/newsfirstlive-kannada/media/post_attachments/wp-content/uploads/2024/06/DARHSHAN_JAIL.jpg)
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಌಂಡ್ ಗ್ಯಾಂಗ್ ಜೈಲು ಸೇರಿದೆ. ಇತ್ತ ನ್ಯಾಯಕ್ಕಾಗಿ ರೇಣುಕಾಸ್ವಾಮಿಯ ಕುಟುಂಬ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದಾರೆ. ಸಿದ್ದರಾಮಯ್ಯ ದುಃಖತಪ್ತ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ. ಈ ನಡುವೆ ದರ್ಶನ್ ಹಾಗೂ ಪ್ರದೋಶ್ ಪಿಸ್ತೂಲ್ ವಿಚಾರ ಹೊರಬಿದ್ದಿದೆ.
ಪರಪ್ಪನ ಪಂಜರದೊಳಗೆ ದರ್ಶನ್, 5ನೇ ದಿನದ ಜೈಲು ವಾಸ
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪರಪ್ಪನ ಅಗ್ರಹಾರದ ಪಾಲಾಗಿರುವ ನಟ ದರ್ಶನ್ 4ನೇ ದಿನವನ್ನು ಜೈಲಿನಲ್ಲಿ ಕಳೆದಿದ್ದು, 5ನೇ ದಿನಕ್ಕೆ ಕಾಲಿಟ್ಟಿದ್ದಾರೆ. ಐಷಾರಾಮಿ ಜೀವನದಲ್ಲಿ ಮುಳುಗಿದ್ದ ನಟ ಈಗ ಸಾಮಾನ್ಯ ಕೈದಿಯಂತೆ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾರೆ. ಒಂದೇ ಸೆಲ್ನಲ್ಲಿ ದರ್ಶನ್ ಜೊತೆ ವಿನಯ್ ಇದ್ರೂ ದರ್ಶನ್ ಯಾವೊಂದು ಮಾತೂ ಆಡದೆ ಮೌನಕ್ಕ ಜಾರಿದ್ದಾರಂತೆ. ಇನ್ನು ಹೆಂಡ್ತಿ ವಿಜಯಲಕ್ಷ್ಮಿ ಮಗ ವಿನೀಶ್ ಬಂದು ಹೋದ ಮೇಲಂತೂ ಗಾಢ ಯೋಚನೆಯಲ್ಲಿ ಮುಳುಗಿದ್ದಾರಂತೆ.
ದರ್ಶನ್ ಬಳಿ 2 ಯುಎಸ್ ಮೇಡ್, ಪ್ರದೋಷ್ ಬಳಿ 1 ಪಿಸ್ತೂಲ್
ಜೈಲಿನಲ್ಲಿರೋ ದರ್ಶನ್ಗೆ ಮತ್ತೊಂದು ತಲೆ ನೋವು ಶುರುವಾಗುವ ಸಾಧ್ಯತೆ ಇದೆ. ಅದೇನಪ್ಪಾ ಅಂದ್ರೆ, ನಟ ದರ್ಶನ್ ಬಳಿ 2 ಯುಎಸ್ ಮೇಡ್ ಪಿಸ್ತೂಲ್ಗಳಿವೆ. ಪ್ರದೋಷ್ ಬಳಿ ಒಂದು ಲೈಸೆನ್ಸ್ ಪಿಸ್ತೂಲ್ ಇದೆ. ಕಳೆದ ಲೋಕಸಭಾ ಚುನಾವಣಾ ವೇಳೆ ಲೈಸೆನ್ಸ್ ಪಡೆದಿರುವ ಎಲ್ಲ ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸಬೇಕಿತ್ತು. ಗಣ್ಯರಿಗೆ ನೀಡುವ ಶಸ್ತ್ರಾಸ್ತ್ರ ಠೇವಣಿ ವಿನಾಯಿತಿಯಲ್ಲಿ ನಟ ದರ್ಶನ್ ಮತ್ತು ಪ್ರದೋಷ್ಗೆ ಕೂಡ ಅವಕಾಶ ನೀಡಿದ್ರು. ಇನ್ನೂ ಕೊಲೆ ಕೇಸ್ ಎದುರಿಸುತ್ತಿರುವ ಕಾರಣ ಸದ್ಯ ಪ್ರದೋಷ್ ವಾಸವಿರೋ ಗಿರಿನಗರ ಠಾಣೆ ಹಾಗೂ ದರ್ಶನ್ ವಾಸವಿರೋ ಆರ್.ಆರ್.ನಗರ ಠಾಣಾಧಿಕಾರಿಗಳಿಗೆ ಶಸ್ತ್ರ ವಶಪಡಿಸಿಕೊಳ್ಳಲು ಸೂಚನೆ ನೀಡಲಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ತನಿಖಾಧಿಕಾರಿಗಳಿಂದ 2 ಠಾಣೆ ಪೊಲೀಸ್ ಇನ್ಸ್ಪೆಕ್ಟರ್ಗಳಿಗೆ ಸೂಚಿಸಲಾಗಿದೆ.
ಸಿದ್ದರಾಮಯ್ಯರನ್ನ ಭೇಟಿಯಾದ ರೇಣುಕಾಸ್ವಾಮಿಯ ತಂದೆ-ತಾಯಿ
ಮೃತ ರೇಣುಕಾಸ್ವಾಮಿಯ ತಂದೆ-ತಾಯಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನ ಕಾವೇರಿ ನಿವಾಸದಲ್ಲಿ ಭೇಟಿಯಾದ್ರು. ಮಗನನ್ನು ಕಳೆದುಕೊಂಡು ಅಪಾರ ದುಃಖದಲ್ಲಿರುವ ಹಿರಿಯ ಜೀವಗಳನ್ನು ಮುಖ್ಯಮಂತ್ರಿ ಸಂತೈಸಿ ಸಮಾಧಾನದ ಮಾತುಗಳನ್ನು ಹೇಳಿದ್ದಾರೆ. ಇನ್ನೂ ರೇಣುಕಾಸ್ವಾಮಿ ಕುಟುಂಬದ ಪರಿಸ್ಥತಿ ಬಗ್ಗೆ ತಿಳಿದುಕೊಂಡ ಸಿಎಂ, ಪತ್ನಿ ಈಗ ಗರ್ಭಿಣಿ. ಹೀಗಾಗಿ ರೇಣುಕಾಸ್ವಾಮಿಯ ಪತ್ನಿಗೆ ಒಂದು ಸರ್ಕಾರಿ ನೌಕರಿ ನೀಡುವ ಬಗ್ಗೆ ಸಿಎಂ ಸಹಕಾರ ಕೊಡುವುದಾಗಿ ಹೇಳಿದ್ದಾರೆ.
‘ನೌಕರಿ ಕೇಳಿದ್ವಿ’
ಅವರಿಗೆ ಶಿಕ್ಷೆ ಆಗೇ ಆಗುತ್ತದೆ. ನಮ್ಮ ಸೊಸೆಗೆ ಅನುಕಂಪದ ಆಧಾರದ ಮೇಲೆ ಖಾಯಂ ನೌಕರಿಯನ್ನು ಕೇಳಿದ್ದೇವೆ. ಆಯಿತು ನಿಮ್ಮ ಡಾಕುಮೆಂಟ್ಸ್ ಎಲ್ಲ ಕಳಿಸಿ. ಅದಕ್ಕೆ ಮುಂದಿನ ಕೆಲಸಗಳನ್ನು ನಾವು ಮಾಡುತ್ತೇವೆ ಎಂದು ಸಿಎಂ ಹೇಳಿದ್ದಾರೆ. ಸಕಾರಾತ್ಮಕವಾಗಿ ಸಿಎಂ ಸ್ಪಂದಿಸಿದ್ದಾರೆ.
ಶಿವನಗೌಡ, ರೇಣುಕಾಸ್ವಾಮಿ ತಂದೆ
‘ಸಿಎಂ ಭರವಸೆ ಕೊಟ್ಟಿದ್ದಾರೆ’
ಏನು ಅನುಮಾನ ಇಟ್ಟುಕೊಳ್ಳಬೇಡಿ. ಎಲ್ಲವನ್ನು ನಾವು ನೋಡಿಕೊಳ್ಳುತ್ತೇವೆ. ನಮ್ಮ ಮೇಲೆ ಭರವಸೆ ಇಡಿ. ಪ್ರಕರಣದಲ್ಲಿ ಯಾರು ಶಾಮೀಲು ಆಗಲ್ಲ. ಅವರಿಗೆ ಜೈಲು ಆಗೇ ಆಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಘಂಟಾಘೋಷವಾಗಿ ಭರವಸೆ ಕೊಟ್ಟಿದ್ದಾರೆ.
ಮಲ್ಲಿಕಾರ್ಜುನಯ್ಯ, ಜಂಗಮ ಮುಖಂಡರು
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್.. ಕಣ್ಣೀರಿಟ್ಟ ಹೆತ್ತವರಿಗೆ ಸಿಎಂ ನ್ಯಾಯದ ಭರವಸೆ; ಏನಂದ್ರು?
ಚಿತ್ರದುರ್ಗದಲ್ಲಿ ಮಗ ರೇಣುಕಾಸ್ವಾಮಿಯನ್ನ ಕಳೆದುಕೊಂಡು ಪೋಷಕರು ತೀವ್ರ ದುಃಖದಲ್ಲಿದ್ದಾರೆ. ಇತ್ತ ಬೆಂಗಳೂರಿನಲ್ಲಿ ಪೋಷಕರಿಲ್ಲದೆ ದರ್ಶನ್ ಮತ್ತು ಪವಿತ್ರಾಗೌಡ ಮಕ್ಕಳು ಕೂಡ ನೋವಿನಲ್ಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ