ಅಪ್ಪನ ಕಳೇಬರ ಹೊತ್ತು ಠಾಣೆಗೆ ಬಂದ ಪೊಲೀಸ್ ಇನ್ಸ್​​ಪೆಕ್ಟರ್.. ಚಿಕ್ಕೋಡಿಯಲ್ಲಿ ಹೃದಯ ವಿದ್ರಾವಕ ಘಟನೆ!

author-image
Veena Gangani
Updated On
ಅಪ್ಪನ ಕಳೇಬರ ಹೊತ್ತು ಠಾಣೆಗೆ ಬಂದ ಪೊಲೀಸ್ ಇನ್ಸ್​​ಪೆಕ್ಟರ್.. ಚಿಕ್ಕೋಡಿಯಲ್ಲಿ ಹೃದಯ ವಿದ್ರಾವಕ ಘಟನೆ!
Advertisment
  • ತಮ್ಮದೇ ಅಧಿಕಾರಿ ಮುಂದೆ ನ್ಯಾಯಕ್ಕಾಗಿ ಪೊಲೀಸ್ ಕಣ್ಣೀರು
  • ಪೊಲೀಸ್ ಇನ್ಸ್​ಪೆಕ್ಟರ್ ಮಾಡಿದ ಗಂಭೀರ ಆರೋಪ ಏನು?
  • ಅಪ್ಪನ ನಿಧನಕ್ಕೆ ನ್ಯಾಯ ಒದಗಿಸಿಕೊಡಿ ಎಂದು ಅಧಿಕಾರಿ ಆಗ್ರಹ

ಚಿಕ್ಕೋಡಿ: ಪೊಲೀಸ್ ಇನ್ಸ್​ಪೆಕ್ಟರ್ ಒಬ್ಬರು​ ಜೀವ ಕಳೆದುಕೊಂಡ ತಂದೆಯ ಕಳೆಬರವನ್ನು ಠಾಣೆ ಮುಂದೆ ತಂದಿಟ್ಟು ನ್ಯಾಯಕ್ಕಾಗಿ ಪ್ರತಿಭಟಿಸಿದ್ದಾರೆ. ಅಶೋಕ ಸದಲಗಿ, ತಂದೆಯ ನಿಧನಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ ಇನ್ಸ್‌ಪೆಕ್ಟರ್.

publive-image

ಆಗಿದ್ದೇನು..?

ಅಶೋಕ ಸದಲಗಿ ರಾಯಚೂರು ಪೊಲೀಸ್ ಠಾಣೆಯ ಅಧಿಕಾರಿ. ಇವರ ಮೂಲ ಊರು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ. ಅಧಿಕಾರಿ ಅಶೋಕ್ ಅವರು ಹಾರೂಗೇರಿ ಪೊಲೀಸ್ ಠಾಣೆ PSI ಮಾಳಪ್ಪ ಪೂಜಾರಿ ವಿರುದ್ಧ ಆರೋಪ ಮಾಡಿದ್ದಾರೆ. ಮಾಳಪ್ಪ ಪೂಜಾರಿ ನೀಡಿದ ಕಿರುಕುಳದಿಂದ ನಮ್ಮ ತಂದೆ ಅಣ್ಣಪ್ಪ ಸದಲಗಿ ಜೀವ ಕಳೆದುಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.

publive-image

ಪ್ರಕರಣ ಏನು..?

ಅಶೋಕ ಸದಲಗಿ ಹಾಗೂ ಸದಾಶಿವ ರಡೆರಟ್ಟಿ ಕುಟುಂಬದ ನಡುವೆ ಗ್ರಾಮದಲ್ಲಿ 2 ಎಕರೆ 5 ಗುಂಟೆ ಜಾಗದ ವ್ಯಾಜ್ಯವಿತ್ತು. ಅಶೋಕ ಸದಲಗಿ ಮಾಡಿರುವ ಆರೋಪದಂತೆ.. ‘ಜನವರಿ 10 ರಂದು ಬಾಬು ನಡೋಣಿ, ಪ್ರತಾಪ್ ಹರೋಲಿ, ವಸಂತ ಚೌಗಲಾ ಹಾಗು ಇತರರು ಜಮೀನಿಗೆ ಅಕ್ರಮವಾಗಿ ಪ್ರವೇಶ ಮಾಡಿದೆ. ಇದನ್ನ ನಮ್ಮ ತಂದೆ ಪ್ರಶ್ನೆ ಮಾಡಿದ್ದಾರೆ. ಆಗ ತಂದೆ ಮೇಲೆ ಗ್ಯಾಂಗ್ ಹಲ್ಲೆ ಮಾಡಿದೆ. ನಂತರ ನಮ್ಮ ತಂದೆ 112ಗೆ ಕರೆ ಮಾಡಿ ಪೊಲೀಸರನ್ನ ಕರೆಸಿದ್ದಾರೆ. ಸ್ಥಳಕ್ಕೆ ಬಂದಿದ್ದ ಪೊಲೀಸರು ನಮ್ಮ ತಂದೆ ಹಾಗೂ ಬಾಬು ನಡೋಣಿ ಮತ್ತು ಇತರರನ್ನು ಠಾಣೆಗೆ ಕರೆದೊಯ್ದಿದ್ದರು. ತಂದೆ ಅಣ್ಣಪ್ಪಗೆ ಪೊಲೀಸರು ಕಿರುಕುಳ ನೀಡಿದ್ದಾರೆ. ಇಡೀ ದಿನ ಠಾಣೆಯಲ್ಲಿ ಕೂರಿಸಿಕೊಂಡು ಕೊಡಬಾರದ ಶಿಕ್ಷೆ ನೀಡಿದ್ದಾರೆ. ಸಂಜೆ ಆಗ್ತಿದ್ದಂತೆ ತಂದೆಗೆ ಹೈಬಿಪಿ ಮತ್ತು ಶುಗರ್ ಹೈ ಹೆಚ್ಚಾಗಿ ಅಸ್ವಸ್ಥಗೊಂಡಿದ್ದಾರೆ. ಆಗ ನನ್ನ ಇನ್ನೊಬ್ಬ ಸಹೋದರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ಓದಿ:10, 20 ಕೋಟಿ ಅಲ್ಲವೇ ಅಲ್ಲ.. ಧನಶ್ರೀಗೆ ಚಹಾಲ್ ಕೊಟ್ರಂತೆ ಕೋಟಿ ಕೋಟಿ ಹಣ..!

ಸುದ್ದಿ ಗೊತ್ತಾಗುತ್ತಿದ್ದಂತೆಯೇ ನಾನು ಎಫ್​ಐಆರ್ ದಾಖಲಿಸಿಕೊಳ್ಳುವಂತೆ ಠಾಣೆಗೆ ಮನವಿ ಮಾಡಿಕೊಂಡೆ. ಪಿಎಸ್ಐ, ಸಿಪಿಐ ಅಥಣಿ ಡಿವೈಎಸ್‌ಪಿಗೆ ಕರೆ ಮಾಡಿ ಮನವಿ ಮಾಡಿದೆ. ಇಷ್ಟಾದರೂ ದೂರು ದಾಖಲಿಸಿಕೊಳ್ಳಲಿಲ್ಲ. ಅಕ್ರಮವಾಗಿ ಜಮೀನು ಪ್ರವೇಶ ಮಾಡಿರುವ ಬಗ್ಗೆಯೂ ದೂರು ನೀಡಲಾಗಿತ್ತು. ಆದರೆ ಪಿಎಸ್ಐ ಮಾಳಪ್ಪ ನನ್ನ ಸಹೋದರನ ವಿರುದ್ಧ ಫೆಬ್ರವರಿ 2ರಂದು ಅಟ್ರಾಸಿಟಿ ಕೇಸ್ ದಾಖಲಿಸಿದ್ದಾರೆ. ಜನವರಿ 10 ರಿಂದ ಚಿಕಿತ್ಸೆ ಪಡೆಯುತ್ತಿದ್ದ ತಂದೆ ಇಂದು ಉಸಿರು ಬಿಟ್ಟಿದ್ದಾರೆ. ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಅಣ್ಣಪ್ಪ ಚಿಕಿತ್ಸೆ ಫಲಕಾರಿಯಾಗದೇ ಜೀವ ಬಿಟ್ಟಿದ್ದಾರೆ. ಅಪ್ಪನ ನಿಧನಕ್ಕೆ ನ್ಯಾಯ ಒದಗಿಸಿಕೊಡಿ ಎಂದು ಅಶೋಕ್ ಸದಲಗ ಆಗ್ರಹಿಸಿದ್ದಾರೆ. ಅಲ್ಲದೇ ಆಸ್ಪತ್ರೆಯಿಂದ ಕಳೆಬರವನ್ನು ನೇರವಾಗಿ ಹಾರೂಗೇರಿ ಠಾಣೆ ಮುಂದಿಟ್ಟು ಪ್ರತಿಭಟನೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment