್ಲಿ ಬಳಸಿಕೊಳ್ಳುತ್ತಾರೆ. ಹೋಟೆಲ್​ನ ಮೆನುವಿನಲ್ಲೂ ಭಕ್ಷ್ಯಗಳಾಗಿ ಸೇರ್ಪಡೆಯಾಗಿವೆ.

ಎಮ್ಮೆಗಳ ನಿಯಂತ್ರಿಸುವುದು ಸವಾಲಿನ ಕೆಲಸವಾಗಿದ್ದು ಅಧಿಕಾರಿಗಳಿಗೆ ಈ ಬಗ್ಗೆ ತರಬೇತಿಯನ್ನೂ ನೀಡಲಾಗುತ್ತದೆ. ಎಮ್ಮೆಗಳ ಮೇಲೆ ಪೊಲೀಸರ ಗಸ್ತು ಈ ದ್ವೀಪದ ಗುರುತು ಕೂಡ ಆಗಿದ್ದು, ಪ್ರವಾಸಿಗರ ಆಕರ್ಷಣೆಗೂ ಕಾರಣವಾಗಿದೆ.

-ವಿಶ್ವನಾಥ್ ಜಿ. ಹಿರಿಯ ಕಾಪಿ ಎಡಿಟರ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದೇ ಒಂದು ಮಿಸ್ ಕಾಲ್​ ಸಾಕು.. ಇಲ್ಲಿ ಎಮ್ಮೆಗಳ ಮೇಲೆ ಯಮರಾಜನಲ್ಲ, ಪೊಲೀಸ್​​ ಬರ್ತಾರೆ!

https://newsfirstlive.com/wp-content/uploads/2024/09/morajo-police.jpg

Load More