Advertisment

ಸಿಟಿ ರವಿ, ಹೆಬ್ಬಾಳ್ಕರ್ ಪ್ರಕರಣಕ್ಕೆ ಹೊಸ ಟ್ವಿಸ್ಟ್; ಓರ್ವ ಅಧಿಕಾರಿಯ ತಲೆದಂಡ..!

author-image
Ganesh
Updated On
ನನ್ನ ರಾಣಿ ಚೆನ್ನಮ್ಮ ಅಂತಿದ್ರು.. ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಣ್ಣೀರು; ಹೇಳಿದ್ದೇನು?
Advertisment
  • ಲಕ್ಷ್ಮೀ ಹೆಬ್ಬಾಳ್ಕರ್​​ಗೆ ಆಕ್ಷೇಪಾರ್ಹ ಹೇಳಿಕೆ ಕೇಸ್​
  • ಪೊಲೀಸ್ ಅಧಿಕಾರಿ ಅಮಾನತು ಮಾಡಿ ಆದೇಶ
  • ಅಮಾನತಿಗೆ ಕೊಟ್ಟಿರುವ ಕಾರಣಗಳು ಏನೇನು?

ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಸಿಟಿ ರವಿ ಅಶ್ಲೀಲ ಪದ ಬಳಕೆ ಪ್ರಕರಣದಲ್ಲಿ ಓರ್ವ ಅಧಿಕಾರಿಯ ತಲೆದಂಡವಾಗಿದೆ.

Advertisment

ಕರ್ತವ್ಯಲೋಪದಡಿ ಖಾನಾಪುರ ಪೋಲಿಸ್ ಇನ್ಸ್​​ಪೆಕ್ಟರ್  ಮಂಜುನಾಥ್ ಅವರನ್ನು ಅಮಾನತುಗೋಳಿಸಿ ಆದೇಶ ಹೊರಬಿದ್ದಿದೆ. ಬೆಳಗಾವಿ ಉತ್ತರ ವಲಯದ ಐಜಿಪಿ ವಿಕಾಸ್​ ಕುಮಾರ್​ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಸಿಟಿ ರವಿ ಖಾನಾಪುರ ಠಾಣೆಗೆ ಕರೆತಂದ ಕರ್ತವ್ಯ ಲೋಪ, ನಿಷ್ಕಾಳಜಿತನ, ಬೇಜಬ್ದಾರಿತನ ಪ್ರದರ್ಶನ ಆರೋಪ ಹಾಗೂ ಅಪಾಧಿತರನ್ನು ಹೊರತುಪಡಿಸಿ ಠಾಣೆಯೊಳಗೆ ಯಾರನ್ನೂ ಬಿಡದಂತೆ ಆದೇಶ ನೀಡಿದ್ದರೂ ನಿರ್ಲಕ್ಷ್ಯ ವಹಿಸಿದ ಆರೋಪ ಇದೆ. ಈ ಅವಧಿಯಲ್ಲಿ ಬಿಜೆಪಿ ನಾಯಕರು ಸೇರಿ ಎಲ್ಲರನ್ನೂ ಠಾಣೆ ಒಳಗಡೆ ಬಿಟ್ಟಿದ್ದರು. ಮೇಲಾಧಿಕಾರಿಗಳ ಆದೇಶ ಉಲ್ಲಂಘನೆ ಆರೋಪದಡಿ ಇನ್ಸ್​​ಪೆಕ್ಟರ್​ ಅವರನ್ನು ಅಮಾನತು ಮಾಡಲಾಗಿದೆ.

ಇದನ್ನೂ ಓದಿ:ಸಂಚಲನ ಸೃಷ್ಟಿಸಿದ ಶಮಿ-ಸಾನಿಯಾ AI ಫೋಟೋ; ನಕಲಿ ಚಿತ್ರ ಪತ್ತೆ ಮಾಡೋದು ಹೇಗೆ..?

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment