/newsfirstlive-kannada/media/post_attachments/wp-content/uploads/2025/07/hosakote-biriyani.jpg)
ಈ ಮೊದಲು ಪಲಾವ್ ಸಖತ್ ಟ್ರೆಂಡ್ ಸೃಷ್ಟಿಸಿತ್ತು. ಈಗ ಬಿರಿಯಾನಿ ಟ್ರೆಂಡ್. ಹೀಗಾಗಿಯೇ ಬಿರಿಯಾನಿ ಹೋಟೆಲ್‌ಗಳು ಲೆಕ್ಕಕ್ಕೆ ಸಿಗದಷ್ಟಿವೆ. ಪ್ರತಿ ಏರಿಯಾದಲ್ಲೂ ಸಿಕ್ಕಾಪಟ್ಟೆ ಇವೆ. ಎಷ್ಟೇ ಅಂಗಡಿಯಿದ್ದರೂ ಹೊಸಕೋಟೆ ಬಿರಿಯಾನಿಗೆ ಸಪರೇಟ್ ಫ್ಯಾನ್ಸ್ ಇದ್ದಾರೆ ಅಂದ್ರೆ ತಪ್ಪಾಗೋಲ್ಲ.
/newsfirstlive-kannada/media/post_attachments/wp-content/uploads/2025/07/hosakote-biriyani2.jpg)
ಇಷ್ಟು ದಿನ ಹೊಸಕೋಟೆ ಬಿರಿಯಾನಿ ಟೆಸ್ಟ್, ಜನ ಸಾಗರದ ಬಗ್ಗೆ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈ ಬಿರಿಯಾನಿಯನ್ನು ತಿನ್ನಬೇಕು ಅಂತ ದೂರ ದೂರದಿಂದ ಜನರು ಬರುತ್ತಾ ಇದ್ದರು. ಆದರೆ ಇದೀಗ ಹೊಸಕೋಟೆ ಬಿರಿಯಾನಿ ಮಾಲೀಕರಿಗೆ ಪೊಲೀಸರು ಖಡಕ್ ಸೂಚನೆ ಕೊಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2025/07/hosakote-biriyani1.jpg)
ಇಷ್ಟು ದಿನ ಬೆಳಗಿನ ಜಾವ 4 ಗಂಟೆಗೆ ಓಪನ್​ ಆಗುತ್ತಿದ್ದ ಹೊಸಕೋಟೆ ಬಿರಿಯಾನಿ ಪ್ರಿಯರಿಗೆ ಶಾಕ್ ಎದುರಾಗಿದೆ. ಇನ್ಮುಂದೆ ಬೆಳ್ಳಂ ಬೆಳಗ್ಗೆ ಹೊಸಕೋಟೆ ಬಿರಿಯಾನಿ ಸಿಗೋದಿಲ್ಲ. ಏಕೆಂದರೆ ಬಿರಿಯಾನಿ ತಿನ್ನಲು ಜನರು ಮಧ್ಯರಾತ್ರಿ ಅತಿವೇಗವಾಗಿ ಚಾಲನೆ ಮಾಡಿಕೊಂಡು ಬರುತ್ತಿದ್ದಾರೆ. ಇದರಿಂದ ಅಪಘಾತಗಳ ಕೇಸ್ ಹೆಚ್ಚಾಗುತ್ತಿವೆ. ಹೀಗಾಗಿ 4 ಗಂಟೆಗೆ ಓಪನ್​ ಆಗುವ ಬಿರಿಯಾನಿಗೆ ಕಡಿವಾಣ ಹಾಕೋದಕ್ಕೆ ಪೊಲೀಸರ ಮುಂದಾಗಿದ್ದಾರೆ. 4 ಗಂಟೆಯ ಬದಲಾಗಿ 6ರ ನಂತರ ಹೋಟೆಲ್ ಓಪನ್​ ಮಾಡಲು ಹೊಸಕೋಟೆ ಭಾಗದ ಹೋಟೆಲ್ ಮಾಲೀಕರಿಗೆ ಪೊಲೀಸರು ಸೂಚನೆ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us