newsfirstkannada.com

42 ಕೋಟಿ ರೂಪಾಯಿ ಮೌಲ್ಯದ ಡ್ರಗ್ ದಂಧೆ; ಸಬ್​ ಇನ್​ಸ್ಪೆಕ್ಟರ್ ಅರೆಸ್ಟ್​

Share :

Published March 3, 2024 at 9:21am

    42 ಕೆಜಿ ಡ್ರಗ್​.. 42 ಕೋಟಿ ಮೌಲ್ಯ ಅಂದ್ರೆ ನಂಬ್ತೀರಾ?

    ವಿಚಾರಣೆ ವೇಲೆ ಹೊರಬಿತ್ತು ಸಬ್​ ಇನ್​ಸ್ಪೆಕ್ಟರ್ ಕರಾಳ ಮುಖ

    ಡ್ರಗ್​ ಪೆಡ್ಲರ್​ ಬಾಯಿ ಬಿಟ್ಟ ಸತ್ಯ.. ಸಬ್​ ಇನ್​ಸ್ಪೆಕ್ಟರ್ ಕೈಗೆ ಕೋಳ

ಮಹಾರಾಷ್ಟ್ರ: 42 ಕೋಟಿ ಮೌಲ್ಯದ ಡ್ರಗ್ ದಂಧೆಯಲ್ಲಿ ಸಬ್​ ಇನ್​ಸ್ಪೆಕ್ಟರ್ ಕೂಡ​ ಭಾಗಿಯಾಗಿರೋ ಘಟನೆ ಮಹಾರಾಷ್ಟ್ರದ ಪುಣೆಯ ಪಿಂಪ್ರಿ ಚಿಂಚ್​ವಾಡ್​ನಲ್ಲಿ ಬೆಳಕಿಗೆ ಬಂದಿದೆ. ವಿಕಾಸ್​ ಶೆಲ್ಕೆ ಎಂಬ ಸಬ್​ ಇನ್​ಸ್ಪೆಕ್ಟರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್​ ಮಾಡಲಾಗಿದೆ.

ಪಿಂಪ್ರಿ ಚಿಂಚ್​ವಾಡ್​ನ ನಗರ ಪೊಲೀಸ್​ ವೈಭವ್​ ಶಿಂಗಾರೆಯವರು ನಮಾಮಿ ಝಾ ಎಂಬ ಪೆಡ್ಲರ್​ನಿಂದ 42 ಕೋಟಿ ಮೌಲ್ಯದ 42 ಕೆಜಿ ಎಂಡಿ ಡ್ರಗ್​ ಅನ್ನು ಶುಕ್ರವಾರ ವಶಪಡಿಸಿಕೊಂಡಿದ್ದರು. ಬಳಿಕ ಆತನನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಪ್ರಕರಣದಲ್ಲಿ ಸಬ್​ ಇನ್​​ಸ್ಪೆಕ್ಟರ್​​ ಹೆಸರನ್ನು ಡ್ರಗ್​ ಪೆಡ್ಲರ್​ ಬಾಯಿ ಬಿಟ್ಟಿದ್ದಾನೆ.

ನಿಗ್ಡಿ ಪೊಲೀಸ್​ ಠಾಣೆಯಲ್ಲಿ ವಿಕಾಸ್​ ಶಿಲ್ಕೆ ಎಂಬ ಹೆಸರಿನ ಸಬ್​ ಇನ್​ಸ್ಪೆಕ್ಟರ್ ಈ ಕೃತ್ಯದಲ್ಲಿ ಭಾಗಿಯಾಗಿರೋದು ಬೆಳಕಿಗೆ ಬಂದಿದೆ. ಇದೇ ವೇಲೆ ಡ್ರಗ್​ ಪೆಡ್ಲರ್​ನಿಂದ 2.32 ಕೆಜಿ ಮೆಫಾಡ್ರೋನ್​ ಬ್ಯಾಗ್​ ಅನ್ನು ವಶಪಡಿಸಿಕೊಂಡಿದ್ದಾರೆ.

ಡ್ರಗ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಎನ್​ಡಿಪಿಎಸ್​ ಕಾಯ್ಕೆಯಡಿ ಸೆಕ್ಷನ್​ 8(ಸಿ), 21 (ಸಿ) ಮತ್ತು 22 (ಸಿ) ಅಡಿಯಲ್ಲಿ ನಿಗ್ಡಿ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

42 ಕೋಟಿ ರೂಪಾಯಿ ಮೌಲ್ಯದ ಡ್ರಗ್ ದಂಧೆ; ಸಬ್​ ಇನ್​ಸ್ಪೆಕ್ಟರ್ ಅರೆಸ್ಟ್​

https://newsfirstlive.com/wp-content/uploads/2024/02/MUMBAI_POLICE.jpg

Load More